Top

ಭಾರತ ವಿರುದ್ಧ ಸ್ಪಾಟ್ ಫಿಕ್ಸಿಂಗ್‌ಗೆ ಆಹ್ವಾನ: ಪಾಕ್ ಆಟಗಾರನ ಸ್ಪೋಟಕ ಹೇಳಿಕೆ

ಭಾರತ ವಿರುದ್ಧ ಸ್ಪಾಟ್ ಫಿಕ್ಸಿಂಗ್‌ಗೆ ಆಹ್ವಾನ: ಪಾಕ್ ಆಟಗಾರನ ಸ್ಪೋಟಕ ಹೇಳಿಕೆ
X

ಕರಾಚಿ : 2015ರ ವಿಶ್ವಕಪ್ ವೇಳೆ ಟೀಂ ಇಂಡಿಯಾ ವಿರುದ್ಧ ಆಡುವಾಗ ತಮಗೆ ಸ್ಪಾಟ್​ ಫಿಕ್ಸಿಂಗ್ ಮಾಡುವಂತೆ ಆಹ್ವಾನ ಬಂದಿತ್ತು ಎಂದು ಪಾಕಿಸ್ತಾನ ಕ್ರಿಕೆಟ್​ ತಂಡದ ಆಟಗಾರ ಉಮರ್​ ಅಕ್ಮಲ್ ಗಂಭೀರ ಆರೋಪ ಮಾಡಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ತಂಡಗಳು ಅಡಿಲೇಡ್​ನಲ್ಲಿ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನ ವಿರಾಟ್​ ಕೊಹ್ಲಿ ಅವರ ಶತಕದ ನೆರವಿನಿಂದ ಟೀಂ ಇಂಡಿಯಾ 76 ರನ್​ಗಳಿಂದ ಗೆದ್ದಕೊಂಡಿತ್ತು.

ಇದೀಗ ಪಂದ್ಯಕ್ಕೂ ಮುನ್ನ ನಡೆದ ಘಟನೆ ಬಗ್ಗೆ ಮಾತನಾಡಿರುವ ಉಮರ್​ ಅಕ್ಮಲ್ ವಿಶ್ವಕಪ್​ ವೇಳೆ ಭಾರತ ವಿರುದ್ಧ ಆಡುವಾಗ ನನಗೆ ಆಫರ್​ ಒಂದು ಬಂದಿತ್ತು. ಎರಡು ಎಸೆತಗಳನ್ನ ಕೈಚೆಲ್ಲಿದರೆ 2 ಲಕ್ಷ ಡಾಲರ್ ಹಣ ಪಾವತಿ ಮಾಡುವುದಾಗಿ ಆಹ್ವಾನ ಬಂದಿತ್ತು. ನನ್ನ ನಿಷ್ಠೆ ಏನಿದ್ದರೂ ಪಾಕಿಸ್ತಾನಕ್ಕೆ ಮಾತ್ರ ನನ್ನನ್ನು ಮತ್ತೆ ಸಂಪರ್ಕಿಸಬೇಡಿ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ. ಉಮರ್ ಹೇಳಿಕೆ ಕ್ರಿಕೆಟ್​ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು ಪಿಚಿಬಿ ಮತ್ತು ಐಸಿಸಿ ತನಿಖೆ ಆರಂಭಿಸಿದೆ.

Next Story

RELATED STORIES