Top

ಮಾನವೀಯತೆ ಮರೆತು ಹಲ್ಲೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ

ಮಾನವೀಯತೆ ಮರೆತು ಹಲ್ಲೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ
X

ಚಿಕ್ಕಮಗಳೂರು: ಬಗರ್ ಹುಕಂ ಸಾಗುವಳಿ ಮಾಡುತ್ತಿದ್ದವರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಮಹಿಳೆಯರು, ಪುರುಷರು ಎಂದು ನೋಡದೇ ಹಿಗ್ಗಾಮುಗ್ಗ ಥಳಿಸುವ ಮೂಲಕ ಚಿಕ್ಕಮಗಳೂರಿನ ತರೀಕೆರೆಯ ಎಂ.ಸಿ. ಹಳ್ಳಿಯಲ್ಲಿ ಜರುಗಿದೆ.

ಪುರಷರು ಹಾಗೂ ಮಹಿಳೆಯರು ಸೇರಿದಂತೆ 8 ರೈತರು ಎಂ.ಸಿ.ಹಳ್ಳಿಯ ಸರ್ವೆ ನಂ 4 ರಲ್ಲಿ ಬಗರ್ ಹುಕಂ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರು. ಮೂರು ದಿನಗಳ ಹಿಂದೆ ಇವರ ಮೇಲೆ ಅರಣ್ಯ ಸಿಬ್ಬಂದಿ ಹಲ್ಲೆ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸುಮಾರು 45 ಕ್ಕೂ ಹೆಚ್ಚು ರೈತರು ಜಮೀನು ಮಾಡಿಕೊಂಡಿದ್ದು, ಮೂರು ದಿನದ ಹಿಂದೆ ಉಳುಮೆ ಮಾಡಲು ಹೋದ ರೈತರ ಕೃಷಿ ಸಲಕರಣೆ ನೇಗಿಲು ಕಿತ್ತುಕೊಂಡು ಹಲ್ಲೆ ಮಾಡಲಾಗಿದ್ದು, ಹಲ್ಲೆಯ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.

ಲಕ್ಕವಳ್ಳಿ ಉಪ ವಲಯ ಅರಣ್ಯ ಸಿಬ್ಬಂದಿ ಹಾಗೂ ಭದ್ರಾವತಿ ಎಂ.ಪಿ.ಎಂ ಅರಣ್ಯ ಸಿಬ್ಬಂದಿ ಮಹಿಳೆಯರ ಬಟ್ಟೆ ಹರಿಯುವ ಹಾಗೇ ಹಲ್ಲೆ ಮಾಡಿ ಮಾನವೀಯತೆ ಮರೆತು ನಡೆದುಕೊಂಡಿದ್ದಾರೆ. ಮೂವತ್ತು ವರ್ಷಗಳಿಂದ ಜಮೀನು ಕೃಷಿ ಮಾಡಿಕೊಂಡು ಬರುತ್ತಿದ್ದ ರೈತರ ಮೇಲೆ ಏಕಾಏಕಿ ಹಲ್ಲೆ ನಡೆದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

Next Story

RELATED STORIES