Top

ಸಾರ್ವಜನಿಕ ಸ್ಥಳದಲ್ಲೇ ಯುವತಿಗೆ ಬೆದರಿಕೆ: ಯುವಕನಿಗೆ ರಸ್ತೆಯಲ್ಲೇ ಥಳಿತ

ಸಾರ್ವಜನಿಕ ಸ್ಥಳದಲ್ಲೇ ಯುವತಿಗೆ ಬೆದರಿಕೆ: ಯುವಕನಿಗೆ ರಸ್ತೆಯಲ್ಲೇ ಥಳಿತ
X

ತುಮಕೂರು : ಅನ್ಯಕೋಮಿನ ಹುಡುಗನೊಬ್ಬ ಯುವತಿಗೆ ಮದುವೆಯಾಗಲು ಯತ್ನಿಸಿ ಒಪ್ಪದಿದ್ದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಇದನ್ನ ಗಮನಿಸಿ ಸಾರ್ವಜನಿಕರು ಯುವಕನನ್ನ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ನಗರದ ಇಮ್ರಾನ್ ಎಂಬ ಯುವಕ ರಮೇಶ್ ಎಂಬ ಹೆಸರಿನೊಂದಿಗೆ ಪರಿಚಯ ಮಾಡಿಕೊಂಡು ವಿಕಲಚೇತನ ಯುವತಿ ಕಲಾಳನ್ನು ಪ್ರೇಮದ ಬಲೆಗೆ ಬಿಳಿಸಿಕೊಂಡಿದ್ದಾನೆ. ಹೀಗೆ ಇಬ್ಬರೂ ನಾಲ್ಕು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದಾರೆ. ಕೆಲ ತಿಂಗಳ ಹಿಂದೆ ಯುವತಿ ಯುವಕನ ಮನೆಗೆ ಹೋದಾಗ ಆತ ಅನ್ಯಕೋಮಿಗೆ ಸೇರಿದವನು ಎಂದು ತಿಳಿದು ಮದುವೆಗೆ ನಿರಾಕರಿಸಿದ್ದಾಳೆ. ಯುವತಿ ಮನೆಯಲ್ಲೂ ಮದುವೆ ತೀವ್ರ ವಿರೋಧವ್ಯಕ್ತವಾಗಿದೆ. ಹಾಗಾಗಿ ಯುವಕ ಇಮ್ರಾನ್ ಮದುವೆಯಾಗದೇ ಇದ್ದರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ.

ಈ ನಡುವೆ ಯುವತಿ ಇಂದು ನಗರದ ಹೋಟೆಲ್ ಒಂದಕ್ಕೆ ಊಟಕ್ಕೆ ಬಂದಾಗ ಯುವಕ ಇಮ್ರಾನ್ ಹಾಗೂ ಆತನ ಸ್ನೇಹಿತೆ ಎನ್ನಲಾದ ಮಂಜುಳಾ ಇಬ್ಬರೂ ಸೇರಿ ದಾಳಿ ನಡೆಸಿದ್ದಾರೆ. ನಡುರಸ್ತೆಯಲ್ಲಿಯೇ ಕಲಾಳನ್ನ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ. ಇವರ ಗಲಾಟೆ ನೋಡಿ ಸುತ್ತುವರಿದ ಜನರು ಕಲಾಳ ರಕ್ಷಣೆ ಮುಂದಾಗಿದ್ದಾರೆ. ಆಗ ಪ್ರೀತಿಸಿ ಮೋಸ ಮಾಡಿದ್ದಾಳೆ. ನನ್ನ ಕೊಲೆಗೆ ಯತ್ನ ಮಾಡಿದ್ಲು ಅಂತೆಲ್ಲಾ ಯುವಕ ಸಾರ್ವಜನಿಕರ ಮುಂದೆ ಅವಲೊತ್ತುಕೊಂಡನು.

ಹಲ್ಲೆಯಿಂದ ನಡುಗುತ್ತಾ ಹೋಟಲ್‌ನ ಮೂಲೆಯಲ್ಲಿ ನಿಂತಿದ್ದ ಅಂಗವಿಕಲ ಯುವತಿಗೆ ಜನರು ಧರ್ಯ ತುಂಬಿದ್ರು. ಅಲ್ಲದೆ ಇನ್ನ ಕಥೆ ಏನೇ ಇದ್ರೂ ಪೊಲೀಸ್ ಠಾಣೆಯಲ್ಲಿ ಬಗೆ ಹರಿಸಿಕೊಳ್ಳಿ ಅಂತಾ ಬುದ್ದಿ ವಾದ ಹೇಳಿ ಮೂವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹೊಸ ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಟಿ.ಯೋಗಿಶ್, ಟಿವಿ5 ತುಮಕೂರು

Next Story

RELATED STORIES