Top

ಚಾಲೆಂಜಿಂಗ್ ಸ್ಟಾರ್ ಸಫಾರಿ: TV5 EXCLUSIVE

ಚಾಲೆಂಜಿಂಗ್ ಸ್ಟಾರ್ ಸಫಾರಿ: TV5 EXCLUSIVE
X

ಮೈಸೂರು: ಪರಿಸರ ಕಾಪಾಡಿ ಎಂದು ಈ ಹಿಂದೆ ನಟ ದರ್ಶನ್ ಜನರಲ್ಲಿ ಜಾಗೃತಿ ಮೂಡಿಸಿದ್ದರು. ಇದೀಗ ಮತ್ತೆ ಪರಿಸರ ಮಾಲಿನ್ಯ ತಡೆಗಟ್ಟಲು ಮತ್ತೊಂದು ಹಜ್ಜೆ ಮುಂದೆ ಹೋಗಿದ್ದಾರೆ ದಚ್ಚು. ಮೈಸೂರಿನಲ್ಲಿ ಇಂದು ಒಂಟಿ ಸಲಗದೊಂದಿಗೆ ಸಮಯ ಕಳೆದಿದ್ದಾರೆ​. ಫುಲ್ ರಿಲ್ಯಾಕ್ಸ್ ಮೂಡ್‌ನಲ್ಲಿರುವ ದರ್ಶನ್, ಮೈಸೂರಿನ ಕಬಿನಿ ಹಿನ್ನೀರಿನ ಅರಣ್ಯದಲ್ಲಿ ಸಫಾರಿ ಮಾಡಿದ್ದಾರೆ.

ಕರ್ನಾಟಕ ಅರಣ್ಯ ಇಲಾಖೆಯ ರಾಯಭಾರಿಯಾಗಿ ಬಾಕ್ಸ್ ಆಫಿಸ್​​ ಸುಲ್ತಾನ್​ ದರ್ಶನ್​, ನಾಗರಹೊಳೆ ಅರಣ್ಯ ನಿರ್ದೇಶಕರು ಸಿ. ಎಫ್​. ರವಿಶಂಕರ್​ ಅವರನ್ನ ಭೇಟಿ ಮಾಡಿ ಎಲ್ಲಾ ಕನ್ನಡಿಗರಿಗೂ ಪ್ಲಾಸ್ಟಿಕ್​ ಬ್ಯಾಗ್​ ಬಳಸದೆ ಪರಿಸರ ಸಂರಕ್ಷಣೆ ಮಾಡಿ ಎಂದು ಕರೆ ನೀಡಿದ್ದಾರೆ.

ಗೆಳೆರೊಂದಿಗೆ ಕಾಡಿನಲ್ಲಿ ಕಾಲಕಳೆಯಲೆಂದು ಬಂದಿರುವ ದರ್ಶನ್, ಸಫಾರಿ ಮಾಡುತ್ತ, ಪ್ರಕೃತಿ ಸೌಂದರ್ಯ ಸವಿಯುತ್ತ,ಕಾಡಿನ ಸೌಂದರ್ಯವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ. ಇನ್ನು ಕಾಡಿನ ಮಕ್ಕಳ ಜೊತೆಯಲ್ಲೂ ಕಾಲಕಳೆದಿರುವ ದಚ್ಚುವಿನ ಎಕ್ಸ್‌ಕ್ಲೂಸಿವ್ ಸಫಾರಿ ಫೋಟೋ TV5ಗೆ ಲಭ್ಯವಾಗಿದೆ.

Next Story

RELATED STORIES