Top

ಮಳೆಗೆ ಕುಸಿದು ಬಿದ್ದ ಮಂಗಳೂರಿನ ಪಾಲ್ಗುಣಿ ಸೇತುವೆ

ಮಳೆಗೆ ಕುಸಿದು ಬಿದ್ದ ಮಂಗಳೂರಿನ ಪಾಲ್ಗುಣಿ ಸೇತುವೆ
X

ಮಂಗಳೂರು: ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆ ಹಾಗೂ ನದಿಯ ನೀರಿನ ರಭಸದಿಂದ ಮಂಗಳೂರು ಸಮೀಪದ ಪಾಲ್ಗುಣಿ ಸೇತುವೆ ಕುಸಿದುಬಿದ್ದಿದೆ.

ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಮುತ್ತೂರು ಬಳಿ ಸೇತುವೆ ಕುಸಿದು ಬಿದ್ದಿದ್ದು, ಮುತ್ತೂರು-ಮೂಲಾರಪಟ್ಣ ನಡುವಿನ ಸಂಪರ್ಕ ಕಡಿತಗೊಂಡಿದೆ.

ಮಂಗಳೂರು ತಾಲೂಕು ಹಾಗೂ ಬಂಟ್ವಾಳ ತಾಲೂಕಿನ ನಡುವೆ ಬರುವ ಈ ಸೇತುವೆ ಮಳೆ ಹಾಗೂ ನೀರಿನ ರಭಸಕ್ಕೆ ತುಂಡಾಗಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ವಾಹನ ಈ ಸೇತುವೆ ಮೇಲೆ ಚಲಿಸುತ್ತಿರಲಿಲ್ಲ. ಆದ ಕಾರಣ ಯಾವುದೇ ಅಪಾಯ ಆಗಿಲ್ಲ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Next Story

RELATED STORIES