Top

ಅರ್ಜೆಂಟೀನಾ ಗೆದ್ದ ಖುಷಿಯಲ್ಲಿ ಆಸ್ಪತ್ರೆ ಸೇರಿದ ಮರಡೋನಾ

ಅರ್ಜೆಂಟೀನಾ ಗೆದ್ದ ಖುಷಿಯಲ್ಲಿ ಆಸ್ಪತ್ರೆ ಸೇರಿದ ಮರಡೋನಾ
X

ಮಾಸ್ಕೊ: ಗೆಲ್ಲಲೇಬೇಕಾದ ಒತ್ತಡದಲ್ಲಿದ್ದ ಅರ್ಜೆಂಟೀನಾ ತಂಡ ಅಂತಿಮ ಲೀಗ್ ಪಂದ್ಯದಲ್ಲಿ ನೈಜಿರಿಯಾ ಗೆಲ್ಲುತ್ತಿದ್ದಂತೆ ಮಾಜಿ ಫುಟ್ಬಾಲ್ ಆಟಗಾರ ಡೀಗೊ ಮರಡೋನಾ ಸಂಭ್ರಮಿಸಿದ ಬೆನ್ನಲ್ಲೇ ಅಸ್ವಸ್ಥಗೊಂಡಿದ್ದರಿಂದ ಕೆಲಕ್ಷಣ ಆತಂಕದ ವಾತಾವರಣ ನಿರ್ಮಾಣವಾಯಿತು.

ಅರ್ಜೆಂಟೀನಾ ಈ ಪಂದ್ಯ ಗೆಲ್ಲದೇ ಇದ್ದರೆ ಲೀಗ್ ಹಂತದಲ್ಲೇ ಹೊರಬೀಳಬೇಕಾದ ಕಠಿಣ ಪರಿಸ್ಥಿತಿಯಲ್ಲಿತ್ತು. ನೈಜಿರಿಯಾ ಆಟಗಾರರು ಹಿನ್ನಡೆ ಹೊರತಾಗಿಯೂ ಉತ್ತಮ ಹೋರಾಟ ನೀಡಿ ಸಮಬಲ ಸಾಧಿಸಿದ್ದರಿಂದ ಪಂದ್ಯ ತೀವ್ರ ಕುತೂಹಲ ಮೂಡಿಸಿತ್ತು. ಆದರೆ ಪಂದ್ಯ ಮುಕ್ತಾಯಕ್ಕೆ ಕೆಲವೇ ನಿಮಿಷ ಬಾಕಿ ಇರುವಾಗ ರೊಕೊ ಬಾರಿಸಿ ರೋಚಕ ಗೆಲುವು ತಂದುಕೊಟ್ಟರು.

ಅರ್ಜೆಂಟೀನಾ ಗೆದ್ದ ಖುಷಿಯಲ್ಲಿ ಅಸಂಬದ್ಧವಾಗಿ ಬೆರಳು ತೋರಿಸಿ ಸಂಭ್ರಮ ಆಚರಿಸಿದ ಡೀಗೊ ಮರಡೋನಾ ಕೆಲವೇ ಹೊತ್ತಿನಲ್ಲಿ ಅಸ್ವಸ್ಥರಾಗಿ ಕುಸಿದು ಬಿದ್ದರು. ಕೂಡಲೇ ವೈದ್ಯರು ಆಗಮಿಸಿ ಚಿಕಿತ್ಸೆ ನೀಡಿದ್ದರಿಂದ ಮರಡೋನಾ ಚೇತರಿಸಿಕೊಂಡರು.

ಅರ್ಜೆಂಟೀನಾಗೆ ವಿಶ್ವಕಪ್ ತಂದುಕೊಟ್ಟ ಮರಡೋನಾ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

Next Story

RELATED STORIES