Top

ಉಡುಪಿಯಲ್ಲಿ ಗಮನ ಸೆಳೆದ ಹಲಸು ಮೇಳೆ

ಉಡುಪಿಯಲ್ಲಿ ಗಮನ ಸೆಳೆದ ಹಲಸು ಮೇಳೆ
X

ಉಡುಪಿ : ಹೆಚ್ಚಿನ ಶ್ರಮವೂ ಇಲ್ಲದೆ ಬೆಳೆಯುವ, ನಿರ್ಲಕ್ಷಿತ ಫಲ ಹಲಸು. ಇದು ಬಡವರ ಹಣ್ಣೂ ಹೌದು. ಯಥೇಚ್ಛವಾಗಿ ಸಿಗೋ ಹಲಸಿನ ಹಣ್ಣು ಸರ್ವೋಪಯೋಗಿ ಕೂಡ. ಇಂತಹ ಹಲಸಿನ ಮೇಳವನ್ನು ಉಡುಪಿಯಲ್ಲಿ ತೋಟಗಾರಿಕಾ ಇಲಾಖೆ ಏರ್ಪಡಿಸಿತ್ತು. ಎರಡು ದಿನಗಳ ಕಾಲ ನಡೆದ ಮೇಳದಲ್ಲಿ ಹಲಸುಪ್ರಿಯರು ಮುಗಿಬಿದ್ದು ಹಲಸಿನ ವೈವಿಧ್ಯಮಯ ತಿನಿಸುಗಳನ್ನು ಚಪ್ಪರಿಸಿದ್ರು.

ಹಲಸಿನ ಹಪ್ಪಳ, ಗಾರಿಗೆ, ಮುಲ್ಕ, ಚಿಪ್ಸ್, ಉಡ್ಲುಂಗ, ಗಟ್ಟಿ, ಇಡ್ಲಿ, ಹಲಸಿನ ಬೀಜದ ಬರ್ಫಿ, ಹಲ್ವಾ, ಬೆರಟಿ, ಐಸ್ ಕ್ರೀ, ಅಬ್ಬಾ…ಒಂದೇ ಎರಡೇ…. ಉಡುಪಿಯಲ್ಲಿ ನಡೆದ ಹಲಸುಮೇಳದಲ್ಲಿ ಹಲಸಿನ ವೈವಿಧ್ಯಮಯ ರುಚಿಗಳ ಲೋಕವೇ ಅನಾವರಣಗೊಂಡಿತ್ತು.

ದೊಡ್ಡಣಗುಡ್ಡೆಯಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿರುವ ಹಲಸಿನ ಮೇಳದ ದೃಶ್ಯ ಇದು. ದುಬಾರಿಯಲ್ಲದ, ಬಡವರ ಕೈಗೂ ಎಟಕುವ ಹಣ್ಣುಗಳ ಪೈಕಿ ಹಲಸಿಗೆ ಮೊದಲ ಸ್ಥಾನ. ಇಂತಹ ಹಲಸಿನ ಹಣ್ಣಿನ ಮೇಳ ನಡೆದರೆ ಕೇಳಬೇಕೇ? ಹಲಸು ಪ್ರಿಯರು ಉಡುಪಿಯಲ್ಲಿ ನಡೆದ ಮೇಳಕ್ಕೆ ಲಗ್ಗೆ ಹಾಕಿ ವೆರೈಟಿ ಹಲಸಿನ ತಿಂಡಿಗಳನ್ನು ಸವಿದು ಖುಷಿಪಟ್ರು.

ಹೀಗೆ ವೈವಿಧ್ಯಮಯ ತಿನಿಸುಗಳ ಲೋಕವೇ ಮೇಳದಲ್ಲಿ ತೆರೆದುಕೊಂಡಿತ್ತು. ಮಕ್ಕಳು, ಮಹಿಳೆಯರು ವೃದ್ಧರಾದಿಯಾಗಿ ಎ್ಲಲ್ಲ ವಯಸ್ಸಿನವರನ್ನೂ ಈ ಮೇಳ ಸೂಜಿಗಲ್ಲಿನಂತೆ ಸೆಳೆದಿತ್ತು. ಬರೀ ತಿನಿಸುಗಳಷ್ಟೇ ಅಲ್ಲದೆ, ಹಲಸಿನ ವೈವಿಧ್ಯಮಯ ತಳಿಯ ಗಿಡಗಳೂ ಇಲ್ಲಿದ್ದವು. ಮನೆಯಲ್ಲೂ ಬೆಳೆಸಬಹುದಾದ ಹಲಸಿನ ತಳಿಗಳನ್ನು ಜನ ಖರೀದಿಸುವುದು ಕಂಡು ಬಂತು. ಜೊತೆಗೆ ಹಲಸು ಕೃಷಿಯ ಬಗ್ಗೆ ಪ್ರಾತ್ಯಕ್ಷಿಕೆ ಮತ್ತು ಮಾಹಿತಿ ನೀಡುವ ವ್ಯವಸ್ಥೆಯನ್ನೂ ಇಲಾಖೆ ಮಾಡಿತ್ತು.

ಒಟ್ಟಿನಲ್ಲಿ ನಗರದಲ್ಲಿ ಮಾಯವಾಗಿರುವ ಹಲಸುವಿನ ಕರಾಮತ್ತು ಮೇಳದದಲ್ಲಿ ಮತ್ತೆ ಮೇಲೈಸಿದ್ದು ಕಂಡುಬಂತು.. ಜೊತೆಗೆ ಮುಂಗಾರು ಮಳೆಯ ಹೊತ್ತಿಗೆ ಹಲಸಿನ ಘಮದೊಂದಿಗೆ ನಡೆದ ಈ ಮೇಳಕ್ಕೆ ಹಲಸುಪ್ರಿಯರ ಸ್ಪಂದನೆ ಜೋರಾಗಿತ್ತು.

ವರದಿ : ನಾಗರಾಜ್ ವರ್ಕಾಡಿ, ಟಿವಿ5 ಉಡುಪಿ

Next Story

RELATED STORIES