Top

ಗನ್ನಾಯಕನಹಳ್ಳಿ ಶಾಲೆಯಿಂದ ಊರಿನ ಬೀದಿಗಳಲ್ಲಿ ಜಾಗೃತಿ ಜಾಥ

ಗನ್ನಾಯಕನಹಳ್ಳಿ ಶಾಲೆಯಿಂದ ಊರಿನ ಬೀದಿಗಳಲ್ಲಿ ಜಾಗೃತಿ ಜಾಥ
X

ಚಿತ್ರದುರ್ಗ : ಸರ್ಕಾರಿ ಶಾಲೆಗಳೆಂದರೇ ಸಾಕು ಅನೇಕರು ಮಕ್ಕಳನ್ನು ಸೇರಿಸೋಕೆ ಮೂಗು ಮುರಿಯುವವರೇ ಜಾಸ್ತಿ. ಖಾಸಗೀ ಶಾಲೆಗಳ ಹಾವಳಿಯಿಂದಾಗ, ಸರ್ಕಾರಿ ಶಾಲೆಗಳು ಮರೆಯಾಗುತ್ತಿವೆ ಎಂಬ ಭಾವನೆ ಕಾಡುತ್ತಿದೆ. ಇಂತಹ ಹೊತ್ತಿನಲ್ಲಿ, ವಿದ್ಯಾಶಕ್ತಿ ಕಾರ್ಯಕ್ರಮದಡಿ ಗನ್ನಾಯಕನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ ಶಿಕ್ಷಕ "ದುರ್ಗದ ಚಿತ್ತ ಶಾಲೆಯತ್ತ" ಕಾರ್ಯಕ್ರಮ ಗಮನ ಸೆಳೆಯಿತು.

ಶಾಲೆಯ ಮಕ್ಕಳೊಂದಿಗೆ ಗ್ರಾಮದ ಬೀದಿ ಬೀದಿಗಳಲ್ಲಿ ಜಾಗೃತಿ ಜಾಥ ನಡೆಸಿದ ಶಿಕ್ಷಕರು, ವಿದ್ಯಾರ್ಜನೆಯ ಮಹತ್ವ ಸಾರಿದ್ದಲ್ಲದೇ, ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲಗೆ ಕಳುಹಿಸುವಂತೆ ಪೋಷಕರ ಮನವೊಲಿಸಿದರು. ಅಲ್ಲದೇ ಗ್ರಾಮದ ಮನೆ ಮನೆಗೆ ತೆರಳಿದ ಶಿಕ್ಷಕರು, ಅಕ್ಷರ ಜ್ಞಾನದ ಮಹತ್ವ, ವಿದ್ಯಾಭ್ಯಾಸದಿಂದ ಉಂಟಾಗುವ ಪ್ರಚೋಜನಗಳ ಬಗ್ಗೆ ಪೋಷಕರಿಗೆ ತಿಳಿ ಹೇಳಿದರು.

ಇದೇ ವೇಳೆ ದುಡ್ಡೇ ದೊಡ್ಡಪ್ಪ, ವಿದ್ಯೆಯೇ ಅವರಪ್ಪ, ಶಾಲೆಬಿಟ್ಟ ಮಕ್ಕಳನ್ನು ಶಾಲೆಗೆ ಸೇರಿಸಿ, ಹೆಣ್ಣೊಂದು ಕಲಿತರೇ ಶಾಲೆಯೊಂದು ತೆರೆದಂತೆ, ಬಾ ಬಾಲೆ ಶಾಲೆಗೆ, ಬಾ ಮರಳಿ ಶಾಲೆಗೆ, ಕಲಿತ ಹೆಣ್ಣು ಸಮಾಜ ಕಣ್ಣು, ನಿಮ್ಮ ಮಕ್ಕಳನ್ನು ಶಾಲೆಗೆ ಎಂಬ ಘೋಷಣೆ ಕೂಗಿದರು.

ಈ ವಿದ್ಯಾ ಶಕ್ತಿ ಕಾರ್ಯಕ್ರಮದಡಿ ನಡೆದ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ, ಬಡ್ತಿ ಮುಖ್ಯೋಪಾಧ್ಯಾಯರಾದಂತ ಸಿ.ನಾಗೇಂದ್ರಪ್ಪ, ಸಹ ಶಿಕ್ಷಕರಾದ ಎನ್.ಸಿದ್ದನಾಯಕ, ಕರಿಯಮ್ಮ, ಪ್ರೌಢ ಶಾಲೆಯ ಹಿರಿಯ ಶಿಕ್ಷಕರಾದ ಸಿ.ನಾಗರಾಜು, ಸೇರಿದಂತೆ ಇತರೆ ಶಿಕ್ಷಕರು ಪಾಲ್ಗೊಂಡಿದ್ದರು.

Next Story

RELATED STORIES