Top

ಇಸ್ಪಿಟ್ ಆಡಿ ಸಾಲ ಮಾಡಿಕೊಳ್ಳುತ್ತಾರಂತೆ ರೈತರು..!

ಇಸ್ಪಿಟ್ ಆಡಿ ಸಾಲ ಮಾಡಿಕೊಳ್ಳುತ್ತಾರಂತೆ ರೈತರು..!
X

ಬಾಗಲಕೋಟೆ: ರೈತರ ಸಾಲಮನ್ನಾ ವಿಚಾರವಾಗಿ ಬಾದಾಮಿಯಲ್ಲಿ ಮುಂಡರಗಿಯ ನಿಜಗುಣಾನಂದ ಸ್ವಾಮೀಜಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ನಿನ್ನೆ ರಾತ್ರಿ ಸ್ಮಶಾನದಲ್ಲಿ ನಡೆದ ಮರಣವೇ ಮಹಾನವಮಿ ಕಾರ್ಯಕ್ರಮದಲ್ಲಿ ವಿವಾದಿತ ಹೇಳಿಕೆ ನೀಡಿದ್ದು, 'ರೈತರು ಕುಮಾರಸ್ವಾಮಿ ಮುಂದೆ ಸಾಲಮನ್ನಾ ಮಾಡು ಎಂದು ದೇವರ ಮುಂದೆ ಕೇಳೋದು, ಅದಕ್ಕೆ ದೇವರು ನಿನಗೆ ಸಾಲ ಮಾಡು ಅಂತಾ ಹೇಳಿದವರು ಯಾರು ಎಂದು ಕೇಳೋದು, ನಾಲ್ಕು ಪ್ಯಾಂಟ್-ಶರ್ಟ್,1 ರೊಟ್ಟಿ,ಒಂದಿಷ್ಟು ಲೋಟಾ ಹಾಲು. ಮಲಗೋಕೆ ಅರ್ಧ ಮಂಚ ಈ ಕಡೆ ತಿರುಗಿದ್ರೆ ಆ ಕಡೆಯಿಲ್ಲ.60 ಆದ್ಮೇಲೆ ಶುಗರ್, ಬಿಪಿ ಬರುತ್ತದೆ. ನಿನಗೆ ಸಾಲ ಯಾಕೆ ಬಂತು?? ಇಸ್ಪೇಟ್ ಆಡೋದ್ರಿಂದ ಸಾಲ ಬಂತು, ವ್ಯಸನದಿಂದ ಸಾಲ ಬಂತು,ದೊಡ್ಡಸ್ಥನದಿಂದ ಸಾಲ ಬಂತು, ಈಗ ನೀನು ನೇಣು ಹಾಕೊಂಡ್ರೆ ನಾನೇನು ಮಾಡ್ಲಿ ಎಂದು ದೇವರು ಕೇಳ್ತಾನೆ' ಎನ್ನುವ ಮೂಲಕ ದೇವರು ಹಾಗೂ ರೈತರನ್ನು ಹೋಲಿಕೆ ತಾತ್ಪರ್ಯದಲ್ಲಿ ವಿವಾದಿತ ಹೇಳಿಕೆ ನೀಡಿದ್ದಾರೆ.

ಇನ್ನು ದೇವ್ರು ಎಲ್ಲಾ ಕಷ್ಟಕ್ಕೂ ಪರಿಹಾರ ಕೊಡುವುದಾಗಿದ್ರೆ, ರೈತರ ಸಾಲಮನ್ನಾಕ್ಕೂ ಪರಿಹಾರ ಕೊಡ್ಲಿ ನೋಡೋಣ. ಅದಕ್ಕೆ ಹಿತಮಿತದಲ್ಲಿ ಜೀವನ ನಡೆಸಬೇಕು'' ಎಂದು ಹೇಳಿ ಪರೋಕ್ಷವಾಗಿ ಸ್ವಾಮೀಜಿ ಸಾಲಮನ್ನಾ ವಿರೋಧಿಸಿದ್ರು.

Next Story

RELATED STORIES