Top

ಬಾಲ್ಯ ವಿವಾಹ ತಡೆದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು

ಬಾಲ್ಯ ವಿವಾಹ ತಡೆದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು
X

ಬೀದರ್ : ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಕಲವಾಡಿಯಲ್ಲಿ ಬಾಲ್ಯವಿವಾಹ ನಡೆಸಲಾಗುತ್ತಿದ್ದ, ಮದುವೆ ಮೇಲೆ, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ದಾಳಿ ಮಾಡಿ, ಬಾಲ್ಯವಿವಾಹವನ್ನು ನಿಲ್ಲಿಸಿದ್ದಾರೆ.

ನಗರದ ಬಸವಕಲ್ಯಾಣ ತಾಲ್ಲೂಕಿನ ಕಲವಾಡಿ ಗ್ರಾಮದಲ್ಲಿ, ಸಿದ್ದಲಿಂಗ ಎಂಬುವರ ಜೊತೆಗೆ ಲಕ್ಷ್ಮೀ ಎಂಬ ಬಾಲಕಿಯನ್ನು ಕೊಟ್ಟು ಮದುವೆ ಮಾಡಲಾಗುತ್ತಿತ್ತು. ಈ ವೇಳೆ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿದ ಶರಣಪ್ಪ ಬೆಳಗುಂಪಿ ನೇತೃತ್ವದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಾಲ್ಯ ವಿವಾಹ ತಡೆಗಟ್ಟುವಲ್ಲಿ ಯಶಸ್ವಿಯಾದರು.

ಇದೇ ವೇಳೆ, ವರ, ವರನ ಸಂಬಂಧಿಕರು, ವದುವಿ ಕಡೆಯವರಿಂದ ತಪ್ಪು ಮುಚ್ಚಳಿಕೆ ಪತ್ರ ಬರೆಸಿಕೊಂಡು, ಹುಲಗುತ್ತಿ ಗ್ರಾಮದ ಸಿದ್ದಲಿಂಗ ಹಿರಗ್ಯಾನ್ ಪುರ್ ಎಂಬಾತನೊಂದಿಗೆ ನಡೆಯುತ್ತಿದ್ದ ವಿವಾಹವನ್ನು ತಡೆದು, ಎಚ್ಚರಿಕೆ ನೀಡಿದರು. ಅಲ್ಲದೇ ಬಾಲ್ಯವಿಬಾಹದ ಬಗ್ಗೆ ಜಾಗೃತಿ ಮೂಡಿಸಿದರು.

Next Story

RELATED STORIES