Top

ಬಳ್ಳಾರಿಯ ವಿಮ್ಸ್‌ನಲ್ಲಿ ಔಷಧಿ ಕೋರತೆ : ಡೆಂಗ್ಯೂ ರೋಗಿಗಳ ಪರದಾಟ

ಬಳ್ಳಾರಿಯ ವಿಮ್ಸ್‌ನಲ್ಲಿ ಔಷಧಿ ಕೋರತೆ : ಡೆಂಗ್ಯೂ ರೋಗಿಗಳ ಪರದಾಟ
X

ಬಳ್ಳಾರಿ : ವಿಮ್ಸ್‍ಗೆ ಬರುವ ಶಂಕಿತ ಡೆಂಘೆ ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಅದರ ಜತೆಗೆ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತೀದ್ದು ಇದು ಸಾರ್ವಜನಿಕರ ನಿದ್ದೆಗೆಡಿಸಿದೆ. ಅಲ್ಲದೇ ರೋಗೊಗಳಿಗೆ ನೀಡಬೇಕಾದ ಕನಿಷ್ಠವಾದ ಸೌಲತ್ತು ನೀಡುವಲ್ಲಿ ವಿಮ್ಸ್ ವಿಫಲವಾಗಿದೆ. ಇನ್ನೂ ಡೆಂಘೀ ಬಂದ್ರೇ ಫಾಗಿಂಗ್ ಅದನ್ನು ಕೂಡಾ ಮಾಡಲಾಗುತ್ತೀಲ್ಲ ಕೇವಲ ಜಿಲ್ಲೆಯಲ್ಲಿ 10 ಲೀ ಮೆಲಾಥೀನ್ ಜೌಷಧವನ್ನು ವಿತರಿಸಲಾಗಿದೆ. ಜೌಷಧ ಕೋರತೆ ಜಾಸ್ತಿಯಾಗಿದ್ದು ಈ ಹಿನ್ನಲೆ ರೋಗಿಗಳು ಪರದಾಡುವಂತಾಗಿದೆ.

ಹೌದು ಬಳ್ಳಾರಿ ವಿಮ್ಸ್‍ಗೆ ಬರುವ ರೋಗಿಗಳಲ್ಲಿ ಡೆಂಘೆಯಿಂದ ಬಳಲುವವರ ಸಂಖ್ಯೆ ಹೆಚ್ಚಾಗ್ತಿದೆ. ಇನ್ನೂ, ಡೆಂಗ್ಯೂ ರೋಗವನ್ನು ಪತ್ತೆ ಹಚ್ಚುವಲ್ಲಿ ವಿಫಲವಾದರೆ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚು ಎಂದು ವೈದ್ಯರೇ ಹೇಳುತ್ತಾರೆ. ಸಾಂಕ್ರಾಮಿಕ ರೋಗವಾದ ಕಾರಣ ಇದು ದಿನೇ ದಿನೆ ಹೆಚ್ಚಾಗುತ್ತಿದೆ.ಇನ್ನೂ ಮಳೆಗಾಲ ಆರಂಭದಲ್ಲಿಯೇ ಡೆಂಗ್ಯೂ ಹೆಚ್ಚಾಗಿದೆ. ಇಲ್ಲಿ ನೆರೆಯ ಆಂಧ್ರಪ್ರದೇಶದ ಗುಂಟಕಲ್,ಗುತ್ತಿ,ಅನಂತಪೂರ.ಹಾಗೂ ಕರ್ನೂಲು ಜಿಲ್ಲೆಗಳ ರೋಗಿಗಳು ಇಲ್ಲಿಗೆ ಬರುತ್ತೀದ್ದಾರೆ.

ಆದ್ರೇ ವಿಮ್ಸ್ ಸಿಬ್ಬಂದಿಗಳು ಮಾತ್ರ ಜೌಷಧಗಳನ್ನು ಹೋರಗಿನಿಂದಲೇ ತರಿಸುತ್ತೀರುವದು ಮಾತ್ರ ರೋಗಿಯ ಸಂಬಂಧಿಕರನ್ನು ಕೆರಳುವಂತೆ ಮಾಡಿದೆ. ಇಲ್ಲಿ ಔಷಧಗಳ ಕೋರತೆಯಿದೆ ಹೀಗಾಗಿ ಹೋರಗಡೆ ತನ್ನಿ ಅಂಥಾ ವಿಮ್ಸ್ ಹೇಳಿದ್ರೇ ವಿಮ್ಸ್ ನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಔಷಧವಿದ್ರೂ ಕೂಡಾ ಹೋರಗಿನಿಂದ ಯಾಕೆ ತರಬೇಕೆನ್ನುವದು ನಾಗರೀಕರ ಪ್ರಶ್ನೆಯಾಗಿದೆ.

ಇಲ್ಲಿ ಡೆಂಗ್ಯೂ ಪೀಡಿತರಲ್ಲದೇ ಇತರ ಕಾಯಿಲೆಗಳಿಂದ ನರಳುವವರು ಇದ್ದಾರೆ.ಮೋದಲೇ ಅರ್ಧ ರೋಗದಿಂದ ನೊಂದಿರುವವರು ಇನ್ನೂ ವಿಮ್ಸ್‍ನ ಸಿಬ್ಬಂದಿಗಳು ಮಾಡುವ ಆಟಟೋಪದಿಂದ ಸಂಪೂರ್ಣ ನಲಗುವಂತಾಗಿದೆ.ಕಾಂಚಣಂ ಕಾರ್ಯ ಸಿದ್ದ ಅನ್ನುವಂತೆ ಇಲ್ಲಿ ಹಣವನ್ನು ಬಿಚ್ಚದಿದ್ರೇ ಚಿಕಿತ್ಸೆ ಸಿಗುವದು. ಇಲ್ಲವಾದಲ್ಲಿ ಚಿಕಿತ್ಸೆ ಕನಸಿನ ಮಾತಾಗಿದೆ. ಅದ್ರಲ್ಲೂ ವಿಮ್ಸ್ ಬರುವ ಔಷಧವನ್ನು ಹೋರಗಿನವರಿಗೆ ಮಾರಾಟ ಮಾಡಿ ಹೋರಗಿನಿಂದಲೇ ಔಷಧವನ್ನು ತರಿಸುವದು ವಿಮ್ಸ್‍ನ ಸಿಬ್ಬಂದಿಗಳ ಚಾಳಿಯಾಗಿ ಬಿಟ್ಟಿದೆ.ಬಡವರು ಇದರ ಬಗ್ಗೆ ಧ್ವನಿಯೇತ್ತಿದ್ರೆ ಸಾಕು ಅವರಿಗೆ ನೋ ಚಿಕಿತ್ಸೆ ಅನುವಂತಾಗಿದೆ.ಹೀಗಾಗಿ ನಮ್ಮ ಗೋಳನ್ನು ಯಾರು ಕೇಳ್ತಾರೆ ಅಂಥಾ ಬಡವರು ದಿಕ್ಕು ತೊಚದಂತಾಗಿದ್ದಾರೆ.

ಆದ್ರೆ, ವಿಮ್ಸ್‍ನ ಔಷಧ ಕೋರತೆಯ ರೋಗ ಸದ್ದಿಲ್ಲದೇ ಆವರಿಸುತ್ತೀದೆ. ಎಂಬ ಆಘಾತಕಾರಿ ಅಂಶ ಸರ್ಕಾರದ ಗಮನಕ್ಕಿದ್ದಂತೆ ಕಾಣುತ್ತಿಲ್ಲ. ಬಳ್ಳಾರಿಯ ವಿಮ್ಸ್‍ಗೆ ಬರುವ ಶಂಕಿತ ಡೆಂಘೆ ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಅಲ್ಲದೇ ಮಲೇರಿಯಾ ಅಂತಹ ರೋಗಕ್ಕೆ ನೀಡಬೇಕಾದ ಕನಿಷ್ಠವಾದ ಔಷಧೋಪಚಾರದ ಸೌಲತ್ತು ನೀಡುವಲ್ಲಿ ವಿಮ್ಸ್ ವಿಫಲವಾಗಿದೆ. ಸರ್ಕಾರ ಇತ್ತ ಗಮನ ಹರಿಸಿ ರೊಗಿಗಳ ಹಿತ ಕಾಪಾಡುವದು ಅಗತ್ಯವಾಗಿದೆ.

ವರದಿ : ವೆಂಕಟೇಶ ಕುಲಕರ್ಣಿ, ಟಿವಿ5 ಬಳ್ಳಾರಿ

Next Story

RELATED STORIES