ಶಾಲೆಗೆ ಕಲಿಯೋಕೆ ಬಂದಿದ್ದ ನಾಗಪ್ಪ, ಮರಳಿ ಕಾಡಿಗೆ.!

ರಾಮನಗರ : ಕಾಡಿನಲ್ಲಿ ಇಲಿ, ಹೆಗ್ಗಣ, ಪಕ್ಷಿಗಳ ಮೊಟ್ಟೆ ಅದೂ ಇದು, ತಿಂದು ಸಾಕಾಗಿದ್ದ ನಾಗಪ್ಪ, ಶಾಲೆಯನ್ನು ಸೇರಿದ್ದನು. ಶಾಲೆ ಸೇರಿ ಏನ್ ಮಾಡ್ತೀಯ ಬುಸ್ ಬುಸ್ ನಾಗಪ್ಪ ಅಂದ್ರೇ, ಕಲಿಯೋಕೆ ಬಂದಿದ್ದೀನಿ ಅಂತಿದ್ದ. ನಾಗಪ್ಪನನ್ನು ಕಂಡ ವಿದ್ಯಾರ್ಥಿಗಳೆಲ್ಲಾ ಓಟ ಕಿತ್ತರೇ, ನಾಗಪ್ಪ ಮಾತ್ರ ತಾನೊಬ್ಬನೇ ಪಾಠ ಕೇಳ್ತೀನಿ. ನೀವು ಪಾಠ ಮಾಡಿ ಅನ್ನೋ ತರ ಶಾಲೆಯಲ್ಲಿನ ಬೀರು ಒಳಗೊಕ್ಕು ಕುಳಿತಿದ್ದ.
ಹೌದು ಹೀಗೆ ಬಂದ 7 ಅಡಿಗೂ ಉದ್ದದ ಗೋದಿ ನಾಗರಹಾವು, ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ರಾಮನಗರ ಜಿಲ್ಲೆಯ ಕವಣಾಪುರ ಸರ್ಕಾರಿ ಶಾಲೆಯ ಕೊಠಡಿ ಹೊಕ್ಕಿದ್ದ ನಾಗರಹಾವು, ವಿದ್ಯಾರ್ಧಿಗಳನ್ನು ಭಯ ಪಡಿಸಿತ್ತು. ಸುಮಾರು 11 ಜನ ವಿದ್ಯಾರ್ಥಿಗಳಿರುವ ಶಾಲೆಯಲ್ಲಿ, ನಾನು ಒಬ್ಬ ಬರ್ತೀನಿ ಅನ್ನೋ ಹಾಗೆ ನಾಗರಹಾವು ಶಾಲೆಗೆ ಬಂದಿತ್ತು.
ನಾಗರಹಾವು ಕಂಡ ವಿದ್ಯಾರ್ಥಿಗಳು ಓಟ ಕಿತ್ತರೇ, ಶಿಕ್ಷಕರು ತಕ್ಷಣವೇ ಹಾವು ಹಿಡಿಯುವ ವ್ಯಕ್ತಿಯನ್ನು ಕರೆಸಿ ಹಿಡಿಸಿದರು. ಹೀಗೆ ಹಿಡಿದ ಹಾವು ಸುಮಾರು 7 ಅಡಿ ಉದ್ದವಿದ್ದು, ಗೋದಿ ನಾಗರ ಜಾತಿಗೆ ಸೇರಿದ್ದೆಂದು ಹೇಳಲಾಗುತ್ತಿದೆ. ನಾಗರಹಾವನ್ನು ಹಿಡಿದು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಒಪ್ಪಿಸಲಾಗಿದೆ.
ಅಂತೂ ಇಂತೂ ಶಾಲೆ ಸೇರಿದ್ದ ನಾಗಪ್ಪ, ಮರಳಿ ಕಾಡಿನ ಹಾದಿ ಹಿಡಿದಿದ್ದಾನೆ. ಈ ಮೂಲಕ ನಾಗರಹಾವಿನ ಸದ್ದಿನಿಂದ ಭಯಭೀತರಾಗಿದ್ದ ಮಕ್ಕಳು, ಶಿಕ್ಷಕರು ನಿರಾಳರಾಗುವಂತಾಗಿದೆ.