Top

ಆಸ್ಕರ್​ ಅಕಾಡೆಮಿಗೆ ಶಾರೂಖ್​, ಮಾಧುರಿ, ಅನಿಲ್​ ಕಪೂರ್​

ಆಸ್ಕರ್​ ಅಕಾಡೆಮಿಗೆ ಶಾರೂಖ್​, ಮಾಧುರಿ, ಅನಿಲ್​ ಕಪೂರ್​
X

ಜಗತ್ತಿನ ಅತ್ಯಂತ ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಯಾದ ಆಸ್ಕರ್​ ಪ್ರಶಸ್ತಿ ಅಕಾಡೆಮಿಗೆ ಇದೇ ಮೊದಲ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಾಲಿವುಡ್ ಸ್ಟಾರ್​ಗಳನ್ನು ಆಮಂತ್ರಿಸಲಾಗಿದೆ.

ಕಿಂಗ್​ ಖಾನ್ ಶಾರೂಖ್​ ಖಾನ್, ಮಾಧುರಿ ದೀಕ್ಷಿತ್​ ಮತ್ತು ಅನಿಲ್ ಕುಮಾರ್, ನಾಸಿರುದ್ದೀನ್ ಶಾ, ಟಬು, ಆದಿತ್ಯ ಚೋಪ್ರಾ ಮತ್ತು ಅಲಿ ಫಜಲ್​ಗೆ ಆಸ್ಕರ್ ಅಕಾಡೆಮಿಗೆ (ಅಕಾಡೆಮಿ ಆಫ್ ಮೋಷನ್ಸ್ ಪಿಚ್ಚರ್ಸ್ ಆಟ್ಸ್​, ಅಂಡ್ ಸೈನ್ಸ್​) ಆಹ್ವಾನ ದೊರೆತಿದೆ. ಈ ಮೂಲಕ ಆಸ್ಕರ್ ಅಕಾಡೆಮಿ ಇದೇ ಮೊದಲ ಬಾರಿಗೆ ಭಾರತೀಯ ಚಿತ್ರರಂಗದತ್ತ ಹೆಚ್ಚು ಒಲವು ತೋರಿಸಿದಂತಾಗಿದೆ.

ಚಲನಚಿತ್ರ ನಿರ್ಮಾಣದಲ್ಲಿ ವಿಶ್ವದಲ್ಲಿ ಪ್ರಭಾವ ಬೀರಿರುವ ಸುಮಾರು 928 ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಆಸ್ಕರ್ ತಮ್ಮದೇ ನಿಯಮ ಮೀರಿ ದಾಖಲೆ ಪ್ರಮಾಣದಲ್ಲಿ ಆಹ್ವಾನ ನೀಡುತ್ತಿರುವುದು ಇದು ಮೂರನೇ ಬಾರಿ. ಕಳೆದ ವರ್ಷ 774 ಗಣ್ಯರಿಗೆ ಆಹ್ವಾನ ನೀಡಿತ್ತು.

ಈ ಬಾರಿ ಆಹ್ವಾನ ಪಡೆದವರಲ್ಲಿ 17 ಆಸ್ಕರ್ ಪ್ರಶಸ್ತಿ ವಿಜೇತರು, 92 ಮಂದಿ ಆಸ್ಕರ್​ ಪ್ರಶಸ್ತಿ ಸಾಲಿನಲ್ಲಿ ಇದ್ದವರು ಸೇರಿದ್ದಾರೆ.

Next Story

RELATED STORIES