Top

ಮಳೆ ಬಂದ್ರೆ ಈ ಸರ್ಕಾರಿ ಶಾಲೆಗೆ ಮಕ್ಕಳು ಬರೋದಿಲ್ಲ : ಯಾಕೆ ಗೊತ್ತಾ.?

ಮಳೆ ಬಂದ್ರೆ ಈ ಸರ್ಕಾರಿ ಶಾಲೆಗೆ ಮಕ್ಕಳು ಬರೋದಿಲ್ಲ : ಯಾಕೆ ಗೊತ್ತಾ.?
X

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯಲ್ಲಿ ಸರ್ಕಾರಿ ಕನ್ನಡ ಶಾಲೆಗಳೇ ಸ್ಥಿತಿಗತಿ ದುಸ್ತಿತಿಗೆ ತಲುಪಿವೆ. ಮಳೆಗಾಲ ಬಂದ್ರೆ ಸಾಕು ಪೋಷಕರು ಮಕ್ಕಳನ್ನ ಶಾಲೆಗೆ ಬರೋಕೆ ಭಯ ಪಡುವಂತಹ ಸ್ಥಿತಿಯಲ್ಲಿವೆ. ಯಾಕೆಂದ್ರೆ ಸರ್ಕಾರಿ ಶಾಲೆಗಳ ಕಟ್ಟಡಗಳು ಯಾವಾಗ ಕುಸಿದು ಬೀಳುತ್ತೋ ಅನ್ನುವ ಆತಂಕ ಮನೆ ಮಾಡಿದೆ.

ಪ್ರತಿ ವರ್ಷ ಮಳೆಗಾಲ ಬಂದ್ರೆ ಸಾಕು ಸರ್ಕಾರಿ ಶಾಲೆ ಕಟ್ಟಡಗಳ ದುಸ್ತಿತಿ ಬಗ್ಗೆ ಮಾತುಗಳು ಕೇಳಿ ಬರುತ್ತವೆ. ಆದ್ರೆ ಪ್ರತಿ ಬಾರಿಯೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಶಾಲೆ ಕಟ್ಟಡ ದುರಸ್ತಿ ಮಾಡ್ತಿವಿ ಅಂತ ಹೇಳಿ ಹೋದವರು ಮತ್ತೆ ಮಳೆಗಾಲ ಬಂದಾಗ ಪ್ರತ್ಯಕ್ಷವಾಗುತ್ತಾದೆ. ಹೌದು ನೀವು ಹೀಗೆ ನೋಡುತ್ತಿರುವ ದೃಶ್ಯಗಳಲ್ಲಿ ಶಾಲೆಯ ಮೇಲ್ಛಾವಣಿಯ ರೂಪ್ ಕಿತ್ತು ಹೋಗಿದೆ. ಶಾಲೆ ಬಾಗಿಲು, ಕಿಟಕಿಗಳು ಮುರಿದು ಬಿದ್ದಿದೆ. ಅಕ್ಷರ ಜ್ಞಾನ ಮಾಡಬೇಕಿರುವ ಕೊಠಡಿಗಳು ಹಾಳು ಬಿದ್ದಿವೆ. ಈ ನೋಟ ಕಂಡು ಬಂದಿದ್ದು ಯಾವುದೋ ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಅಲ್ಲ.. ಬದಲಾಗಿ ಬೆಳಗಾವಿ ಮಹಾನಗರ ಫುಲಬಾಗ ಗಲ್ಲಿ ಸರ್ಕಾರಿ ಕನ್ನಡ ಶಾಲೆಯದ್ದು.

ಇನ್ನು ಪುಲಬಾಗ ಗಲ್ಲಿ ಸರ್ಕಾರಿ ಶಾಲೆಯಲ್ಲಿ 138ಕ್ಕೂ ಅಧಿಕ ಗಂಡು ಮತ್ತು ಹೆಣ್ಣು ಮಕ್ಕಳು ಓದುತ್ತಿದ್ದಾರೆ. ಅಂದ್ರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಉತ್ತಮವಾಗಿದೆ. 1 ರಿಂದ 8 ತರಗತಿ ಮಕ್ಕಳು ಇಲ್ಲಿ ಒದುತ್ತಾರೆ. ಶಾಲೆಯಲ್ಲಿ ಒಟ್ಟು 14 ಕೊಠಡಿಗಳಿವೆ. ಆದ್ರೆ ಶಾಲೆಯ ಮೊದಲ ಮಹಡಿ ಮೇಲಿರುವ ಎಲ್ಲಾ ಏಳು ಕೊಠಡಿಗಳ ಮೇಲ್ಛಾವಣಿ ಕುಸಿದು ಬಿದ್ದು ನಾಲ್ಕೈದು ವರ್ಷಗಳೇ ಕಳೆದಿದೆ. ಹೀಗಾಗಿ ಉಳಿದ ಏಳು ಕೊಠಿಡಿಯಲ್ಲಿ ಕೇವ ಐದು ಕೊಠಡಿಯಲ್ಲಿ ಮಕ್ಕಳಿಗೆ ಪಾಠ ಮಾಡಲಾಗುತ್ತಾದೆ. ಅಂದ್ರೆ ಒಂದು ಕೊಠಡಿಯಲ್ಲಿ 2 ರಿಂದ 3 ತರಗತಿಯ ಮಕ್ಕಳನ್ನ ಕೂಡಿಸಿ ಪಾಠ ಮಾಡುವಂತಹ ಸ್ಥಿತಿಯಿದೆ. ಇಷ್ಟೇ ಅಲ್ಲದೇ, ಶಾಲೆ ಮೇಲ್ಛಾವಣಿ ದುರಸ್ತಿಗಾಗಿ 4 ರಿಂದ 5 ಲಕ್ಷ ರುಪಾಯಿ ಹಣವೂ ಮಂಜೂರಾಗಿದೆ. ಆದ್ರೆ ಅಧಿಕಾರಿಗಳ ನಿರ್ಲಕ್ಷದಿಂದ ಈವರೆಗೂ ದುರಸ್ತಿ ಕಾಮಗಾರಿಯನ್ನ ಕೈಗೊಂಡಿಲ್ಲ.

ಒಟ್ಟ್ನಲ್ಲಿ ಬೆಳಗಾವಿಯಂತಹ ನಗರದ ಪ್ರದೇಶದಲ್ಲಿನ ಸರ್ಕಾರಿ ಕನ್ನಡ ಶಾಲೆಯನ್ನ ದುರಸ್ತಿ ಮಾಡಲು ಅಧಿಕಾರಿಗಳು ದಿವ್ಯ ನಿರ್ಲಕ್ಷ ತೋರಿಸುತ್ತಿದ್ದಾರೆ. ಇನ್ನಾದ್ರು ಸಂಬಂಧ ಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕನ್ನಡ ಶಾಲೆಗಳ ಕಟ್ಟಡವನ್ನ ದುರಸ್ತಿ ಮಾಡುವ ಕೆಲಸಕ್ಕೆ ಮುಂದಾಗಬೇಕಿದೆ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ

Next Story

RELATED STORIES