Top

ಉರುಗ್ವೆ ಎ-1 ಟೀಮ್​: ಆತಿಥೇಯ ರಷ್ಯಾಗೆ ಸೋಲು

ಉರುಗ್ವೆ ಎ-1 ಟೀಮ್​: ಆತಿಥೇಯ ರಷ್ಯಾಗೆ ಸೋಲು
X

ಉರುಗ್ವೆ ತಂಡ 3-0 ಗೋಲುಗಳ ಸುಲಭ ಅಂತರದಿಂದ ಆತಿಥೇಯ ರಷ್ಯಾ ತಂಡವನ್ನು ಹೀನಾಯವಾಗಿ ಸೋಲಿಸಿ ಫಿಫಾ ವಿಶ್ವಕಪ್ ಟೂರ್ನಿಯ ಎ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಪ್ರೀಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಸೋಮವಾರ ನಡೆದ ಲೀಗ್​ನ ಅಂತಿಮ ಸುತ್ತಿನ ಪಂದ್ಯದಲ್ಲಿ ಉರುಗ್ವೆ ಪರ ಲೂಯಿಸ್ ಸುವಾರೆಜ್ (10ನೇ ನಿಮಿಷ), ಎಡಿಸನ್ ಕವಾನಿ (90ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರು.

ರಷ್ಯಾದ ಆಟಗಾರ ಡೇನಿಸ್ ಚೆರಿಶೆವ್ (23ನೇ ನಿಮಿಷ) ಸ್ವಯಂ ಗೋಲು ದಾಖಲಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಸ್ವಯಂ ಗೋಲು ದಾಖಲಿಸಿದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಪಾತ್ರರಾದರು.

Next Story

RELATED STORIES