Top

ನಟಸಾರ್ವಭೌಮನಿಗೆ ಪ್ರೇಮಂ ಬೆಡಗಿ!!

ನಟಸಾರ್ವಭೌಮನಿಗೆ ಪ್ರೇಮಂ ಬೆಡಗಿ!!
X

ರಾಜಕುಮಾರ ಚಿತ್ರದ ನಂತರ ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿನಯದ ಹೊಸ ಚಿತ್ರ ನಟಸಾರ್ವಭೌಮ.. ಚಿತ್ರಕ್ಕೆ ಗೂಗ್ಲಿ ಖ್ಯಾತಿಯ ಪವನ್​ ಒಡೆಯರ್​ ಆ್ಯಕ್ಷನ್​ ಕಟ್​ ಹೇಳುತ್ತಿದ್ದು ಚಿತ್ರದ ಶೂಟಿಂಗ್​ ಈಗಾಗಲೆ ಭರದಿಂದ ಸಾಗಿದೆ.. ಸಿನಿಮಾದಲ್ಲಿ ಮತ್ತೆ ಅಪ್ಪುಗೆ ಜೋಡಿಯಾಗಿ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.

ಈಗ ನಟಸಾರ್ವಭೌಮ ಚಿತ್ರತಂಡದಿಂದ ಮತ್ತೊಂದು ಹೊಸ ಸುದ್ದಿ ಹೊರಬಂದಿದೆ.. ಅದೇನಪ್ಪ ಅಂದ್ರೆ ಮಲಯಾಳಂ ಭಾರಿ ಸಂಚಲನ ಸೃಷ್ಟಿದ್ದ ಪ್ರೇಮಂ ಚಿತ್ರದ ನಾಯಕಿ ಅನುಪಮಾ ಪರಮೇಶ್ವರನ್​ ಅಪ್ಪುಗೆ ಮತ್ತೊಬ್ಬ ನಟಿಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಡಲಿದ್ದಾರೆ.

'ನಟಸಾರ್ವಭೌಮ' ಸಿನಿಮಾದಲ್ಲಿ ಇಬ್ಬರು ನಾಯಕಿಯರು ಕಾಣಿಸಿಕೊಳ್ಳಲ್ಲಿದ್ದು, ರಚಿತಾ ರಾಮ್ ಜೊತೆಯಲ್ಲಿ ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಕೂಡ ಅಪ್ಪು ಜೊತೆ ಸ್ಕ್ರೀನ್ ಶೇರ್ ಮಾಡಲು ಆಯ್ಕೆಯಾಗಿದ್ದಾರೆ.. ಅಷ್ಟೆ ಅಲ್ಲದೆ ಈ ಗುಂಗುರು ಕೂದಲ ಚೆಲುವೆ ಮಲೆಯಾಳಂನಲ್ಲಿ ಮಾತ್ರವಲ್ಲದೆ ಟಾಲಿವುಡ್, ಕಾಲಿವುಡ್ ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ..

Next Story

RELATED STORIES