Top

ವೈದ್ಯೆಯ ಎಡವಟ್ಟಿಗೆ ಗರ್ಭಿಣಿಯ ಕೈ ಕಟ್

ವೈದ್ಯೆಯ ಎಡವಟ್ಟಿಗೆ ಗರ್ಭಿಣಿಯ ಕೈ ಕಟ್
X

ಬಾಗಲಕೋಟೆ: ವೈದ್ಯೆಯ ಎಡವಟ್ಟಿನಿಂದ ಗರ್ಭಿಣಿಯ ಬಲಗೈ ಕಟ್ ಆದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಇಲ್ಲಿನ ಇಲಕಲ್‌ನ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಡಾ.ಶೋಭಾ ಶ್ಯಾವಿ ಮಾಡಿದ ತಪ್ಪಿಂದ ಗರ್ಭಿಣಿ ಶಿಲ್ಪಾ ಭಜಂತ್ರಿ ಬಲಗೈ ತುಂಡಾಗಿದೆ. ಶಿಲ್ಪಾ ಕೈಗೆ ಗ್ಯಾಂಗ್ರೀನ್ ಆಗಿದ್ದು, ಎಡವಟ್ಟು ಮಾಡಿದ ವೈದ್ಯೆ ವಿರುದ್ಧ ಗರ್ಭಿಣಿ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಡವಟ್ಟು ಮಾಡಿದ ವೈದ್ಯೆ ಶೋಭಾ

ಜ್ವರ ಬಂದ ಹಿನ್ನೆಲೆಯಲ್ಲಿ ಶಿಲ್ಪಾ ಆಸ್ಪತ್ರೆ ಚಿಕಿತ್ಸೆಗೆಂದು ಬಂದಿದ್ದಾರೆ. ಆಗ ವೈದ್ಯೆ ಶೋಭಾ ಚಿಕಿತ್ಸೆ ನೀಡಿ, ಜ್ವರ ಕಡಿಮೆಯಾದ ಬಳಿಕ ಶಿಲ್ಪಾಗೆ ರಕ್ತ ಹಾಕಿದ್ದಾರೆ. ವೈದ್ಯೆಯ ಈ ನಿರ್ಲಕ್ಷ್ಯದಿಂದ ಶೋಭಾಗೆ ಗ್ಯಾಂಗ್ರೀನ್ ಉಂಟಾಗಿದ್ದು, ಸದ್ಯ ಕೆರೂಡಿ ಆಸ್ಪತ್ರೆಯಲ್ಲಿ ಗರ್ಭಿಣಿ ಚಿಕಿತ್ಸೆ ಪಡೆಯುತ್ತಿದ್ದು, ಗ್ಯಾಂಗ್ರೀನ್ ಚಿಕಿತ್ಸೆಗೆ 5ಲಕ್ಷ ರೂಪಾಯಿ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ.

Next Story

RELATED STORIES