Top

ಕುಡಿದ ಅಮಲಿನಲ್ಲಿ ಕಾಂಪೌಂಡ್ ಧ್ವಂಸ

ಕುಡಿದ ಅಮಲಿನಲ್ಲಿ ಕಾಂಪೌಂಡ್ ಧ್ವಂಸ
X

ಮೈಸೂರು: ಕುಡಿದ ಅಮಲಿನಲ್ಲಿದ್ದ ಪುಂಡರು, ಕಾರನ್ನ ಅಡ್ಡಾದಿಡ್ಡಿ ಓಡಿಸಿ, ಐಜಿಪಿ ಮನೆಯ ಕಾಂಪೌಂಡಿಗೆ ಡಿಕ್ಕಿ ಹೊಡೆದ ಪರಿಣಾಮ, ಗೋಡೆ ಕುಸಿದು ಹೋಗಿದೆ.

ಮೈಸೂರಿನ ನಜರಾಬಾದ್‌ನ ಎಸ್.ಪಿ.ಸರ್ಕಲ್ ಬಳಿ ಈ ಘಟನೆ ನಡೆದಿದ್ದು, ಮೈಸೂರಿನ ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ವಿಫುಲ್ ಕುಮಾರ್ ಮನೆಗೆ ಕಾರು ನುಗ್ಗಿದೆ. ಕಾಂಪೌಂಡ್ ನೆಲಸಮಗೊಂಡಿದ್ದು, ಕಾರು ಭಾಗಶಃ ನೆಲಸಮವಾಗಿದೆ. ಮೈಸೂರಿನ ಗಾಂಧಿನಗರ ನಿವಾಸಿಗಳಾದ ಮೂವರು ಯುವಕರಿಂದ ಈ ಎಡವಟ್ಟು ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನೆ ಸಂಭವಿಸಿದ ವೇಳೆ ಐಜಿಪಿ ವಿಫುಲ್ ಕುಮಾರ್ ಮನೆಯಲ್ಲೇ ಇದ್ದರು. ಘಟನೆ ಬಳಿಕ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Next Story

RELATED STORIES