Top

ಬಿಜೆಪಿಯಲ್ಲಿ ವಿಎಸ್ ಟು ವಿಪಿ ಆಕಾಂಕ್ಷಿಗಳಲ್ಲಿ ಅಸಮಾಧಾನ

ಬೆಂಗಳೂರು : ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ಬಿಜೆಪಿ ಸದಸ್ಯರ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಆಕಾಂಕ್ಷಿಗಳ ಬೇಸರ ಇನ್ನೂ ತಣಿದಿಲ್ಲ.

ರಘುನಾಥ್ ರಾವ್ ಮಲ್ಕಾಪುರೆಗೆ ಮತ್ತೊಂದು ಅವಕಾಶ ನೀಡಿರೋದು ಮತ್ತು ಇತ್ತೀಚೆಗೆ ಪಕ್ಷಕ್ಕೆ ಬಂದ ಕೆ.ಪಿ.ನಂಜುಂಡಿಗೆ ಇಷ್ಟು ಬೇಗ ಅವಕಾಶ ಕೊಟ್ಟಿದ್ದಕ್ಕೆ ಪಕ್ಷದೊಳಗೆ ಅಸಮಾಧಾನ ಇನ್ನೂ ಸುಳಿದಾಡುತ್ತಿದೆ. ಈ ಅಸಮಾಧಾನ ಆರ್ ಎಸ್ ಎಸ್ ಮುಖಂಡರ ಬಳಿಗೂ ಹೋಗಿದೆ. ಬಿಜೆಪಿ ಮುಖಂಡರ ಅಹವಾಲನ್ನು ಆರ್ ಎಸ್ ಎಸ್ ಮುಖಂಡರು ಗಮನವಿಟ್ಟು ಕೇಳಿದ್ದಾರೆ.

ಐದು ಸ್ಥಾನಗಳಲ್ಲಿ ಬ್ರಾಹ್ಮಣ ಕೋಟಾದಲ್ಲಿ ಅವಕಾಶ ಕಲ್ಪಿಸಿಲ್ಲ ಎಂಬ ವಿಚಾರ ಕೂಡಾ ದೂರಿನ ರೂಪದಲ್ಲಿ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.ಮತ್ತೊಂದೆಡೆ ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಬೆಂಗಳೂರಿನ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದೇ ಹೇಳಲಾಗ್ತಿದೆ.

ಆಯ್ಕೆ ವೇಳೆ ರಘುನಾಥ್ ರಾವ್ ಮಲ್ಕಾಪುರೆ ಹೆಸರಿಗೆ ಅನಂತಕುಮಾರ್ ಬೆಂಬಲ ಸೂಚಿಸಿದ್ದರು. ಬೆಂಗಳೂರಿನಲ್ಲಿ ರಾಜಕೀಯ ಬೆಂಬಲ ಪಡೆದು, ಗೆದ್ದು ಕೇಂದ್ರ ಸಚಿವರಾದ ಅನಂತ್ ಕುಮಾರ್, ಈಗ ವಿಧಾನ ಪರಿಷತ್ ಸದಸ್ಯ ಸ್ಥಾನದ ವಿಚಾರದಲ್ಲಿ ಬೆಂಗಳೂರಿನ ನಾಯಕರ ಬೆಂಬಲಕ್ಕೆ ನಿಲ್ಲಲಿಲ್ಲ. ಬೀದರ್ ಜಿಲ್ಲೆಯ ರಘುನಾಥ್ ರಾವ್ ಮಲ್ಕಾಪುರೆಗೆ ಅನಂತ್ ಕುಮಾರ್ ಬೆಂಬಲ ಸೂಚಿಸಿದ್ದಾರೆ ಎಂದು ಅನಂತಕುಮಾರ್ ವಿರುದ್ಧ ಬೆಂಗಳೂರಿನ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

Next Story

RELATED STORIES