Top

ಪೋಲಿಸ್​ ಟೋಪಿ ತೊಟ್ಟ ಕಿರಿಕ್​ ಹುಡುಗಿ!!

ಪೋಲಿಸ್​ ಟೋಪಿ ತೊಟ್ಟ ಕಿರಿಕ್​ ಹುಡುಗಿ!!
X

ಕರ್ನಾಟಕದ ಕ್ರಶ್​ ಎಂದೇ ಖ್ಯಾತಿ ಪಡೆದಿರುವ ಕೊಡಗು ಕುವರಿ ರಶ್ಮಿಕಾ ಮಂದಣ್ಣ ಈಗ ಸಿಕ್ಕಾಪಟ್ಟೆ ಬ್ಯುಸಿ.. ಕಿರಿಕ್​ ಪಾರ್ಟಿ ಸಕ್ಸಸ್​ ಆಗಿದ್ದೇ ಆಗಿದ್ದು, ಈ ಹುಡುಗಿಯ ನಸೀಬು ಬದಲಾಗಿ ಹೋಗಿದೆ. ಸಾಲು ಸಾಲು ಸಿನಿಮಾ ಪ್ರಾಜೆಕ್ಟ್​ಗಳು ಈಕೆಯ ಮನೆಬಾಗಿಲನ್ನು ಹುಡುಕಿಕೊಂಡು ಬಂದಿವೆ.

ಕೇವಲ ಸ್ಯಾಂಡಲ್​​ವುಡ್​ನಲ್ಲಿ ಮಾತ್ರವಲ್ಲದೆ ಟಾಲಿವುಡ್​ನಲ್ಲೂ ಈಕೆಯ ಹವಾ ಜೋರಾಗಿದೆ. ಈಗಾಗಲೇ ವಿಜಯ್​ ದೇವರಕೊಂಡಾ ಜೊತೆ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ನ್ಯಾಚುರಲ್​ ಸ್ಟಾರ್​ ನಾನಿ ಜೊತೆ ಕೂಡ ನಟಿಸಲಿದ್ದಾರೆ..

ಪ್ರತಿ ಚಿತ್ರಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರಶ್ಮಿಕಾ ಮತ್ತೊಂದು ಕನ್ನಡ ಚಿತ್ರಕ್ಕೆ ಸಹಿ ಹಾಕಿದ್ದಾರೆ. ತಮ್ಮ ಹೊಸ ಚಿತ್ರದಲ್ಲಿ ಪೋಲಿಸ್​ ಅಧಿಕಾರಿಯ ಪಾತ್ರ ನಿರ್ವಹಿಸಲಿದ್ದಾರೆ ರಶ್ಮಿಕಾ. ಇದರ ಜೊತೆಗೆ ಚದುರಂಗದ ಆಟಗಾರ್ತಿಯಾಗಿಯೂ ಕೂಡ ಪಾತ್ರ ನಿರ್ವಹಿಸಲಿದ್ದಾರೆ. ವಿಶೇಷ ಅಂದ್ರೆ ಇನ್ನೂ ಹೆಸರಿಡದ ಚಿತ್ರಕ್ಕೆ ನವ ನಿರ್ದೇಶಕ ಗೌತಮ್​ ಐಯ್ಯರ್ ಆಕ್ಷನ್​ ಕಟ್​ ಹೇಳುತ್ತಿದ್ದು ಚಿತ್ರದಲ್ಲಿ ನಾಯಕನಿಲ್ಲದೆ ಸಿನಿಮಾದ ಚಿತ್ರೀಕರಣ ಮಾಡಲಾಗುವುದು. ಜುಲೈ​ ಕೊನೆಯ ವಾರದಲ್ಲಿ ಚಿತ್ರದ ಶೂಟಿಂಗ್​ ಆರಂಭವಾಗಲಿದೆ.

Next Story

RELATED STORIES