Top

ತುಮಕೂರು ವಿವಿಯಲ್ಲಿ ನೀರಿನ ಕೊರತೆ : ವಿದ್ಯಾರ್ಥಿಗಳ ಪಾಲಿಗೆ ಬಾಟಲಿ ನೀರೇ ಗತಿ.!

ತುಮಕೂರು ವಿವಿಯಲ್ಲಿ ನೀರಿನ ಕೊರತೆ : ವಿದ್ಯಾರ್ಥಿಗಳ ಪಾಲಿಗೆ ಬಾಟಲಿ ನೀರೇ ಗತಿ.!
X

ತುಮಕೂರು : ಜಿಲ್ಲೆಯಲ್ಲಿ ವಿವಿ ಪ್ರಾರಂಭವಾಗಿ ದಶಕಗಳೇ ಕಳೆದರೂ ದಿನ ನಿತ್ಯದ ಬಳಕೆಗೆ ನೀರಿನ ವ್ಯವಸ್ಥೆ ಇನ್ನು ಮಾಡಿಕೊಂಡಿಲ್ಲ. ಪರಿಣಾಮ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿಕೊಳ್ಳುವ ವಿವಿ ವರ್ಷವೊಂದಕ್ಕೆ 10 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆ. ಶಾಶ್ವತ ಮಾರ್ಗದ ಬಗ್ಗೆ ಚಿಂತನೆ ನಡೆಸದ ಅಧಿಕಾರಿಗಳು ನಿರ್ಲಕ್ಷದಿಂದಾಗಿ ಸರ್ಕಾರದ ಹಣ ನೀರು ಪಾಲಾಗುತ್ತಿದೆ.

ಶೈಕ್ಷಣಿಕ ನಗರಿ ತುಮಕೂರು ವಿವಿಯಲ್ಲಿ 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ತರಗತಿಗಳಲ್ಲಿ ವ್ಯಾಸಂಗ ಮಾಡ್ತಾ ಇದ್ದಾರೆ. ವಿವಿ ನಗರ ಹೃದಯಭಾಗದಲ್ಲಿದೆ ತನ್ನದೇ ಆದ ಬೃಹತ್ ಕ್ಯಾಂಪಸ್ ಕೂಡ ಹೊಂದಿದೆ. ಜೊತೆಗೆ ಸ್ವಚ್ಛಂದವಾದ ಉದ್ಯಾವನವಿದೆ. ಇಷ್ಟೇಲ್ಲಾ ಇದ್ರು ಕೂಡ ಬಹುಮುಖ್ಯವಾಗಿ ನೀರಿನ ಸರಿಯಾದ ವ್ಯವಸ್ಥೆಯಿಲ್ಲ. ಕುಡಿಯುವ ನೀರು ಸೇರಿದ್ದಂತೆ ದಿನನಿತ್ಯದ ಬಳಕೆಗೆ ಟ್ಯಾಂಕರ್ ನೀರೇ ವಿವಿಗೆ ಆಧಾರ.

ನೀರು ಖರೀದಿಗಾಗಿ ವರ್ಷವೊಂದಕ್ಕೆ ಲಕ್ಷ ರೂಪಾಯಿ ವೆಚ್ಚ ಮಾಡಿ ಅಚ್ಚರಿ ಮೂಡಿಸಿದೆ. 2017ರ ಶೈಕ್ಷಣಿಕ ವರ್ಷದಲ್ಲಿ ಟ್ಯಾಂಕರ್ ನೀರಿಗಾಗಿ ಬರೋ ಬರಿ 10,27,750 ರೂಪಾಯಿ ವ್ಯೆಯಿಸಿದೆ. ಕೇವಲ ನೀರಿಗಾಗಿಯೇ ವಿಶ್ವವಿದ್ಯಾನಿಲಯದ ಆಢಳಿತ ಮಂಡಳಿ ಇಷ್ಟೊಂದು ಮೊತ್ತದ ಹಣ ಖರ್ಚು ಮಾಡಿರೋದಿ ಸಹಜವಾಗಿ ಜನರಲ್ಲಿ ಚರ್ಚೆಗೆ ಕಾರಣವಾಗಿದೆ.

[story-lines]

ಟ್ಯಾಂಕರ್ ನೀರಿನ ಲಾಭಿಗೆ ಮಣಿದ ವಿವಿ ಅಧಿಕಾರಿಗಳು ಪರ್ಯಾಯ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಿಕೊಳ್ಳುವುದಕ್ಕೆ ಆಸಕ್ತಿವಹಿಸಿಲ್ಲಾ. ಕ್ಯಾಂಪಸ್ ನಲ್ಲಿ ಮೂರು ಕೊಳವೆಬಾವಿಗಳಲ್ಲಿ ಎರಡು ನಿಷ್ಕ್ರಿಯಗೊಂಡಿದೆ. ಒಂದು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಈ ಕೊಳವೆ ಬಾವಿಯಲ್ಲಿ ಕೇವಲ 1.5 ಇಂಚು ನೀರು ಲಭ್ಯವಾಗುತ್ತಿದೆ. ವಿವಿ ನಿರ್ವಹಣೆಗೆ ಇದು ಸಾಕಾಗುತ್ತಿಲ್ಲಾ. ಹಾಗಾಗಿ ಅನಿವಾರ್ಯವಾಗಿ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

ಆದ್ರೂ ಮಹಾನಗರ ಪಾಲಿಕೆಗೆ ನೀರಿನ ಸಂರ್ಪಕ ಕಲ್ಪಿಸುವಂತೆ ಒತ್ತಡ ಹೇರುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ನೆಪ ಮಾತ್ರಕ್ಕೆ ಅರ್ಜಿ ಕೊಟ್ಟು ಸುಮ್ಮನಾಗಿದ್ದಾರೆ. ಪಾಲಿಕೆಯವರು ಕೂಡ ನೀರಿನ ಸಂಪರ್ಕ ಕಲ್ಪಿಸುವ ಗೋಜಿಗೆ ಹೋಗಿಲ್ಲ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತುಮಕೂರು ಉಪಕುಲಪತಿ ಸಿದ್ದೇಗೌಡ ಶೀಘ್ರವಾಗಿ ಮಹಾನಗರ ಪಾಲಿಕೆಯಿಂದ ನೀರು ಸರಬರಾಜು ಮಾಡುವಂತೆ ಅಧಿಕಾರಿಗಳ ಜೊತೆಗೆ ಮಾತನಾಡುವುದಾಗಿ ಹೇಳಿದ್ದಾರೆ.

ಅಂದಾಜು 100 ಎಕರೆ ಕ್ಯಾಂಪಸ್ ಹೊಂದಿರುವ ತುಮಕೂರು ವಿವಿಯಲ್ಲಿ ಮಳೆಕುಯ್ಲು ವ್ಯವಸ್ಥೆಯನ್ನು ಆಳವಡಿಸಿಕೊಂಡರೆ ಸಾಕಷ್ಟು ನೀರಿನ ಲಭ್ಯವಾಗಲಿದೆ ಅನ್ನೋದು ತಜ್ಞನರ ಮಾತು.., ಮಳೆಕುಯ್ಲಿನಿಂದಾಗಿ ನಿಶ್ಕ್ರೀಯಗೊಂಡ ಕೊಳವೆಬಾವಿ ಕೂಡ ಮರು ಜೀವ ಪಡೆಯಲಿವೆ. ಈ ಕುರಿತು ಆಢಳಿತ ಮಂಡಳಿ ಇಚ್ಛಾಶಕ್ತಿ ತೋರಬೇಕಾಗಿದೆ.

ವರದಿ : ಟಿ.ಯೋಗೀಶ್, ಟಿವಿ5, ತುಮಕೂರು

Next Story

RELATED STORIES