Top

ಶ್ರೀಕ್ಷೇತ್ರ ಗಾಣಗಾಪುರ ಪಾದುಕೆ ಸ್ಥಳಾಂತರ ವಿಚಾರ : ಕ್ಯಾರೆ ಅನ್ನದ ಜಿಲ್ಲಾಡಳಿತ

ಶ್ರೀಕ್ಷೇತ್ರ ಗಾಣಗಾಪುರ ಪಾದುಕೆ ಸ್ಥಳಾಂತರ ವಿಚಾರ : ಕ್ಯಾರೆ ಅನ್ನದ ಜಿಲ್ಲಾಡಳಿತ
X

ಕಲಬುರಗಿ : ಶ್ರೀಕ್ಷೇತ್ರ ಗಾಣಗಾಪುರದ ದತ್ತನ ಸನ್ನಿಧಿಯಲ್ಲಿರುವ ಸುವರ್ಣ ಪಾದುಕೆ ಪೂಜೆ ಸ್ಥಳಾಂತರ ಮಾಡುವಂತೆ ಮುಜರಾಯಿ ಇಲಾಖೆ ಕಲಬುರಗಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗ್ತಿರೋ ಹಿನ್ನಲೆಯಲ್ಲಿ ದೇವಸ್ಥಾನದ ಅರ್ಚಕ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿತ್ತು.

ಅದ್ದರಿಂದ ಗರ್ಭಗುಡಿಯಲ್ಲಿನ ನಿರ್ಗುಣ ಪಾದುಕೆಯ ಪಕ್ಕದಲ್ಲಿಯೇ ಸುವರ್ಣ ಪಾದುಕೆ ಪೂಜೆ ನಡೆಯುತ್ತಿದೆ. ಹೀಗಾಗಿ ಭಕ್ತರಿಗೆ ದರ್ಶನ ಪಡೆದು ವಾಪಾಸಾಗಲು ಅನಾನುಕೂಲವಾಗುತ್ತಿದೆ ಅಂತ ಹೇಳಿದ್ರು. ಅರ್ಚಕರ ಮನವಿ ಪುರಸ್ಕರಿಸಿದ ಸರ್ಕಾರ ಕಲಬುರಗಿ ಜಿಲ್ಲಾಡಳಿತಕ್ಕೆ ಈ ಕೂಡಲೇ ಕ್ರಮ ಕೈಗೊಳ್ಳುವಂತೆ ಸುತ್ತೋಲೆ ಹೊರಡಿಸಿತ್ತು. ಆದ್ರೆ ಸರ್ಕಾರದ ಪತ್ರಕ್ಕೆ ಈ ವರೆಗೆ ಜಿಲ್ಲಾಡಳಿತ ಕೇರ್ ಮಾಡದಿರೋದು ಚರ್ಚೆಗೆ ಗ್ರಾಸವಾಗಿದೆ.

Next Story

RELATED STORIES