Top

ಮಾನವೀಯತೆ ಮರೆತ ಜನ : ಅಪಘಾತಗೊಂಡಿದ್ದ ಮಹಿಳೆ ಸಾವು

ಮಾನವೀಯತೆ ಮರೆತ ಜನ : ಅಪಘಾತಗೊಂಡಿದ್ದ ಮಹಿಳೆ ಸಾವು
X

ವಿಜಯಪುರ : ಬಸ್ ಡಿಕ್ಕಿಯಾಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿರುವ ಮಹಿಳೆಯ ರಕ್ಷಣೆಗೆ ಬರದ ಜನ. ಮಾನವೀಯತೆ ಮರೆತಬಿಟ್ಟರಾ ವಿಜಯಪುರ ನಗರ ಜನ್ರು. ಸರಕಾರಿ ಬಸ್ ಡಿಕ್ಕಿಯಾಗಿದ ರಭಸಕ್ಕೆ ಮಹಿಳೆಯ ರಕ್ತರ ಮಡುವಿನಲ್ಲಿ ಬಿದ್ದರು ನಿಂತು ನೋಡಿದ ಜನ. ಆಸ್ಪತ್ರೆಗೆ ಕರೆದು ಹೋಗುವಷ್ಟರಲ್ಲಿ ಮಹಿಳೆಯ ಸಾವು. ಮಾನವೀಯತೆ ಮರೆಯಾಯಿತಾ.?

ಸಮಯಾ ಬೆಳಿಗ್ಗೆ 8-30 ರ ಸುಮಾರು ವಿಜಯಪುರ ನಗರದ ಬಸವೇಶ್ವರ ವೃತ್ತದ ಬಳಿ ಜನ ಜಂಗುಳಿ ಸೇರಿತ್ತು. ಅಲ್ಲಿ ಅಪಘಾತವೊಂದು ನಡೆದಿತ್ತು. ವಿಜಯಪುರಬಸ್ ಡಿಪೋಗೆ ಸೇರಿದ ಕೆಎ 28 ಎಫ್ 2268 ನಂಬರಿನ ಬಸ್ ರಸ್ತೆಯ ಬದಿ ನಡೆದುಕೊಂಡು ಹೊರಟಿದ್ದ ಮಹಿಳೆಗೆ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ಮಹಿಳೆಯ ತಲೆಗೆ ಪೆಟ್ಟು ಬಿದ್ದಿತ್ತು. ಎರಡೂ ಕಾಲುಗಳು ಬಸ್ ಚಕ್ರಕ್ಕೆ ಸಿಲುಕಿ ನುಜ್ಜು ಗುಜ್ಜಾಗಿದ್ದವು.

ಇಷ್ಟೆಲ್ಲಾ ಆದರೂ ಸಹ ನೆರೆದಿದ್ದ ಯಾರೋಬ್ಬರೂ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಿಲ್ಲಾ. ಆಕೆ ಯಾರೆಂಬುದನ್ನೂ ಸಹ ತಿಳಿದುಕೊಳ್ಳುವ ಪ್ರಯತ್ನ ಮಾಡಲಿಲ್ಲಾ. ಅಪರಿಚಿತ ಮಹಿಳೆಯೆಂದು ಉದಾಸೀನ ಮಾಡಿದರು. ನಂತರ ಒಂದು ಗಂಟೆಗಳ ಕಾಲ ನರಳಾಡಿದ ಗಾಯಾಳು ಮಹಿಳೆಯನ್ನು ಸಂಚಾರಿ ಪೊಲೀಸರು ಆಗಮಿಸಿ ಅಂಬ್ಯುಲೆನ್ಸ್ ನಲ್ಲಿ ಹಾಕಿಕೊಂಡು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡುವ ವೇಳೆ ಫಲಕಾರಿಯಾಗದೇ ಮಹಿಳೆ ಸಾವನ್ನಪ್ಪಿದಳು. ತಲೆಗಹೆ ಪೆಟ್ಟು ಬಿದ್ದ ಕಾರಣ ಹಾಗೂ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾಳೆ ಎಂದು ವೈಧ್ಯರು ಸ್ಪಷ್ಣ ಪಡಿಸಿದ್ದಾರೆ.

ನಂತರ ಜಿಲ್ಲಾಸ್ಪತ್ರೆಗೆ ಮಹಿಳೆಯ ಸಂಬಂಧಿಕರು ಹಾಗೂ ಸಹೋದರು ಆಗಮಸಿದರು. ಆಗ ಮಹಿಳೆಯ ವಿವರ ಲಭ್ಯವಾಯಿತು. ನಗರದ ಶಾ ಪೇಟೆ ಹಾಗೂ ಆಸರ ಗಲ್ಲಿಯ ಸಹೋದರರ ಮನೆಯಲ್ಲಿ ವಾಸ ಮಾಡುತ್ತಿದ್ದಳಂತೆ. ಶಮಶಾದ್ ನದಾಫ್ 47 ಎಂದು ತಿಳಿದು ಬಂದಿದೆ. ಮದುವೆಯಾಗಿದ್ದರೂ ಹಲವಾರು ವರ್ಷಗಳ ಹಿಂದೆ ಪತಿ ಈಕೆಯನ್ನು ಬಿಟ್ಟಿದ್ದಾನಂತೆ. ನಗರದ ಲಾಡ್ಜ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಶಮಶಾದ್ ಇಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟು ಬಂದಿದ್ದಳಂತೆ. ಬಸ್ ಡಿಕ್ಕಿಯಾಗಿ ಗಾಯಗೊಂಡಿದ್ದ ಶಮಶಾದ್ ಳನ್ನು ಸ್ಥಳಿಯರು ತುರ್ತಾಗಿ ಆಸ್ಪತ್ರೆಗೆ ಸಾಗಾಟಡ ಮಾಡಿದ್ದರೆ ಇಂದು ಆಕೆ ಬದುಕುತ್ತಿದ್ದಳು ಎಮದು ಮೃತಳ ಸಂಬಂಧಿಕರು ಸಂಕಟ ಹೊರ ಹಾಕಿದ್ದಾರೆ.

ಯಾರೇ ಅಪಘಾತದಲ್ಲಿ ಗಾಯಗೊಂಡರೂ ಅವರನ್ನು ಸ್ಪಳಿಯ ಆಸ್ಪತ್ರೆಗೆ ದಾಖಲು ಮಾಡಬೇಕು. ಆದರೆ ಇದು ವಿಜಯಪುರ ಜನರಿಗೆ ಅರ್ಥವಾಗಿದೆಯೋ ಇಲ್ಲವೋ ಗೊತ್ತಿಲ್ಲಾ. ಈ ಸಾವು ನ್ಯಾಯವೇ ಎಂದು ಮೃತಳ ಸಂಬಂಧಿಕರು ಮಾತ್ರ ಸಂಕಟ ಹೇಳತೀರದಾಗಿದೆ. ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಶರಣು ಮಸಳಿ, ಟಿವಿ5 ವಿಜಯಪುರ

Next Story

RELATED STORIES