Top

ನಿರೀಕ್ಷೆ ಹೆಚ್ಚಿಸಿದ ಅಕ್ಷಯ್ ‘ಗೋಲ್ಡ್’ ಟ್ರೈಲರ್

ನಿರೀಕ್ಷೆ ಹೆಚ್ಚಿಸಿದ ಅಕ್ಷಯ್ ‘ಗೋಲ್ಡ್’ ಟ್ರೈಲರ್
X

ಬಾಲಿವುಡ್​ ಕಿಲಾಡಿ ಅಕ್ಷಯ್ ಕುಮಾರ್ ಸಿನಿಯಾನದಲ್ಲಿ ಮತ್ತೊಂದು ಮಹೋನ್ನತ ಚಿತ್ರ ಗೋಲ್ಡ್. ಭಿನ್ನ ಸಿನಿಮಾಗಳಿಂದ ಗಮನ ಸೆಳೆಯುತ್ತಿರುವ ಅಕ್ಷಯ್​ ಕುಮಾರ್ ಅವರ ಸ್ವಾತಂತ್ರ್ಯ ಪೂರ್ವದ ನೈಜ ಘಟನೆಗಳನ್ನು ಆಧರಿಸಿದ ಮತ್ತೊಂದು ಚಿತ್ರವೇ ಗೋಲ್ಡ್​.

ಪ್ಯಾಡ್ ಮ್ಯಾನ್ ಚಿತ್ರದ ನಂತರ ಅಕ್ಷಯ್ ಕುಮಾರ್ ಬೆಳ್ಳಿತೆರೆಯಲ್ಲಿ ಮಿಂಚಲಿರುವ ಸಿನಿಮಾವೇ ಗೋಲ್ಡ್​. 1948ರ ಲಂಡನ್​ ಒಲಂಪಿಕ್​ನಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದ ಭಾರತ ತಂಡದ ಹಿಂದಿನ ರೋಚಕ ಕಥೆ ಆಧರಿಸಿ ಮಾಡಿರುವ ಚಿತ್ರವಿದು​. ರೀಮಾ ಕಟ್ಗಿ ಕಲ್ಪನೆಯ ಪಾತ್ರಕ್ಕೆ ಹಾಕಿ ಕೋಚ್​ ಆಗಿ ಅಕ್ಷಯ್ ಕುಮಾರ್ ಜೀವ ತುಂಬಿದ್ದಾರೆ.

ಫಸ್ಟ್ ಲುಕ್ , ಪೋಸ್ಟರ್ , ಟೀಸರ್​ಗಳಿಂದ ಸದ್ದು ಮಾಡುತ್ತಿದ್ದ ಗೋಲ್ಡ್​ ಸಿನಿಮಾ ಈಗ ಟ್ರೈಲರ್​ನಿಂದ ಟಾಕ್​ ಆಫ್ ದಿ ಟೌನ್​​ಆಗಿದೆ. ಒಬ್ಬ ಕೋಚ್​ ಜೀವನದಲ್ಲಿ ಒಂದು ಗೆಲುವು ಎಷ್ಟು ಮುಖ್ಯ ಹಾಗೂ ಆ ಕಾಲಕ್ಕೆ ಹಾಕಿ ಆಡಲು ನಮ್ಮ ಭಾರತೀಯರ ಹೇಗೆಲ್ಲ ಕಷ್ಟ ಪಟ್ಟರು ಅನ್ನೋದನ್ನು ರೋಚಕಥೆಯನ್ನ ಗೋಲ್ಡ್ ಸಿನಿಮಾ ಹೇಳಲಿದೆ.

ಅಕ್ಷಯ್ ಕುಮಾರ್ ಜೊತೆಗೆ ಕುನಾಲ್ ಕಪೂರ್ , ಅಮಿತ್ , ಸನ್ನಿ, ಮೌನಿರಾಯ್ ಸೇರಿದಂತೆ ಅನೇಕ ಪ್ರತಿಭಾ ಶೀಲರು ಗೋಲ್ಡ್​ ಚಿತ್ರದ ತೂಕವನ್ನು ಹೆಚ್ಚಿಸಿದ್ದಾರೆ. ಟ್ರೈಲರ್ ಸೋಷಿಯಲ್ ಮೀಡಿಯಾದಲ್ಲಿ ಬಿಡುಗಡೆಯಾಗುತ್ತಿದಂತೆ ಸಖತ್ ವೈರಲ್ ಆಗಿದೆ. ಸ್ವಾತಂತ್ರ ದಿನಾಚರಣೆಯ ಸಂಭ್ರಮದಲ್ಲಿ ಈ ದೇಶಭಕ್ತಿ, ಸ್ಪೋರ್ಟ್ಸ್ ಡ್ರಾಮ ಗೋಲ್ಡ್ ತೆರೆಗೆ ಬರಲಿದೆ.

Next Story

RELATED STORIES