Top

ಬ್ರಹ್ಮಿಣಿ ಸ್ಟಿಲ್ಸ್ ಮುಚ್ಚಲು ಆದೇಶ: ಜನಾರ್ದನ ರೆಡ್ಡಿಗೆ 1000 ಕೋಟಿ ನಷ್ಟ?

ಬ್ರಹ್ಮಿಣಿ ಸ್ಟಿಲ್ಸ್ ಮುಚ್ಚಲು ಆದೇಶ: ಜನಾರ್ದನ ರೆಡ್ಡಿಗೆ 1000 ಕೋಟಿ ನಷ್ಟ?
X

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವಿವಾದಕ್ಕೀಡಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ ಬ್ರಹ್ಮಿಣಿ ಸ್ಟೀಲ್ಸ್​ ಸ್ಥಗಿತಗೊಳಿಸಲು ಆಂಧ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಈ ಬಗ್ಗೆ ರೆಡ್ಡಿ ಕರ್ನಾಟಕದ ಜನತೆಗೆ ಗೊತ್ತಾಗಬಾರದು ಅಂತಲೋ ಏನೋ ತೆಲುಗು ಪತ್ರಕರ್ತರಿಗಷ್ಟೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಆಂಧ್ರಪ್ರದೇಶದ ಕಡಪದಲ್ಲಿ ಜನಾರ್ದನ ರೆಡ್ಡಿ ಒಡೆತನದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಬ್ರಹ್ಮಿಣಿ ಸ್ಟೀಲ್​ ಪ್ಲಾಂಟ್​ ರದ್ದುಗೊಳಿಸಲು ಅಲ್ಲಿಯ ಸರ್ಕಾರ ನಿರ್ಧರಿಸಿದೆ. ಕೇಂದ್ರ ಸರ್ಕಾರ ಸ್ವಾಮ್ಯದ ಮೆಕ್ಕಾನ್​ ಸಂಸ್ಥೆ ನೀಡಿರುವ ವರದಿ ಅನ್ವಯ ಅಲ್ಲಿ ಕಬ್ಬಿಣದ ಅದಿರಿನ ಕೊರತೆ ಇದೆ. ಹೀಗಾಗಿ ಸ್ಟೀಲ್​ ಪ್ಲಾಂಟ್​ ಸ್ಥಾಪಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರನ್ವಯ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಬ್ರಹ್ಮಿಣಿ ಕೈಗಾರಿಕೆ ಸ್ಥಗಿತಗೊಳಿಸಲು ತೀರ್ಮಾನಿಸಿದ್ದಾರೆ.

ಆಂಧ್ರ ಸರ್ಕಾರದ ನಡೆದ ಬೇಸರಗೊಂಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ, ಗಣಿಗಾರಿಕೆಯನ್ನ ಸರ್ಕಾರವೇ ಬೇಕಾದರೆ ವಶಕ್ಕೆ ತೆಗೆದುಕೊಳ್ಳಲಿ. ಅದಕ್ಕೆ ಹೂಡಿಕೆ ಮಾಡಿರುವ ಹಣ ವಾಪಸ್​ ನೀಡಲಿ. ಇಲ್ಲವೇ ಕೈಗಾರಿಕೆ ಮುಂದುವರಿಸಲು ಆದೇಶ ನೀಡಲಿ. 4 ಸಾವಿರ ಕೋಟಿಗೂ ಅಧಿಕ ಮೊತ್ತದ ಕೈಗಾರಿಕೆ ಇದಾಗಿದ್ದು, ಈಗಾಗಲೇ 1 ಸಾವಿರದ 350 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದೇನೆ. ಇನ್ನೆರಡು ವರ್ಷಗಳಲ್ಲೇ ಕಾಮಗಾರಿ ಪೂರ್ಣಗೊಳಿಸುತ್ತೇನೆ. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುತ್ತದೆ ಅಂದರು.

ಆಂಧ್ರ ವಿಭಜನೆಗೂ ಮುನ್ನವೇ ಅಂದಿನ ಸಿಎಂ ವೈ.ಎಸ್​.ರಾಜಶೇಖರ್​ ರೆಡ್ಡಿ ಸ್ಟೀಲ್​ ಪ್ಲಾಂಟ್​ ಪ್ರಾರಂಭ ಕುರಿತು ಪ್ರಣಾಳಿಕೆಯಲ್ಲಿ ಘೋಷಿಸಿದ್ದರು. ಕೇಂದ್ರದ ಮೆಕ್ಕಾನ್​ ಸಂಸ್ಥೆ ಕೈಗಾರಿಕೆ ಸ್ಥಾಪನೆಗೆ ಗ್ರೀನ್​ ಸಿಗ್ನಲ್ ಸಹಾ​ ನೀಡಿತ್ತು. ಬಳ್ಳಾರಿಯಲ್ಲಿ 14 ದಶಲಕ್ಷ ಟನ್​ ಅದಿರು ಉತ್ಪಾದನೆ ಆಗುತ್ತಿರುವುದರಿಂದ, ಸ್ಟೀಲ್​ ಪ್ಲಾಂಟ್​ ಸ್ಥಾಪಿಸಬಹುದು ಎಂದು ಹೇಳಿತ್ತು. ಮೆಕ್ಕಾನ್​ ವರದಿಯಂತೆ ಪ್ಲಾಂಟ್​ ಕಾಮಗಾರಿ ಕೈಗೊಂಡಿತ್ತು.

ಇದೀಗ ಮೆಕ್ಕಾನ್​ ಸಂಸ್ಥೆ ಈಗ ಅದಿರು ಲಭ್ಯವಿಲ್ಲ ಎಂದು ವರದಿ ನೀಡಿದೆ. ಮೆಕ್ಕಾನ್​ ಇಬ್ಬಗೆ ನೀತಿ ಅನುಸರಿಸುತ್ತಿದೆ ಅಂತ ರೆಡ್ಡಿ ಆರೋಪಿಸಿದರು. ಅಲ್ಲದೇ ಕೇಂದ್ರದ ಜೊತೆ ಚಂದ್ರಬಾಬು ನಾಯ್ಡು ನಂಟು ಕಡಿದುಕೊಂಡ ನಂತರ ತಮ್ಮ ಕೈಗಾರಿಕೆಗೆ ಸಮಸ್ಯೆಯಾಗಿದೆ ಎಂದು ಪರೋಕ್ಷವಾಗಿ ಕಿಡಿಕಾರಿದರು.

ಒಟ್ಟಾರೆ ಆಂಧ್ರ ಸರ್ಕಾರದ ಆದೇಶದಿಂದ ಗಲಿಬಿಲಿಗೊಂಡಿರುವ ಜನಾರ್ದನ ರೆಡ್ಡಿ, ಇಕ್ಕಟ್ಟಿಗೆ ಸಿಲುಕಿದ್ದಾರೆ. ಅಕ್ರಮ ಗಣಿಗಾರಿಕೆ ಪ್ರಕರಣದ ನಂತ್ರ ರಾಜಕೀಯ ನೇಪಥ್ಯಕ್ಕೆ ಸರಿದಿರುವ ಅವ್ರಿಗೆ ಈಗ ಉದ್ಯಮದಲ್ಲೂ ಹಿನ್ನಡೆಯಾಗ್ತಿರೋದಂತು ಸತ್ಯ..

Next Story

RELATED STORIES