Top

ಪುಟಾಣಿ ಕರಾಟೆ ಪಟುಗಳ ಸಮಸ್ಯೆ ಕೇಳೋರು ಯಾರು.?

ಪುಟಾಣಿ ಕರಾಟೆ ಪಟುಗಳ ಸಮಸ್ಯೆ ಕೇಳೋರು ಯಾರು.?
X

ಮೈಸೂರು : ದೇಶಕ್ಕೆ ಕೀರ್ತಿ ತರಲು ಮುಂದಾದ ಮಕ್ಕಳಿಗೆ ಇದೀಗಾ ಆರ್ಥಿಕ ಸಮಸ್ಯೆ ಎದುರಾಗಿದೆ. ಅಂತರಾಷ್ಟ್ರೀಯ ಕರಾಟೆಗೆ ಆಯ್ಕೆಯಾದ ಅಲೆಮಾರಿ ಜನಾಂಗದ ಮಕ್ಕಳು ಇವತ್ತು ಇಂಟರ್ ನ್ಯಾಷನಲ್ ಲೆವೆಲ್‌ನಲ್ಲಿ ಭಾಗವಹಿಸಲು ಹಿಂದೇಟು ಹಾಕ್ತಿದ್ದಾರೆ. ಬೀದಿ ಬೀದಿ ಸುತ್ತಿ ಪಾತ್ರೆ ವ್ಯಾಪಾರ ಮಾಡುವವನ ಮಕ್ಕಳು ಸ್ಟಾರ್ ಆಟಗಾರರಾಗಿದ್ರೂ ಕೂಡ ಅಡ್ಡ ಕತ್ತರಿಯಲ್ಲಿ ಇವರ ಜೀವನ ಸಿಲುಕಿದೆ. ಕರಾಟೆಯಲ್ಲಿ ರಾಜ್ಯದಿಂದ ಆಯ್ಕೆಯಾದ ಈ ಇಬ್ಬರೇ ಮಕ್ಕಳ ಸ್ಥಿತಿ ಹೇಗಿದೆ.? ಅಷ್ಟಕ್ಕೂ ಈ ಮಕ್ಕಳಾದರೂ ಯಾರು ಅಂತೀರಾ, ಮುಂದೆ ಓದಿ...

ಬಾಕ್ಸಿಂಗ್ ಪ್ರಾಕ್ಟಿಸ್‌ನಲ್ಲಿ ದೇಶಕ್ಕೆ ಕೀರ್ತಿ ತಂದ ಆ ಮಕ್ಕಳೇ, ಮೈಸೂರಿನ ಎಚ್.ಡಿ.ಕೋಟೆಯ ಹ್ಯಾಂಡ್‌ಪೋಸ್ಟ್‌ನ ಯರಳ್ಳಿ ಗ್ರಾಮದ ನಿವಾಸಿಗಳು. ಐಶ್ವರ್ಯ SSLC ಪಾಸಾಗಿ ಫಸ್ಟ್ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ರೆ, ನಿಖಿಲ್ ಇದೀಗಾ 9ನೇ ತರಗತಿ. ಹಳ್ಳಿಯಲ್ಲಿ ಹುಟ್ಟಿ ಬೆಳೆದ್ರು ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಮಕ್ಕಳ ಹೆಸರು ರಾರಾಜಿಸುತ್ತಿದೆ. ಆದ್ರೆ, ಈ ಹೆಸರಿನೊಂದಿಗೆ ದೇಶದ ಹೆಸರು ಮತ್ತಷ್ಟು ಹೆಚ್ಚಿಸಲು ಮಕ್ಕಳು ಮುಂದಾಗಿದ್ರು, ಇವರ ಪರಿಸ್ಥಿತಿ ಅದಕ್ಕೆ ಸಾಥ್ ಕೊಡ್ತಿಲ್ಲ.

ಹೌದು, ಅಂತರಾಷ್ಟ್ರೀಯ ಬಾಕ್ಸಿಂಗ್‌ಗೆ ಆಯ್ಕೆಯಾಗಿರುವ ಈ ಮಕ್ಕಳಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ. ಈ ಸಮಸ್ಯೆಯಿಂದ ಮಲೇಷಿಯಾಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಆಯ್ಕೆಯಾಗಿದ್ದ ಇದೇ ಗ್ರಾಮದ ವಿದ್ಯಾರ್ಥಿನಿ ಕೌಸಲ್ಯ ಸ್ಪರ್ಧೆಯಿಂದ ದೂರ ಉಳಿದಿದ್ರೆ, ಈ ಇಬ್ಬರು ಮಕ್ಕಳು ಕೂಡ ಮಲೇಷಿಯಾಗೆ ಹೋಗದಿರಲು ಚಿಂತನೆ‌ ನಡೆಸಿದ್ದಾರೆ. ಈಗಾಗಲೇ ಆರ್ಥಿಕವಾಗಿ ಬಳಲುತ್ತಿರುವ ಮಂಜು ರಾವ್ ಕುಟುಂಬಕ್ಕೆ ಎರಡು ಲಕ್ಷದ ವರೆಗೂ ಮಕ್ಕಳಿಗೆ ಹೋಗಿ ಬರಲು ಖರ್ಚಾಗಲಿದೆ.

ಬೆಂಗಳೂರಿನ ಕರಾಟೆ ಅಸೋಸಿಯೇಷನ್‌ನಿಂದ ಆಯ್ಕೆಯಾಗಿರುವ ಈ ಮಕ್ಕಳು ರಾಜ್ಯದಲ್ಲಿ 5 ಸಾವಿರ ಮಕ್ಕಳಲ್ಲಿ ಆಯ್ಕೆಯಾದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಬೀದಿ ಬೀದಿ ಸುತ್ತಿ ಪಾತ್ರೆ ಮಾರುವ ಮಂಜು ನಮ್ಮ ಮಕ್ಕಳಿಗೆ ಯಾರಾದ್ರು ಸಹಾಯ ಮಾಡಿದ್ರೆ ಅವ್ರು ದೇಶಕ್ಕೆ ಕೀರ್ತಿ ತರ್ತಾರೆ ಅಂತಾರೆ. ಆದ್ರೆ ಇವರ ನೋವಿನ ಮಾತು ಮಾತ್ರ ರಾಜಕೀಯದಲ್ಲಿ ಬಿಜಿ ಆಗಿರೋ ನಮ್ಮ ಜನಪ್ರತಿನಿಧಿಗಳಿಗೆ ಗೊತ್ತಾಗ್ತಿಲ್ಲ.

ಇನ್ನೂ ದೇಶಕ್ಕೆ ಕೀರ್ತಿ ತರುವ ಈ ಮಕ್ಕಳ ಪಾಸ್‌ಪೋರ್ಟ್ ಪಡೆಯಲು ಹೋದ ಸಂದರ್ಭದಲ್ಲೂ ಮಧ್ಯವರ್ತಿಯಿಂದ ಈ‌ ಮಕ್ಕಳ ಪಾಸ್‌ಪೋರ್ಟ್ ಮಾಡಿ ಕೊಡಿಸಲು ಲಂಚ ಪಡೆಯಲಾಗಿದೆ. ಬೆಂಗಳೂರಿಗೆ ಹೋಗಿ ಪಾಸ್‌ಪೋರ್ಟ್ ಪಡೆಯಲು ಮೂರು ಸಾವಿರ ಕೊಟ್ಟು ಪಾಸ್‌ಪೋರ್ಟ್‌ ಮಾಡಿಸಿಕೊಂಡು ಬರಲಾಗಿದೆ. ಆದರೆ ಇಂತಹ ದುರಂತ ಸ್ಥಿತಿಯಲ್ಲಿರುವ ಮಕ್ಕಳಿಗೆ ನೆರವಿನ ಅಗತ್ಯತೆ ಇದೆ ಅಂತಾರೆ ಗ್ರಾಮಸ್ಥರು.

ಒಟ್ಟಾರೆ ಇಂದಿನ ಮಕ್ಕಳೇ‌ ನಾಳೆಯ ಉತ್ತಮ ಪ್ರಜೆಗಳು ಅನ್ನೋ ನಮ್ಮ ಸರ್ಕಾರ ಈ‌ ಮಕ್ಕಳ ಭವಿಷ್ಯಕ್ಕೆ ಏನ್ ಮಾಡಲಿದೆ. ಪಾತ್ರೆ ಹೊತ್ತು ಬೀದಿ ಬೀದಿ ಸುತ್ತೋ ಇಂತಹ ಮಕ್ಕಳಿಗೆ ಸರ್ಕಾರದ ನೆರವು ನೀಡದೆ ಮತ್ಯಾರಿಗೆ ನೀಡಲಿದೆ ಎಂಬ ಪ್ರಶ್ನೆಗೆ ಉತ್ತರಿಸಬೇಕಿದೆ. ಮಾತ್ರವಲ್ಲ, ಈ‌ ಮಕ್ಕಳು ನಮ್ಮ ದೇಶದ ಕೀರ್ತಿ ಪತಾಕೆ ಹಾರಿಸಲು ಸರ್ಕಾರ ಹಾಗೂ ಕ್ರೀಡಾ ಇಲಾಖೆ ಮುತುವರ್ಜಿ ವಹಿಸಬೇಕಿದೆ.

ವರದಿ : ಸುರೇಶ್, Tv5 ಮೈಸೂರು

Next Story

RELATED STORIES