Top

ವಾಹನ ಚಲಾಯಿಸುವಾಗ ಚಾಲಕ ಅಸ್ವಸ್ಥ: ಕಂಡಕ್ಟರ್ ಸಮಯಪ್ರಜ್ಞೆಯಿಂದ 25 ಪ್ರಯಾಣಿಕರು ಪಾರು

ವಾಹನ ಚಲಾಯಿಸುವಾಗ ಚಾಲಕ ಅಸ್ವಸ್ಥ: ಕಂಡಕ್ಟರ್ ಸಮಯಪ್ರಜ್ಞೆಯಿಂದ 25 ಪ್ರಯಾಣಿಕರು ಪಾರು
X

ಶಿವಮೊಗ್ಗ: ವಾಹನ ಚಲಾಯಿಸುವಾಗಲೇ ತಲೆ ಸುತ್ತು ಬಂದು ಅರೆ ಕ್ಷಣ ಸ್ಟೀಯರಿಂಗ್ ಮೇಲಿಂದ ಕೈ ಜಾರಿದರೂ ಕೂಡಲೇ ಸಮಯಪ್ರಜ್ಞೆ ಮರೆದ ಚಾಲಕನಿಂದಾಗಿ 25 ಪ್ರಯಾಣಿಕರನ್ನು ಸುರಕ್ಷಿತವಾಗಿದ್ದಾರೆ.

ಶಿವಮೊಗ್ಗದಿಂದ ಮಂಗಳೂರು ಕಡೆ ಹೊರಟಿದ್ದ ಕ್ರಿಸ್ತರಾಜ ಬಸ್‍ನ ಪ್ರಯಾಣಿಕರು ಚಾಲಕ ಮೈಮರೆತಿದ್ದರೆ ಜಲಸಮಾಧಿಯಾಗುತ್ತಿದ್ದರು. ಆದರೆ ಕಂಡಕ್ಟರ್​ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ ಸುಮಾರು 25 ಮಂದಿಯ ಪ್ರಾಣ ಉಳಿದಿದೆ.

ಮಂಗಳವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ನಿರ್ವಾಹಕ ಭಗವಾನ್ ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ಸೂಚಿಸಿದ್ದಾರೆ.

ಮಳೆ ಪುನಃ ಆರಂಭವಾಗಿದ್ದರಿಂದ ಮಂಡಗದ್ದೆ ಸಮೀಪ ರಸ್ತೆಯೆಲ್ಲಾ ಜಾರುಬಂಡೆಯಾಗಿದೆ. ಇಂತಹ ಸಮಯದಲ್ಲಿ ಇಲ್ಲಿನ ಅಪಗಘಾತ ವಲಯ 17ನೇ ಮೈಲುಗಲ್ಲು ಬಳಿ ಕ್ರಿಸ್ತರಾಜ ಬಸ್‍ ಬರುತ್ತಿದ್ದಂತೆ ಚಾಲಕ ಅಪ್ಸರ್ ಗೆ ತಲೆಸುತ್ತು ಬಂದು ಬಸ್ ಸ್ಟೀಯರಿಂಗ್ ಕೈಬಿಟ್ಟಿದ್ದರು.

ಉಡುಪಿ-ಮಂಗಳೂರು ಬಸ್ ಆಗಿದ್ದರಿಂದ ಟಿಕೆಟ್ ಮಾಡಿ ಮುಗಿಸಿದ್ದ ಕಂಡಕ್ಟರ್ ಭಗವಾನ್, ಮುಂದಿನ ಸೀಟಿನಲ್ಲಿ ಕುಳಿತುಕೊಂಡಿದ್ದರು. ಅವಘಡಕ್ಕೆ ತುತ್ತಾಗುತ್ತಿದ್ದ ಬಸ್‍ನ್ನ ತಕ್ಷಣ ಸ್ಟೀಯರಿಂಗ್ ತಿರುಗಿಸಿದ್ದಾರೆ. ತುಂಗಾನದಿಯತ್ತ ಹೊರಳಿದ್ದ ಬಸ್‍ನ್ನ ತಿರುಗಿಸಿ ಸುಮಾರು 25 ಜನರ ಜೀವ ಉಳಿಸಿದ್ದಾರೆ.

Next Story

RELATED STORIES