Top

ಕೇನ್ ಹ್ಯಾಟ್ರಿಕ್​: ಪನಾಮಗೆ ಪಂಗನಾಮ ಹಾಕಿದ ಇಂಗ್ಲೆಂಡ್ ಪ್ರೀಕ್ವಾರ್ಟರ್​ಗೆ

ಕೇನ್ ಹ್ಯಾಟ್ರಿಕ್​: ಪನಾಮಗೆ ಪಂಗನಾಮ ಹಾಕಿದ ಇಂಗ್ಲೆಂಡ್ ಪ್ರೀಕ್ವಾರ್ಟರ್​ಗೆ
X

ಮಾಸ್ಕೊ: ನಾಯಕ ಹ್ಯಾರಿ ಕೇನ್ ಸಿಡಿಸಿದ ಫಿಫಾ ವಿಶ್ವಕಪ್-2018ರ ಮೊದಲ ಹ್ಯಾಟ್ರಿಕ್ ನೆರವಿನಿಂದ ಇಂಗ್ಲೆಂಡ್ ತಂಡ 6-1 ಗೋಲುಗಳಿಂದ ಪನಾಮಾ ತಂಡವನ್ನು ಬಗ್ಗುಬಡಿದು ಪ್ರೀಕ್ವಾರ್ಟರ್​ ಫೈನಲ್​ಗೆ ಅರ್ಹತೆ ಪಡೆಯಿತು.

ಭಾನುವಾರ ನಡೆದ ಬಿ ಗುಂಪಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಕೇನ್ ಮೊದಲ ಅವಧಿಯಲ್ಲಿ 2 ಹಾಗೂ ನಂತರ 1 ಗೋಲು ಬಾರಿಸಿ ಹ್ಯಾಟ್ರಿಕ್ ಗೌರವ ಪಡೆದರು. ಇದರೊಂದಿಗೆ ಪ್ರಸಕ್ತ ವಿಶ್ವಕಪ್​ನಲ್ಲಿ ಅತೀ ಹೆಚ್ಚು ಗೋಲು ಬಾರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ರೊಮೆಲೊ ಲುಕಾಕೊ ಅವರನ್ನು ಹಿಂದಿಕ್ಕಿದರು. ಹ್ಯಾರಿ ಕೇನ್ 2 ಪಂದ್ಯಗಳಿಂದ 5 ಗೋಲು ಬಾರಿಸಿ ಅತೀ ಹೆಚ್ಚು ಗೋಲು ಬಾರಿಸಿದವರ ಸಾಲಿನಲ್ಲಿ ಮುಂಚೂಣಿ ಸ್ಥಾನ ಪಡೆದರು.

ಇಂಗ್ಲೆಂಡ್ ಪರ ಹ್ಯಾರಿ ಕೇನ್ (22, 45+1, 62ನೇ ನಿಮಿಷ) 3, ಜಾನ್ ಸ್ಟೋನ್ಸ್ (8 ಮತ್ತು 40ನೇ ನಿಮಿಷ) 2 ಹಾಗೂ ಜೆಸ್ಸಿ ಲಿಂಗರ್ಡ್​ (34ನೇ ನಿಮಿಷ) ಒಂದು ಗೋಲು ದಾಖಲಿಸಿದರು. ಪನಾಮ ಪರ ಫಿಲಿಪ್ ಬೆಲೊಯಿ (78ನೇ ನಿಮಿಷ) ಏಕೈಕ ಗೋಲು ಬಾರಿಸಿದರು.

Next Story

RELATED STORIES