Top

ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ : ಕಣದಲ್ಲಿ ಘಟಾನುಘಟಿಗಳು

ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ : ಕಣದಲ್ಲಿ ಘಟಾನುಘಟಿಗಳು
X

ಬೆಂಗಳೂರು : ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆ ನಡೆಯಲಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷ ಸ್ಥಾನ, ಗೌರವ ಕಾರ್ಯದರ್ಶಿ, ಖಜಾಂಚಿ, ಪದಾಧಿಕಾರಿಗಳು ಸೇರಿದಂತೆ, ಕಾರ್ಯಕಾರಿ ಸಮಿತಿ ಸದಸ್ಯರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಈ ಸಲ ಫಿಲ್ಮ್ ಛೇಂಬರ್‌ನ ಚುನಾವಣೆಯಲ್ಲಿ ಘಟಾನುಘಟಿಗಳು ಸ್ಪರ್ಧಿಸುತ್ತಿದ್ದಾರೆ. ವಾಣಿಜ್ಯ ಮಂಡಳಿಯ ಅಧ್ಯಕ್ಷರ ಸ್ಥಾನಕ್ಕೆ ಸವೇಶ್ವರಿ ಕಂಬೈನ್ಸ್‌ನ ಚಿನ್ನೇಗೌಡ ಹಾಗೂ ಮಾರ್ಸ್ ಸುರೇಶ್ ಸ್ಪರ್ಧೆಯಲ್ಲಿ ಇದ್ದು, ಇಬ್ಬರು ಕೂಡ ಸಾಕಷ್ಟು ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಗುರುತಿಸಿಕೊಂಡವರು. ನಿರ್ಮಾಪಕರ ವಲಯದಿಂದ ಉಪಾಧ್ಯಕ್ಷರ ಸ್ಥಾನಕ್ಕೆ ನಿರ್ಮಾಪಕರಾದ ದಿನೇಶ್ ಗಾಂಧಿ, ಪ್ರಮೀಳಾ ಜೋಷಾಯ್ ಮತ್ತು ಕರಿಸುಬ್ಬು ಕಣದಲ್ಲಿದ್ದು, ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿದೆ.

ಇನ್ನು ವಿತರಕರ ವಲಯದಿಂದ ಕುಟ್ಟಿ ಜಿ.ಕೆ., ಕುಪ್ಪುಸ್ವಾಮಿ, ಬಿ.ಆರ್.ಕೇಶವ, ನಾಗಣ್ಣ, ಕೆ.ಮಂಜು ಕಣದಲ್ಲಿ ಇದ್ದಾರೆ. ಪ್ರದರ್ಶಕರ ವಲಯದಿಂದ ಅಶೋಕ ಥಿಯೇಟರ್ ಮಾಲೀಕ ಅಶೋಕ್ ಈಗಾಗಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವ ಕಾರ್ಯದರ್ಶಿ ಹುದ್ದೆಗೆ ನಿರ್ಮಾಪಕರ ವಲಯದಿಂದ ಎ.ಗಣೇಶ್ ಹಾಗೂ ಭಾ.ಮಾ.ಹರೀಶ್ ಸ್ಪರ್ಧಿಸುತ್ತಿದ್ದಾರೆ.

ಚಾಲೆಂಜಿಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗುದೀಪ್ ಮತ್ತು ನಟಿ ಪೂಜಾಗಾಂಧಿ, ಬಾ ಮಾ ಹರೀಶ್ ಕೂಡ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಥಾಮಸ್ ಡಿಸೋಜಾ ನೇತೃತ್ವದಲ್ಲಿ ನಡೆಯಲಿರೋ ಚುನಾವಣೆಯಲ್ಲಿ ಯಾರ ಕೊರಳಿಗೆ ವಿಜಯದ ಮಾಲೆ ಒಲಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Next Story

RELATED STORIES