Top

11 ಎಸೆತ, 1 ರನ್​, 7 ವಿಕೆಟ್​! ಕ್ರಿಕೆಟ್ ಲೋಕದಲ್ಲೊಂದು ಅಚ್ಚರಿ!!

11 ಎಸೆತ, 1 ರನ್​, 7 ವಿಕೆಟ್​! ಕ್ರಿಕೆಟ್ ಲೋಕದಲ್ಲೊಂದು ಅಚ್ಚರಿ!!
X

ಕ್ರಿಕೆಟ್ ಅಂದರೆ ಹಾಗೆ ಅನಿಶ್ಚಿತತೆಯ ಆಟ. ಯಾವ ಕ್ಷಣದಲ್ಲಿ ಬೇಕಾದರೂ ಏನೂ ಆಗಬಹುದು ಎಂಬುದಕ್ಕೆ ಮತ್ತೊಂದು ತಾಜಾ ಉದಾಹರಣೆ ಇಲ್ಲಿದೆ. 3 ವಿಕೆಟ್ ಕಳೆದುಕೊಂಡಿದ್ದ ತಂಡವೊಂದು 12 ಎಸೆತಗಳಲ್ಲಿ 3 ರನ್ ಗಳಿಸಬೇಕಾದ ಸುಲಭ ಗುರಿ ಹೊಂದಿತ್ತು. ಇನ್ನೇನು ಗೆದ್ದೇಬಿಟ್ಟೆವು ಎಂದು ಬೀಗುವಷ್ಟರಲ್ಲಿ ಸೋಲು ಮೈಮೇಲೆ ಎಳೆದುಕೊಂಡಿತು. ಅದಕ್ಕೆ ಕಾರಣ ಕೊನೆಯ 11 ಎಸೆತಗಳಲ್ಲಿ 1 ರನ್ ಗಳಿಸಿ 7 ವಿಕೆಟ್ ಕಳೆದುಕೊಂಡಿತು!

ಇಂಗ್ಲೆಂಡ್ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಇಂತಹದ್ದೊಂದು ಅಚ್ಚರಿ ಫಲಿತಾಂಶ ಬಂದಿದೆ.

ಇಂಗ್ಲೆಂಡ್ ನ ಇಸಿಬಿ ನ್ಯಾಷನಲ್ ಕ್ಲಬ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಸ್ಥಳೀಯ ತಂಡಗಳಾದ ಪೀಟರ್ ಬರೋಗ್ ಹಾಗೂ ಹೈ ವೈಕೊಂಬ್ ಸಿಟಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊನೆಯ 12 ಎಸೆತಗಳಲ್ಲಿ ಹೈ ವೈಕೊಂಬ್ ಸಿಟಿ ತಂಡಕ್ಕೆ ಕೇವಲ 3 ರನ್ ಗಳಿಸುವುದಷ್ಟೇ ಬಾಕಿಯಿತ್ತು. ಗೆಲುವು ತಮ್ಮದೇ ಎಂದು ಬೀಗಿದ್ದ ಅವರಿಗೆ ಶಾಕ್ ಆಗುವಂತೆ ಮಾಡಿತ್ತು ಆ ಕೊನೆಯ 11 ಎಸೆತಗಳು.

ಮೊದಲು ಬ್ಯಾಟಿಂಗ್ ನಡೆಸಿದ ಪೀಟರ್ ಬರೋಗ್ ತಂಡ 186 ರನ್ ಗಳ ಸವಾಲನ್ನು ಹೈ ವೈಕೊಂಬ್ ತಂಡಕ್ಕೆ ನೀಡಿತ್ತು. ಈ ಮೊತ್ತವನ್ನು ಸುಲಭವಾಗಿ ಬೆನ್ನತ್ತಿದ್ದ ಹೈವೈಕೋಬ್ ಕೇವಲ 37 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತ್ತು… ಇನ್ನೇನು ಗೆಲ್ಲಲು ಕೇವಲ 3 ರನ್ ಗಳು ಬಾಕಿಯಿದ್ದು, 11 ಎಸೆತಗಳಿದ್ದವು. ಸ್ಪಷ್ಟವಾಗಿ ಯಾರು ಬೇಕಾದ್ರು ಗೆಲುವು ಯಾರದೆಂದು ಬರೆಯಬಹುದಿತ್ತು.

ಆದರೆ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುವಂತೆ, ಆ ಸಂದರ್ಭದಲ್ಲಿ ಬೌಲಿಂಗ್ ಮಾಡಲು ಬಂದ ಪೀಟರ್ ಬರೋಗ್ ತಂಡದ ಬೌಲರ್ ಕೀರಾನ್ ಜೋನ್ಸ್ ತಮ್ಮ ಮೊದಲ ಎಸೆತದಲ್ಲಿ 1 ರನ್ ನೀಡಿ, ನಂತರದ 4 ಎಸೆತಗಳಲ್ಲಿ 4 ವಿಕೆಟ್ ಬೀಳಿಸಿದರು. ನಂತರದ ಓವರ್ ನಲ್ಲಿ ಬಂದ ಸ್ಪಿನ್ ಬೌಲರ್ 16 ವರ್ಷದ ದನ್ಯಾಯಲ್ ಮಲಿಕ್ ಕೂಡ ತಮ್ಮ 3 ಎಸೆತಗಳಲ್ಲಿ 3 ವಿಕೆಟ್ ಕಿತ್ತರು.

ಅಲ್ಲಿಗೆ 3 ರನ್ ಗಳಿಸಿ ಇನ್ನಿಂಗ್ಸ್ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದ ಹೈ ವೈಕೊಂಬ್ ತಂಡ ನಿರೀಕ್ಷಿಸದೇ ಇರುವ ಸೋಲನ್ನು ಕಂಡು ಆಘಾತ ಅನುಭವಿಸಿತು. ಇತ್ತ ಕಡೆ ನಿರೀಕ್ಷಿಸದೆ ಇರುವ ಗೆಲುವನ್ನು ಕಂಡ ಪೀಟರ್ ಬರೋಗ್ ವಿಜಯೋತ್ಸವ ಆಚರಿಸಿತು.

Next Story

RELATED STORIES