Top

ಸಿದ್ದರಾಮಯ್ಯ ಭೇಟಿಗೆ ಕಾಡಿನ ಹಾದಿ ಹಿಡಿದ ಅಭಿಮಾನಿ : ಯಾಕೆ ಗೊತ್ತಾ.?

ಸಿದ್ದರಾಮಯ್ಯ ಭೇಟಿಗೆ ಕಾಡಿನ ಹಾದಿ ಹಿಡಿದ ಅಭಿಮಾನಿ : ಯಾಕೆ ಗೊತ್ತಾ.?
X

ಮಂಗಳೂರು : ಜಿಲ್ಲೆಯ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಳೆದ ನಾಲ್ಕು ದಿನಗಳಿಂದ ಆಯುರ್ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರಾಜಕೀಯ ಧಣಿವಿನಿಂದ ಕೊಂಚ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ನೋಡರು ಅಭಿಮಾನಿಗಳು, ಜಿಲ್ಲೆಯ ರಾಜಕಾರಣಿಗಳ ದಂಡೇ ದಿನೇ ದಿನೇ ನೆರೆಯುತ್ತಿದೆ.

ಈ ನಡುವೆ, ಅಭಿಮಾನಿಯೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡೋಕೆ ಮಾಡಿದ ಪ್ರಯತ್ನ ಫಲಿಸಲಿಲ್ಲ. ಸಿದ್ದರಾಮಯ್ಯ ಬಹುಬೇಗ ಮತ್ತೆ ರಾಜಕೀಯಕ್ಕೆ ಮರಳಬೇಕು ಎಂದು ಧರ್ಮಸ್ಥಳದಲ್ಲಿ ಶಿವಕುಮಾರ್ ಎಂಬುವರು ರುದ್ರಾಭಿಷೇಕ ಮಾಡಿಸಿದ್ದರು. ಹೀಗೆ ರುದ್ರಾಭಿಷೇಕ ಮಾಡಿಸಿದ ಪ್ರಸಾದವನ್ನು ಸಿದ್ದರಾಮಯ್ಯಗೆ ತಲುಪಿಸಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ಅಭಿಮಾನಿ ಶಿವಕುಮಾರ್ ಮಾಡಿದ ಪ್ರಯತ್ನ ಫಲ ಕೊಡಲಿಲ್ಲ.

ಹೀಗಾಗಿ ಪರ್ಯಾಯ ಮಾರ್ಗದ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರುದ್ರಾಭಿಷೇಕದ ಪ್ರಸಾದ ತಲುಪಿಸಲು ಶಿವಕುಮಾರ್ ಮುಂದಾಗಿದ್ದಾರೆ. ಇದಕ್ಕಾಗಿ ಪ್ರಸಾದವನ್ನು ಕೈಯಲ್ಲಿ ಹಿಡಿದಿರುವ ಶಿವಕುಮಾರ್, ಕಾಡಿನ ಹಾದಿ ಹಿಡಿದಿದ್ದಾರೆ. ಈ ಮೂಲಕ ಕಾಡಿನ ದಾರಿಯಲ್ಲಿ ಸಾಗಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಚಿಕಿತ್ಸೆ ಪಡೆಯುತ್ತಿರುವ ಪ್ರಕೃತಿ ಚಿಕಿತ್ಸಾ ಕೇಂದ್ರದೊಳಕ್ಕೆ ತೆರಳಿ, ರುದ್ರಾಭಿಷೇಕದ ಪ್ರಸಾದ ತಲುಪಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಶಿವಕುಮಾರ್, ಮೈಸೂರು ಮೂಲದವರಾಗಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕಟ್ಟಾ ಅಭಿಮಾಮಿಯಾಗಿದ್ದಾರೆ. ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿಯಾಗಿ ಕೆಲಸ ಮಾಡ್ತಾ ಇದ್ದಾರೆ. ಇಂತಹ ಶಿವಕುಮಾರ್ ರುದ್ರಾಭಿಷೇಕದ ಪ್ರಸಾದವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಲುಪಿಸಲು ಭದ್ರತಾ ಸಿಬ್ಬಂದಿಗಳು ನಿರಾಕರಿಸಿದ್ದಾರಂತೆ. ಹೀಗಾಗಿ, ಕಾಡಿನ ಹಾದಿಯ ಮೂಲಕ ಏಕಾಂಗಿಯಾಗಿ ಸಾಗುತ್ತಿರುವ ಶಿವಕುಮಾರ್, ಸಿದ್ದರಾಮಯ್ಯ ಭೇಟಿ ಮಾಡಿ ಪ್ರಸಾದ ತಲುಪಿಸ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

Next Story

RELATED STORIES