Top

ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ..!

ಮತ್ತೆ ಹಿಂದೂಗಳ ಭಾವನೆಗೆ ಧಕ್ಕೆ..!
X

ಚಿಕ್ಕಮಗಳೂರು: ಹಿಂದೂಗಳ ಭಾವನೆಗೆ ಬೇರೆ ಸಮುದಾಯದವರು ಧಕ್ಕೆ ತರುತ್ತಿದ್ದಾರೆಂಬ ಆರೋಪದಿಂದ ಕೆರಳಿದ ಇನ್ನೊಂದು ಸಮುದಾಯದ ಯುವಕ, ಫೇಸ್‌ಬುಕ್‌ನಲ್ಲಿ ಹಿಂದು ದೇವತೆಗಳ ಬಗ್ಗೆ ಅವಮಾನಕರ ರೀತಿಯಲ್ಲಿ ಪೋಸ್ಟ್‌ ಮಾಡಿದ್ದಾನೆ.ಚಿಕ್ಕಮಗಳೂರಿನ ಎನ್.ಆರ್.ಪುರ ಎಂಬಲ್ಲಿ ಈ ಘಟನೆ ನಡೆದಿದ್ದು, ಫಯಾಜ್ ಎಂಬ ಯುವಕ ಈ ರೀತಿ ಕೃತ್ಯವೆಸಗಿದ್ದಾನೆ.

ಟಿಪ್ಪು ಸುಲ್ತಾನ್ ಕಾಲಿಗೆ ಆಂಜನೇಯ ದೇವರು ಕಾಲಿಗೆ ಬೀಳುತ್ತಿರುವ ಫೋಟೋವನ್ನ ತನ್ನ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿದ ಫಯಾಜ್‌ನನ್ನು ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇನ್ನು ಇಂಥಹ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಾಕಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಭಜರಂಗದಳ ಮತ್ತು ಹಿಂದೂ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾಗಿದ್ದು, ಎನ್.ಆರ್.ಪುರ ಠಾಣೆಯ ಮುಂದೆ ಜಮಾಯಿಸಿದ ಹಿಂದುಪರ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ.

ಸದ್ಯ ಆರೋಪಿಯ ವಿಚಾರಣೆ ನಡೆಸುತ್ತಿರುವ ಪೊಲೀಸರು, ಯುವಕನ ಮೊಬೈಲನ್ನ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಹೆಚ್ಚಿನ ತನಿಖೆಗೆ ಸೈಬರ್ ಕ್ರೈಂಗೆ ನೀಡಲು ನಿರ್ಧರಿಸಿದ್ದಾರೆ. ಇನ್ನು ಆರೋಪಿ ಫಯಾಜ್ ಐ ಹೇಟ್ ಹಿಂದು ಎಂದು ಸ್ಟೇಟಸ್ ಹಾಕಿಕೊಂಡಿದ್ದು, ಈ ಬಗ್ಗೆ ಕೂಡ ವಿಚಾರಣೆ ನಡೆಸಾಗಿದೆ.

Next Story

RELATED STORIES