Top

ಕಾಮಗಾರಿ ಅವ್ಯವಹಾರ ಆರೋಪಿಸಿ, ಸದಸ್ಯರ ಪ್ರತಿಭಟನೆ

ಕಾಮಗಾರಿ ಅವ್ಯವಹಾರ ಆರೋಪಿಸಿ, ಸದಸ್ಯರ ಪ್ರತಿಭಟನೆ
X

ಬೀದರ್ : ಜಿಲ್ಲೆಯ ಹುಲಸೂರು ತಾಲ್ಲೂಕು ಪಂಚಾಯ್ತಿಯಲ್ಲಿ ಅವ್ಯವಹಾರ ನಡೆಯುತ್ತಿದೆ. ಇದನ್ನು ತಡೆಗಟ್ಟುವಲ್ಲಿ ಅಧಿಕಾರಿಗಳಿಗೆ ಮಾಡಿದ ಮನವಿಗೆ ಸ್ಪಂದಿಸದ ಕಾರಣ, ಇಂದು ಗ್ರಾಮಪಂಚಾಯ್ತಿ ಸದಸ್ಯರೇ ಪ್ರತಿಭಟನೆ ನಡೆಸಿದರು.

ಹುಲಸೂರು ತಾಲ್ಲೂಕು ಪಂಚಾಯ್ತಿಯ ಮುಂದೆ ಧರಣಿ ಕುಳಿತ ತಾಲ್ಲೂಕು ಪಂಚಾಯ್ತಿ ಸದಸ್ಯರು, ಭ್ರಷ್ಠಾಚಾರ ತಡೆಗಟ್ಟುವಂತೆ ಒತ್ತಾಯಿಸಿದರು. ಅಲ್ಲದೇ ವಿವಿಧ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ. ಸುಮಾರು 15 ಲಕ್ಷಕ್ಕೂ ಅಧಿಕ ಹಣ ಅಕ್ರಮ ನಡೆಸಲಾಗಿದೆ. ಇದಕ್ಕೆ ಸೂಕ್ತ ಲೆಕ್ಕಪತ್ರ ನೀಡುವಂತೆ ತಾಲೂಕು ಪಂಚಾಯತ್ ಅದ್ಯಕ್ಷರನ್ನು ಕೇಳಿದರೇ ಸರಿಯಾಗಿ ಪ್ರತಿಕ್ರಿಯಿಸುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಏನೂ ಪ್ರಯೋಜನ ಆಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಈ ಅಕ್ರಮದಲ್ಲಿ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರ ಕೈವಾಡವಿದೆ. ಈ ಕುರಿತು, ಕಳೆದ ಎರಡು ದಿನಗಳ ಹಿಂದೆ ನಡೆದ ಸಭೆಯಲ್ಲಿ ಸುಳ್ಳು ಲೆಕ್ಕಪತ್ರ ತೊರಿಸಿದ್ದ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡಿದ್ದೆವು. ಎರಡು ದಿನಗಳ ಒಳಗಾಗಿ ಸೂಕ್ತ ಲೆಕ್ಕಪತ್ರ ತೋರಿಸುವಂತೆ ಒತ್ತಾಯಿಸಲಾಗಿತ್ತು. ಆದರೇ ಇದುವರೆಗೆ ಯಾವುದೇ ಲೆಕ್ಕಪತ್ರ ಸರಿಯಾಗಿ ತೋರಿಸಿಲ್ಲ. ಇಂದು ಲೆಕ್ಕಪತ್ರ ತೊರಿಸಲು ನೀರಾಕರಸಿದ್ದ ಹಿನ್ನಲೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುಗಾಗಿ ಪ್ರತಿಭಟನಾ ನಿರತ ಸದಸ್ಯರು ತಿಳಿಸಿದರು.

ಒಟ್ಟಾರೆ ಹುಲಸೂರು ತಾಲ್ಲೂಕು ಪಂಚಾಯ್ತಿಯಲ್ಲಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಈ ಮೂಲಕ ಅಕ್ರಮಗಳಿಗೆ ಎಡೆಮಾಡಿಕೊಟ್ಟಿದೆ. ಇದರಲ್ಲಿ ಅಧ್ಯಕ್ಷರ ಕೈವಾಡವಿರುವ ಬಗ್ಗೆ ಸದಸ್ಯರೇ ಸಂದೇಹ ವ್ಯಕ್ತಪಡಿಸಿದ್ದಾರೆ. ಇಂತಹ ಅವ್ಯವಹಾರಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಕಡಿವಾಣ ಹಾಕಲಿ ಎಂಬುದು ಸಾರ್ವಜನಿಕರ ಆಶಯ ಕೂಡ ಆಗಿದೆ.

ವರದಿ : ವಿಶ್ವಕುಮಾರ್, ಟಿವಿ5 ಬೀದರ್

Next Story

RELATED STORIES