Top

ಇಂಥ ಹೆಂಡತಿ ಬೇಡವೆಂದು ಹರಕೆ ಹೊತ್ತ ಪತಿರಾಯ.!!

ಇಂಥ ಹೆಂಡತಿ ಬೇಡವೆಂದು ಹರಕೆ ಹೊತ್ತ ಪತಿರಾಯ.!!
X

ಚಿಕ್ಕೋಡಿ : ಮಹಿಳೆಯರು ತನ್ನ ಪತಿ ಹಾಗೆ ಇರಲಿ, ಹೀಗೆ ಇರಲಿ, ಚೆನ್ನಾಗಿ ನೋಡಿಕೊಳ್ಳಲಿ. ಹಾಗೇ ಹೀಗೆ ಅಂತ ಕನಸು ಕಾಣುತ್ತಾ, ಸುತ್ತ ಮುತ್ತಲಿನ ದೇವರಿಗೆ ಹರಕೆ ಹೋರುತ್ತಾರೆ. ಪೂಜೆ ಪುರಸ್ಕಾರದಲ್ಲಿ, ವ್ರತ ನೇಮದಲ್ಲಿ ನಿರತರಾಗುತ್ತಾರೆ. ಕೊನೆಗೆ ವಿವಾಹ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಆದ್ರೇ ಚಿಕ್ಕೋಡಿಯಲ್ಲಿ ಪತಿ ಮಹಾಶಯನೊಬ್ಬ, ಇಂತಹ ಪತಿ ಬೇಡ ಅಂತಿದ್ದಾನೆ.

ಹೌದು, ಇಂತಹ ಪತಿ ಬೇಡ. ಗೈಯ್ಯಾಳಿ, ಪದೇ ಪದೇ ವರದಕ್ಷಿಣೆ ಕಿರುಕುಳದ ಕೇಸ್ ಹಾಕ್ತೀನಿ. ಹಾಗೇ ಹೀಗೆ ಅಂತ ಕಾಟ ಕೊಡ್ತಾಳೆ ಎಂದು, ದೇವರ ಮೊರೆ ಹೋಗಿದ್ದಾನೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ನಿವಾಸಿಯಾದ ಶಿಶಿಧರ ಕೋಪಾರ್ಡೆ ಎಂಬುವರೆ ಇಂತಹ ವ್ರತವನ್ನು ಮಾಡುತ್ತಿರುವ ವ್ಯಕ್ತಿಯಾಗಿದ್ದಾರೆ.

ಶಶಿಧರ್ ಕೋರ್ಪಾಡೆ ಕಳೆದ 10 ವರ್ಷಗಳ ಹಿಂದೆ ಜಿಲ್ಲೆಯ ಬೈಲಹೊಂಗಲದ ಈತನ ಪತ್ನಿ ಶಾಂತಾ ಬೊಂಗಾಳೆ ಮಹಿಳೆಯನ್ನು ವಿವಾಹವಾಗಿದ್ದನು. ಕೆಲದಿನಗಳ ಕಾಲ ಸಂಸಾರ ಸುಂದರ ಸಾಗರದಂತೆ ಸಾಗಿತ್ತು. ಆದ್ರೇ, ದಿನ ಕಳೆದಂತೆ, ದಾಂಪತ್ಯದಲ್ಲಿ ವಿರಸ ಉಂಟಾಗಿ, ಹೆಂಡತಿಯೇ ಶಶಿಧರ್ ಕೋರ್ಪಾಡೆ ಮೇಲೆ ವರದಕ್ಷಿಣೆ ಕೇಸ್ ಹಾಕ್ತೀನಿ ಅಂತ ಹೆದರಿಸುತ್ತಾ ಬಂದಳಂತೆ.

ಆನಂತ್ರದ ದಿನಗಳಲ್ಲಿ ಶಶಿಧರ್ ಕೋರ್ಪಾಡೆ ಪತ್ನಿ, ವರದಕ್ಷಿಣೆ ಕೇಸ್ ಹಾಕಿ, ಈತನಿಗೆ ಇದ್ದ ಆಸ್ತಿಯನ್ನು ಕಬಳಿಸಿಕೊಂಡಿದ್ದಾಳೆ. ಇಂಥ ಹೆಂಡತಿ ನನಗೆ ಅಷ್ಟೇ ಅಲ್ಲ ಬೇರೆ ಯಾರಿಗೂ ಸಿಗಬಾರದು. ಮುಂದಿನ ಜನ್ಮದಲ್ಲಿ ನನಗೆ ಮದುವೆ ಆಗುವದು ಬೇಡ ಎಂದು ವಟ ಸಾವಿತ್ರ ವ್ರತವನ್ನು ಮಾಡಿದ್ದಾರೆ. ಈ ಮೂಲಕ ತಮ್ಮ ಕಷ್ಟಕ್ಕೆ ಪರಿಹಾರ ನೀಡಿದ್ದಕ್ಕೆ, ನಮ್ರತೆ ಸಲ್ಲಿಸಿದ್ದಾರೆ.

ಇನ್ನೂ ತನಗೆ ಆದ ಅನ್ಯಾಯ ಬೇರೆ ಯಾರಿಗೂ ಆಗುವದು ಬೇಡ ಎಂದು ಶಶಿಧರ ರಾಜ್ಯದ ಏಕೈಕ ಪುರುಷ ಸಾಂತ್ವಾನ ಕೇಂದ್ರ ಸ್ಥಾಪಿಸಿ, ಪುರುಷರಿಗೆ ಅನ್ಯಾಯ ಆಗದಂತೆ ಕಾನೂನು ಸಲಹೆಗಳನ್ನ ನೀಡುತ್ತಿದ್ದಾರೆ. ಒಟ್ಟಿನಲ್ಲಿ ಕೆಟ್ಟ ಮೇಲೆ ಬುದ್ದಿ ಬಂತು ಅನ್ನೋ ಹಾಗೇ, ಪುರುಷ ಕುಲಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ನಡೆಸುತ್ತಿರುವ ಇವರ ಹೋರಾಟಕ್ಕೆ ಜಯವಾಗಲಿ.

ವರದಿ : ರವೀಂದ್ರ ಚೌಗುಲೆ, ಟಿವಿ5 ಚಿಕ್ಕೋಡಿ

Next Story

RELATED STORIES