Top

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುಂದುವರಿಯಲಿದೆ: ಜಾಮದಾರ್​

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಮುಂದುವರಿಯಲಿದೆ: ಜಾಮದಾರ್​
X

ಧಾರವಾಡ: ಸರ್ಕಾರಗಳು ಬರುತ್ತವೆ, ಹೋಗುತ್ತವೆ. ನಾಯಕರು ಬರುತ್ತಾರೆ, ಹೋಗುತ್ತಾರೆ. ಈಗಷ್ಟೇ ಲಿಂಗಾತಯ ಪ್ರತ್ಯೇಕ ಧರ್ಮದ ಹೋರಾಟ ಆರಂಭವಾಗಿದ್ದು, ಇನ್ನು ಮುಂದುವರೆಯಲಿದೆ ಎಂದು ಡಾ.ಶಿವಾನಂದ ಜಾಮದಾರ ಹೇಳಿದರು.

ಮುರುಘಾಮಠದಲ್ಲಿ ಭಾನುವಾರ ಆರಂಭಗೊಂಡ ಲಿಂಗಾಯತ ಧರ್ಮ ಚಿಂತನಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಗೆ ನಾವು ಪ್ರತ್ಯೇಕ ಧರ್ಮ ಮಾಡುತ್ತೇವೆ ಎಂಬ ನಂಬಿಕೆ ಇಲ್ಲ. ಬಿಜೆಪಿ ಈ ಹೋರಾಟಕ್ಕೆ ಬೆಂಬಲ ನೀಡಲಿಲ್ಲ. ಆದ ಕಾರಣ ಚುನಾವಣೆಯಲ್ಲಿ ಸೋಲುಂಡಿತು. ಆದರೆ ನಮ್ಮ ಬಳಿ ಸೂಕ್ತ ಸಾಕ್ಷ್ಯಾಧಾರಗಳಿವೆ. ಅದನ್ನು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಕಳೆದ ಬಾರಿ ಲಿಂಗಾಯತ ಹೋರಾಟಕ್ಕೆ ಹಲವು ರ‍್ಯಾಲಿಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಅವುಗಳನ್ನು ಚುನಾವಣಾ ಪ್ರಚಾರಕ್ಕಾಗಿ ಎಂದು ಬಿಂಬಿಸಲಾಗಿತ್ತು. ಈ ಹೋರಾಟ ಯಾವುದೇ ಪಕ್ಷಕ್ಕೆ ಸೀಮಿತವಾದುದ್ದಲ್ಲ ಎಂದು ಜಾಮದಾರ ಹೇಳಿದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ವಿರುದ್ಧ ಹರಿಹಾಯ್ದ ಡಾ. ಜಾಮದಾರ, ‘ಚುನಾವಣೆ ಸಂದರ್ಭದಲ್ಲಿ ಧರ್ಮ ಒಡೆಯಲಾಗುತ್ತಿದೆ ಎಂದು ಹೋದಲೆಲ್ಲಾ ಅಪಪ್ರಚಾರ ಮಾಡಿದರು. ಲಿಂಗಾತಯ ಧರ್ಮ ಒಡೆಯಲು ಬಿಡುವುದಿಲ್ಲ ಎಂದು ಇವರು ಹೇಳುತ್ತಾರೆ. ಹೀಗೆ ಮಾತನಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು. ಅವರೇನು ಪ್ರಧಾನ ಮಂತ್ರಿಯೋ ಅಥವಾ ಮುಖ್ಯಮಂತ್ರಿಯೇ?’ ಎಂದು ಪ್ರಶ್ನಿಸಿದರು.

‘ಇಂಥವರ ಅಪಪ್ರಚಾರವನ್ನೂ ಮೀರಿ ಗ್ರಾಮ, ತಾಲ್ಲೂಕು, ಪಟ್ಟಣ ಹಾಗೂ ನಗರ ಮಟ್ಟದಲ್ಲಿ ನಾವು ಸಂಘಟಿತರಾಗಬೇಕಿದೆ. ಲಿಂಗಾಯತ ಧರ್ಮ ಅಪಪ್ರಚಾರಕ್ಕೆ ಲಿಂಗಾಯತ ಧರ್ಮಕ್ಕೆ ಸೇರಿದ ಒಂದು ಪತ್ರಿಕೆ ಹಾಗೂ ಸುದ್ದಿವಾಹಿನಿ ಅಪಪ್ರಚಾರದಲ್ಲಿ ತೊಡಗಿರುವುದು ವಿಪರ್ಯಾಸ’ ಎಂದು ಡಾ. ಜಾಮದಾರ ಬೇಸರ ವ್ಯಕ್ತಪಡಿಸಿದರು.

Next Story

RELATED STORIES