Top

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸುನೀಲ್

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಸುನೀಲ್
X

ಸ್ಯಾಂಡಲ್​ವುಡ್ ನಟ ಕಮ್ ಗಾಯಕ ಎಕ್ಸ್​ಕ್ಯೂಮಿ ಖ್ಯಾತಿಯ ಸುನೀಲ್ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಾನು ಮೆಚ್ಚಿದ ಹುಡುಗಿ ಶ್ರೇಯಾ ಐಯ್ಯರ್ ಜೊತೆ ಇಂದು ಅಗ್ನಿ ಸಾಕ್ಷಿಯಾಗಿ , ಗುರುಹಿರಿಯರ ಆರ್ಶಿವಾದೊಂದಿಗೆ ಮದುವೆಯಾಗಿದ್ದಾರೆ.

ಸುನೀಲ್ ರಾವ್ ಮದುವೆ ಆಗಿರುವ ಶ್ರೇಯಾ ಐಯ್ಯರ್ ವೃತ್ತಿಯಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿದ್ದಾರೆ. ಸುನೀಲ್ ಅಭಿನಯದ ವೆಬ್ ಸೀರಿಸ್ ಗೆ ಡಿಸೈನರ್ ಆಗಿ ಕೆಲಸ ಮಾಡಿದ್ದು ಸದ್ಯ 'ಟಕ್ಕರ್' ಚಿತ್ರಕ್ಕೂ ಇವರೇ ವಸ್ತ್ರ ವಿನ್ಯಾಸಕಿ. ಶ್ರೇಯಾ ಐಯ್ಯರ್ ಹಾಗೂ ಸುನೀಲ್ ರಾವ್ ಅವರಿಗೆ ವೆಬ್ ಸೀರಿಸ್ ಚಿತ್ರೀಕರಣದ ಸಮಯದಲ್ಲಿ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಈಗ ಇಬ್ಬರು ಮನೆಯವರ ಒಪ್ಪಿಗೆಯಿಂದ ದಂಪತಿಗಳಾಗುತ್ತಿದ್ದಾರೆ.

Next Story

RELATED STORIES