Top

ಬಿಜೆಪಿಗರನ್ನು ಕಾಗೆ, ನರಿಗೆ ಹೋಲಿಸಿದ ಜೆಡಿಎಸ್ ಶಾಸಕ ಗೌರಿಶಂಕರ್

ಬಿಜೆಪಿಗರನ್ನು ಕಾಗೆ, ನರಿಗೆ ಹೋಲಿಸಿದ ಜೆಡಿಎಸ್ ಶಾಸಕ ಗೌರಿಶಂಕರ್
X

ತುಮಕೂರು : ಜಿಲ್ಲೆಯ ಗ್ರಾಮಾಂತರ ಕ್ಷೇತ್ರದಲ್ಲಿ ಗೆದ್ದು ಶಾಸಕರಾಗಿರುವ ಜೆಡಿಎಸ್‌ನ ಗೌರಿಶಂಕರ್ ಮಾಜಿ ಶಾಸಕ ಸುರೇಶ್ ಗೌಡ ಹಾಗೂ ಬಿಜೆಪಿಯನ್ನ ಆ ಕಾಗೆ ನರಿಗಳಿಗೆಲ್ಲಾ ಈ ಬಾರಿ ಅವಕಾಶ ಇಲ್ಲಾ ಅಂತಾ ತೆಗಳಿದ್ದಾರೆ.

ಜಿಲ್ಲೆಯ ಗ್ರಾಮಾಂತರ ಪ್ರದೇಶದ ಊಡಿ೯ಗೆರೆಯಲ್ಲಿ ಅಭಿನಂದನಾ ಸಮಾರಂಭದ ವೇಳೆ ಮಾತನಾಡಿದ ಜೆಡಿಎಸ್‌ ಶಾಸಕ ಗೌರಿಶಂಕರ್, ನಾನು ನಿಮಗೆ ಮುಂಚೆಯಿಂದ ಹೇಳ್ತಿದ್ದೆ. ಚಿಂತೆ ಮಾಡಬೇಡಿ ವಿರೋದಪಕ್ಷಗಳು ಏನೇ ಮಾಡಿಕೊಳ್ಳಲಿ. ನೂರರಷ್ಟು ಜೆಡಿಎಸ್ ಗೆಲ್ಲುತ್ತದೆ ಎಂದು ಮಾತುಕೊಟ್ಟಿದ್ದೆವು. ಅದೇ ರೀತಿ ಅವರನ್ನು ಮನೆ ಕಳಿಸೋ ಕೆಲಸ ಮಾಡಿದ್ದೇವೆ. ಈ ಬಾರಿಯ ಗೆಲುವಿಗೆ ಬೆನ್ನು ತಟ್ಟಿಕೊಂಡಿದ್ದಾರೆ. ಈ ಭಾಗದಲ್ಲಿ ಯಾವೋ ಒಂದಷ್ಟು ಕಾಗೆ ನರಿಗಳಿದ್ದವು. ಅವರಾಡಿದ್ದೇ ಆಟ, ಮಾಡಿದ್ದೇ ದರ್ಬಾರ್, ಮಾಡಿದ್ದೇ ಗೋಲ್‌ಮಾಲ್ ಆಗಿತ್ತು. ಇನ್ನೂ ಮುಂದೆ ಆ ಕಾಗೆನರಿಗಳಿಗೆಲ್ಲಾ ಅವಕಾಶ ಇಲ್ಲ. ಚಿಂತೆಮಾಡೋ ಅವಶ್ಯಕತೆ ಇಲ್ಲ ಅಂತಾ ಜೆಡಿಎಸ್ ಕಾಯ೯ಕತ೯ರ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡ್ರು.

ಇನ್ನು 25 ವರ್ಷಗಳ ಕಾಲ ತುಮಕೂರು ಗ್ರಾಮಾಂತರ ಜೆಡಿಎಸ್ ಭದ್ರಕೋಟೆ. ಈ ಕ್ಷೇತ್ರದಲ್ಲಿ, ಕೆಲವು ಅಧಿಕಾರಿಗಳಿಗೆ ಜಿಡ್ಡು ಹಿಡಿದಿದೆ. ಕೊಬ್ಬು ಜಾಸ್ತಿಯಾಗಿದೆ. ಅದನ್ನೆಲ್ಲ ಬಿಡಿಸಬೇಕು ಅಂದ್ರೆ ಸ್ವಲ್ಪ ಸಮಯಬೇಕು ಅಂತಾ ಅಧಿಕಾರಿಗಳ ಮೇಲೆ, ಶಾಸಕ ಗೌರಿಶಂಕರ್ ಅಬ್ಬರಿಸಿದರು.

ನಮ್ಮ ರೈತರು, ಬಡವರು. ತಾಲೂಕ್ ಅಫೀಸ್‌ಗೆ ಹೋದಾಗ ಗೌರವ ಸಿಗಬೇಕು. ಗೌರವ ಸಿಗಬೇಕಾದ್ರೆ ಅಧಿಕಾರಿಗಳ ಕೊಬ್ಬು ಜಾಸ್ತಿಯಾಗಿರೋದನ್ನ ಕಡಿಮೆ ಮಾಡಬೇಕಾಗಿದೆ. ಅನ್ನೋ ಮೂಲಕ ಮಾಜಿ ಶಾಸಕ ಸುರೇಶ್ ಗೌಡ ಬಳಿಕ ಹಾಲಿ ಶಾಸಕ ಗೌರಿಶಂಕರ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Next Story

RELATED STORIES