Top

ಮೋದಿ ಅಲ್ಲ, ಇಂದಿರಾ ಗಾಂಧಿ-ಹಿಟ್ಲರ್​...: ಜೇಟ್ಲಿ ಕಿಡಿ

ಮೋದಿ ಅಲ್ಲ, ಇಂದಿರಾ ಗಾಂಧಿ-ಹಿಟ್ಲರ್​...: ಜೇಟ್ಲಿ ಕಿಡಿ
X

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್​ಗೆ ಹೋಲಿಸುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಕೇಂದ್ರ ಹಣಕಾಸು ಸಚಿವ ಅರುಣ್​ ಜೇಟ್ಲಿ, ಹಿಟ್ಲರ್ ಮತ್ತು ಇಂದಿರಾ ಗಾಂಧಿ ಒಂದೆ ಎಂದು ತುರ್ತು ಪರಿಸ್ಥಿತಿಯ ಘಟನೆಯನ್ನು ಉಲ್ಲೇಖಿಸಿದ್ದಾರೆ.

1975ರ ತುರ್ತು ಪರಿಸ್ಥಿತಿ ದಿನಾಚರಣೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅರುಣ್ ಜೇಟ್ಲಿ, ಇಂದಿರಾ ಗಾಂಧಿ ಮತ್ತು ಹಿಟ್ಲರ್ ಇಬ್ಬರ ನಡವಳಿಕೆಯಲ್ಲೂ ಸಾಮ್ಯತೆ ಇತ್ತು ಎಂದಿದ್ದಾರೆ.

ಹಿಟ್ಲರ್ ಮತ್ತು ಇಂದಿರಾ ಗಾಂಧಿ ಎಂದೂ ಸಂವಿಧಾನದ ಪ್ರಕಾರ ನಡೆದುಕೊಳ್ಳಲೇ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇಬ್ಬರೂ ಸಾರ್ವಾಧಿಕಾರಿ, ಏಕ ವ್ಯಕ್ತಿಯ ಸರಕಾರವನ್ನಾಗಿ ಮಾಡಿದರು. ಹಿಟ್ಲರ್ ಪ್ರತಿಪಕ್ಷದ ಸದಸ್ಯರನ್ನು ಅಪಹರಿಸುವ ಮೂಲಕ ಸರಕಾರ ರಚನೆಗೆ ಮೂರನೇ ಒಂದರಷ್ಟು ಬಹುಮತ ಪಡೆಯುವ ಯತ್ನ ಮಾಡಿದ್ದರು ಎಂದು ಜೇಟ್ಲಿ ಆರೋಪಿಸಿದರು.

Next Story

RELATED STORIES