Top

ಕ್ಯೂನಲ್ಲಿ ನಿಂತವರಿಗೆ ಅವಾಜ್ ಹಾಕಿ ಓಡಿಸಿದ ಅಧಿಕಾರಿ : ಯಾಕೆ ಗೊತ್ತಾ.?

ಕ್ಯೂನಲ್ಲಿ ನಿಂತವರಿಗೆ ಅವಾಜ್ ಹಾಕಿ ಓಡಿಸಿದ ಅಧಿಕಾರಿ : ಯಾಕೆ ಗೊತ್ತಾ.?
X

ತುಮಕೂರು : ಸಾರ್ವಜನಿಕರ ಸೇವೆಗಾಗಿ ಇರುವ ಅಧಿಕಾರಿಗಳು, ಕೆಲವೊಮ್ಮೆ ತಮ್ಮ ವರ್ತನೆಯಿಂದ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ತುಮಕೂರಿನ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಣಿ, ನಡೆದುಕೊಂಡಿದ್ದಾರೆ.

ತುಮಕೂರು ಜಿಲ್ಲಾಧಿಕಾರಿ ಸಂಕೀರ್ಣದ ಕಂದಾಯ ಇಲಾಖೆಯ ನಾಡ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಗ್ರೇಡ್-2 ತಹಶೀಲ್ದಾರ್ ಇಂದಿರಾ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಪಡೆಯಲು ಬಂದವರಿಗೆ ಅವಾಜ್ ಹಾಕಿದ್ದಾರೆ. ಈ ಮೂಲಕ ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ ನಡೆಸಿದ್ದಾರೆ‌‌.

ಅಂದಹಾಗೇ ನಡೆದದ್ದು ಇಷ್ಟೇ.. ನಾಡ ಕಚೇರಿ ಬಳಿ ಸಾರ್ವಜನಿಕರು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಕ್ಯೂ ನಿಂತಿದ್ದರು. ಈ ವೇಳೆ ತಾಂತ್ರಿಕ ದೋಷ ಉಂಟಾಗಿ, ಕಂಪ್ಯೂಟರ್ ಕೆಟ್ಟು ಹೋಗಿದೆ. ಇದನ್ನು ತಿಳಿಯದ ಜನರು, ಕ್ಯೂನಲ್ಲಿ ನಿಂತೂ ನಿಂತೂ, ಸಾಕಾಗಿ, ಏನ್ ಆಗಿದೆ ಎಂದು ಯುವತಿಯೊಬ್ಬಳು ಸೌಜನ್ಯದಿಂದ ಪ್ರಶ್ನಿಸಿದ್ದಾಳೆ. ಹೀಗೆ ಕೇಳಿದ್ದೇ ತಡ ತೊಂದರೆ ಅಂತ ಕೇಳಿದ್ದೇ ತಡ, ಗ್ರೇಡ್-2 ತಹಶೀಲ್ದಾರ್ ಇಂದಿರಾ ನೀನೇನಾದ್ರೂ ಸಾಫ್ಟ್ ವೇರ್ ಇಂಜಿನಿಯರ್ ಆದ್ರೇ, ಕಂಪ್ಯೂಟರ್ ಸರಿಮಾಡು. ಬ್ಯಾಂಕ್‌ನಲ್ಲಿ‌ ಕ್ಯೂ ನಿಲ್ತೀರಾ, ಇಲ್ಲಿ ನಿಲ್ಲೋಕೆ ನಿಮಗೇನು ಎಂದು ಪುಲ್ ಅವಾಜ್ ಹಾಕಿದ್ದಾರೆ.

ಅಲ್ಲ ಮೇಡಂ, ಕ್ಯೂನಲ್ಲಿ ನಿಂತೂ ನಿಂತೂ ಸಾಕಾಗಿ, ಸುಸ್ತಾಗಿ ಯಾಕೆ ಇಷ್ಟು ಹೊತ್ತಾದ್ರೂ ಮುಂದೆ ಜನ ಹೋಕ್ತಾ ಇಲ್ಲ. ನಮ್ಮ ಕೆಲಸ ಎಷ್ಟು ಹೊತ್ತಿಗೆ ಆಗುತ್ತದೋ ಎಂದು ಕಾದವರು ಕೇಳೋದೇ ತಪ್ಪಾ.? ನೀವು ಸಾರ್ವಜನಿಕರ ಸೇವೆಗಾಗಿ ನೇಮಕಗೊಂಡ ಅಧಿಕಾರಿಯಾಗಿದ್ದು, ಹೀಗೆ ನಡೆದುಕೊಂಡರೇ ನಮ್ಮ ಕೆಲಸ ಆದ್ರೂ ಹೇಗೆ ಆಗೋದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಇದೀಗ ಸಾರ್ವಜನಿಕರೊಂದಿಗೆ ವಾಗ್ವಾದಕ್ಕಿಳಿದ ಅಧಿಕಾರಿ ಇಂದಿರಾ ಅವರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ, ಸೌಜನ್ಯದಿಂದ ಕೇಳಿದವರನ್ನೇ, ತರಾಟೆಗೆ ತೆಗೆದುಕೊಂಡು ಅವಾಜ್‌ ಹಾಕಿದ ಅಧಿಕಾರಿ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

Next Story

RELATED STORIES