Top

ಕೊನೆಗೂ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್.?

ಬೆಂಗಳೂರು : ರಾಜ್ಯ ರಾಜಕಾರಣ, ದಿನಕ್ಕೊಂದು ರೋಚಕ ಚದುರಂಗದಾಟಕ್ಕೆ ಕಾರಣವಾಗುತ್ತಿದೆ. ಸಂಪುಟ ರಚನೆಯ ನಂತ್ರ ಬಂಡಾಯ ಶಮನ ಮಾಡುವಲ್ಲಿ ಯಶಸ್ವಿಯಾಗ ಉಭಯ ಪಕ್ಷದ ನಾಯಕರೂ, ಇದೀಗ ಸಂಪುಟ ಪುನರ್ ರಚನೆಗೆ ಮುಂದಾಗಿದ್ದಾರೆ.

ಎಸ್ ಕಾಂಗ್ರೆಸ್‌ ಬಳಿ ಇರುವ 6, ಜೆಡಿಎಸ್ ಬಳಿ ಇರುವ 1 ಸಚಿವ ಸ್ಥಾನವನ್ನು ಹಂಚಲು ಮುಂದಾಗಿದೆ. ಈ ಸಂಪುಟ ಪುನರ್ ರಚನೆಯ ಪ್ರಕ್ರಿಯೆ ಅಧಿವೇಶನಕ್ಕೂ ಮೊದಲೇ ವಿಸ್ತರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ಕಾಂಗ್ರೆಸ್‌ ತನ್ನ ಬಳಿ ಇರುವ 6 ಸಚಿವ ಸ್ಥಾನಗಳಲ್ಲಿ 5 ಸಚಿವ ಸ್ಥಾನದ ಭರ್ತಿ ಮಾಡಿ, ಒಂದು ಸಚಿವ ಸ್ಥಾನವನ್ನು ಹಾಗೆ ಉಳಿಸಿಕೊಳ್ಳಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಈ ಬಾರಿಯ ಸಂಪುಟ ವಿಸ್ತರಣೆಯಲ್ಲಿ ಲಿಂಗಾಯತ ಸಮುದಾಯದಿಂದ ಎಂ.ಬಿ.ಪಾಟೀಲ್, ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್, ಕುರುಬ ಸಮುದಾಯದಿಂದ ಸಿ ಎಸ್ ಶಿವಳ್ಳಿ, ಎಸ್ಟಿ ಸಮುದಾಯದಿಂದ ಸಂಡೂರಿನ ತುಕಾರಾಂ, ರೆಡ್ಡಿ, ಒಕ್ಕಲಿಗ ಸಮುದಾಯದಿಂದ ರಾಮಲಿಂಗಾರೆಡ್ಡಿ, ಇಲ್ಲವೇ ವಿಜಯನಗರ ಶಾಸಕ ಎಂ ಕೃಷ್ಣಪ್ಪಗೆ ಸಚಿವ ಸ್ಥಾನ ನೀಡಲಾಗುತ್ತದೆ ಎನ್ನಲಾಗಿದೆ.

ಬಿಜೆಪಿ ಪಕ್ಷ ಲೋಕಸಭಾ ಚುನಾವಣೆಗೆ ಎಲ್ಲಿಲ್ಲದ ಕಸರತ್ತು ಆರಂಭಿಸಿದ ಬೆನ್ನಲ್ಲೇ, ಕಾಂಗ್ರೆಸ್‌ ಕೂಡ ಲೋಕಸಭಾ ಚುನಾವಣೆಗೆ ಮುನ್ನಾ ಸಂಪುಟ ವಿಸ್ತರಣೆಯನ್ನು ಮಾಡುವ ಇಂಗಿತ ಸಿಎಂಗೆ ತಿಳಿಸಿದೆ ಎಂದು ಹೇಳಲಾಗಿದೆ. ಇನ್ನೂ ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಪಟ್ಟ ಹೆಚ್.ಕೆ.ಪಾಟೀಲ್‌ ಅವರಿಗೆ ಬಹುತೇಕ ಖಚಿತವೆಂದೂ ಸಹ ಬಲ್ಲ ಮೂಲಗಳಿಂದ ಮಾಹಿತಿ ಇದೆ.

ಒಟ್ಟಾರೆ ಸಮ್ಮಿಶ್ರ ಸರ್ಕಾರದ ಸಂಪುಟ ಪುನರ್ ರಚನೆ, ಅಧಿವೇಶನಕ್ಕೂ ಮೊದಲೇ ನಡೆಯಲಿದೆ. ಈ ಸಂಪುಟದಲ್ಲಿ ಪ್ರಭಾವಿ ನಾಯಕಿಗೆ ಮಣೆ ಹಾಕಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ ಬಳಿ ಬಾಕಿ ಇರುವ 6 ಸ್ಥಾನಗಳು, ಜೆಡಿಎಸ್ ಬಳಿ ಇರುವ 1 ಸ್ಥಾನಗಳ ಮೂಲಕ, ಸಂಪುಟಕ್ಕೆ ಯಾರು ಸೇರ್ಪಡೆಯಾಗುತ್ತಾರೆ ಎಂಬುದನ್ನು ಅಧಿವೇಶನಕ್ಕೂ ಮುನ್ನಾ ದಿನದ ವರೆಗೆ ಕಾದು ನೋಡಬೇಕಿದೆ.

Next Story

RELATED STORIES