Top

ಮತ್ತೆ ಬರ್ತಿದ್ದಾನೆ ಇನ್ಸ್​ಪೆಕ್ಟರ್ ವಿಕ್ರಂ.. ಜೊತೆಗಿದ್ದಾರೆ ಚಾಲೆಂಜಿಂಗ್​ ಸ್ಟಾರ್​!

ಮತ್ತೆ ಬರ್ತಿದ್ದಾನೆ ಇನ್ಸ್​ಪೆಕ್ಟರ್ ವಿಕ್ರಂ.. ಜೊತೆಗಿದ್ದಾರೆ ಚಾಲೆಂಜಿಂಗ್​ ಸ್ಟಾರ್​!
X

80ರ ದಶಕದ ಇನ್ಸ್​ಪೆಕ್ಟರ್ ವಿಕ್ರಮ್ ಮತ್ತೆ ಖಾಕಿ ಖದರ್ ತೋರೋಕೆ ತೆರೆಗೆ ಬರ್ತಿದ್ದಾನೆ. ಸಖತ್ ಡೇರಿಂಗ್ ಅಂಡ್ ಡೈನಾಮಿಕ್ ಇನ್ಸ್​ಪೆಕ್ಟರ್​ಗೆ ಡ್ರಗ್ ಡೀಲರ್ ಕೈ ಜೋಡಿಸ್ತಿದ್ದಾರೆ. ಅಷ್ಟೇ ಯಾಕೆ ಈ ಜೋಡಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಸಾಥ್ ಕೊಡ್ತಿದ್ದಾರೆ.

ಇನ್ಸ್​ಪೆಕ್ಟರ್ ವಿಕ್ರಮ್... ಈ ಹೆಸರು ಕೇಳಿದರೆ ನೆನಪಾಗೋದೇ ಒನ್ ಅಂಡ್ ಓನ್ಲಿ ಡಾ ಶಿವರಾಜ್​ಕುಮಾರ್. 80ರ ದಶಕದಲ್ಲಿ ತೆರೆಕಂಡ ಈ ಸಿನಿಮಾದಲ್ಲಿ ಶಿವಣ್ಣ ಇನ್ಸ್​ಪೆಕ್ಟರ್ ವಿಕ್ರಮ್ ಆಗಿ ಕಮಾಲ್ ಮಾಡಿದ್ದರು. ದಿನೇಶ್ ಬಾಬು ನಿರ್ದೇಶನದ ಈ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದಲ್ಲದೆ, ಸಿನಿಪ್ರಿಯರು ಎಂದೂ ಮರೆಯಲಾಗದಂತಹ ಸಿನಿಮಾ ಅನಿಸಿತು.

ಇದೀಗ ಅದೇ ಇನ್ಸ್​ಪೆಕ್ಟರ್ ವಿಕ್ರಮ್ ಮತ್ತೆ ಬಿಗ್ ಸ್ಕ್ರೀನ್​ಗೆ ಬರ್ತಿದ್ದಾನೆ. ಆದ್ರೆ ಅದು ಟೈಟಲ್ ಅಷ್ಟೇ. ಹೌದು, ಪ್ರಜ್ವಲ್ ದೇವರಾಜ್, ಇನ್ಸ್​ಪೆಕ್ಟರ್ ವಿಕ್ರಮ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈಗಾಗ್ಲೇ ಶೇಕಡಾ 50ರಷ್ಟು ಶೂಟಿಂಗ್ ಪೂರ್ಣಗೊಳಿಸಿರುವ ಈ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಡ್ತಿರೋದು ವಿಶೇಷ.

ಚೌಕ ಚಿತ್ರದಲ್ಲಿ ರಾಬರ್ಟ್​ ಆಗಿ ಕಾಣಿಸಿಕೊಂಡಿದ್ದ ದರ್ಶನ್, ಇದೀಗ ಮತ್ತೆ ಇನ್ಸ್​ಪೆಕ್ಟರ್ ವಿಕ್ರಮ್​ ಬೆನ್ನಿಗೆ ನಿಲ್ಲಲಿದ್ದಾರೆ. ದರ್ಶನ್ ಸಹೋದರ ದಿನಕರ್ ನಿರ್ದೇಶಿಸಿ, ನಿರ್ಮಿಸುತ್ತಿರುವ ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರದಲ್ಲಿ ನಟಿಸಿರುವ ಪ್ರಜ್ವಲ್​ಗೆ ದರ್ಶನ್ ಮತ್ತವರ ಕುಟುಂಬದ ಜೊತೆ ಒಳ್ಳೆಯ ನಂಟಿದೆ.

ದರ್ಶನ್​ರನ್ನ ಅಣ್ಣನಂತೆ ಭಾವಿಸಿರುವ ಪ್ರಜ್ವಲ್​ಗೆ ಡಿ ಬಾಸ್ ಪ್ರೋತ್ಸಾಹ ಎಂದೂ ಇದ್ದೇ ಇರಲಿದೆಯಂತೆ. ಅಂದಹಾಗೆ ಸಿನಿಮಾದಲ್ಲಿ ದರ್ಶನ್ ನಟಿಸೋದು ಕನ್ಫರ್ಮ್​ ಆಗಿದ್ದು, ಯಾವ ರೀತಿಯ ಪಾತ್ರ ಅನ್ನೋ ಸುಳಿವು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇಡೀ ದರ್ಶನ್ ಫ್ಯಾನ್ಸ್ ಖುಷಿ ಪಡೋ ಅಂತಹ ಎಕ್ಸೈಟಿಂಗ್ ಪಾತ್ರ ಅದಾಗಿದ್ದು, ಡೇಟ್ಸ್ ಕೂಡ ಲಾಕ್ ಆಗಿದೆಯಂತೆ.

ಟಗರು ಸಕ್ಸಸ್​ನ ಅಲೆಯಲ್ಲಿರೋ ಜಾಕಿ ಭಾವನಾ, ಇನ್ಸ್​ಪೆಕ್ಟರ್ ವಿಕ್ರಮ್​ಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದು, ಡ್ರಗ್ ಡೀಲರ್ ಪಾತ್ರದಲ್ಲಿ ಮಿಂಚಲಿದ್ದಾರಂತೆ. ಬೆಂಗಳೂರು, ಕಾರವಾರ, ಗೋಕರ್ಣ, ಗೋವಾ ಮುಂತಾದ ತಾಣಗಳಲ್ಲಿ 35 ದಿನದ ಶೂಟಿಂಗ್ ಮುಗಿಸಿದೆ. ಇನ್ನು ಜುಲೈ 4ಕ್ಕೆ ನಡೆಯಲಿರುವ ಪ್ರಜ್ವಲ್ ಬರ್ತ್​ಡೇ ವಿಶೇಷ ಟೀಸರ್ ಕೂಡ ಲಾಂಚ್ ಮಾಡೋ ಸನ್ನಾಹದಲ್ಲಿದೆ ಚಿತ್ರತಂಡ.

ಅಂದಹಾಗೆ ಈ ಸಿನಿಮಾನ ಪುಷ್ಪಕ ವಿಮಾನ ಸಿನಿಮಾ ಖ್ಯಾತಿಯ ವಿಖ್ಯಾತ್ ತಮ್ಮ ವಿಖ್ಯಾತ್ ಚಿತ್ರ ಪ್ರೊಡಕ್ಷನ್ ಬ್ಯಾನರ್​ನಡಿ ನಿರ್ಮಾಣ ಮಾಡ್ತಿದ್ದು, ನರಸಿಂಹ ಆಕ್ಷನ್ ಕಟ್ ಹೇಳ್ತಿದ್ದಾರೆ. ಮಫ್ತಿ ಖ್ಯಾತಿಯ ನವೀನ್ ಕುಮಾರ್ ಸಿನಿಮಾಟೋಗ್ರಫಿ, ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿರಲಿದ್ದು, ಜುಲೈ ಎರಡನೇ ವಾರದಿಂದ ಮುಂದಿನ ಹಂತದ ಚಿತ್ರೀಕರಣ ಶುರುವಾಗಲಿದೆ. ಅದೇನೇ ಇರಲಿ, ಇನ್ಸ್​ಪೆಕ್ಟರ್ ವಿಕ್ರಮ್ ಮತ್ತೆ ಬರ್ತಿದ್ದಾನೆ ಅನ್ನೋದೇ ಸಖತ್ ಥ್ರಿಲ್ಲಿಂಗ್ ಅನಿಸ್ತಿದೆ.

Next Story

RELATED STORIES