Top

ರೈತನಿಗೆ ಕಬ್ಬಿನ ಬಾಕಿ ಹಣ ಬಂತು : ಆದ್ರೇ ರೈತನ ಜೀವ ಉಳಿಯಲಿಲ್ಲ

ರೈತನಿಗೆ ಕಬ್ಬಿನ ಬಾಕಿ ಹಣ ಬಂತು : ಆದ್ರೇ ರೈತನ ಜೀವ ಉಳಿಯಲಿಲ್ಲ
X

ಬೆಳಗಾವಿ : ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆದಿದ್ದ ರೈತ ಅನಾರೋಗ್ಯದಿಂದ ಸಾವನ್ನಪ್ಪಿದ್ದಾನೆ. ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಕಬ್ಬಿನ ಬಾಕಿ ಬಿಲ್ ಕೈಗೆ ಬಂತಾದ್ರೂ. ರೈತನ ಜೀವ ಮಾತ್ರ ಉಳಿಲಿಲ್ಲ. ಮೃತ ರೈತನ ಮರಣೋತ್ತರ ಪರೀಕ್ಷೆಗೆ ಮುಂದಾದಾಗ ಜಿಲ್ಲಾಸ್ಪತ್ರೆಯಲ್ಲಿ ಹೌಡ್ರಾಮಾವೇ ನಡೆದು ಹೋಯಿತು.

ಕಬ್ಬಿನ ಬಾಕಿ ಬಿಲ್ ನೀಡದಕ್ಕೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಲಿಂಗಮಟ್ಟಿ ಗ್ರಾಮದ ರೈತ ಕುಟುಂಬವೊಂದು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪ್ರಧಾನಿ ಮತ್ತು ಸಿಎಂಗೆ ಪತ್ರ ಬರೆದಿದ್ದರು. ತಕ್ಷಣವೇ ಎಚ್ಚೆತ್ತುಕೊಂಡ ಬೆಳಗಾವಿ ಜಿಲ್ಲಾಡಳಿತ ರೈತನ ಕಷ್ಟ ಆಲಿಸಿತ್ತು, ಅಲ್ಲದೇ ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಶಂಕರ ಮತ್ತು ಆತನ ಪತ್ನಿ ಶಾಂತವ್ವನನ್ನ ಜಿಲ್ಲಾಸ್ಪತ್ರೆಗೆ ದಾಖಿಲಿಸಿ ಚಿಕಿತ್ಸೆ ಕೊಡಿಸಿದ್ರು. ಜತೆಗೆ ಸಕ್ಕರೆ ಕಾರ್ಖಾನೆಗಳಿಂದ ಬರಬೇಕಿದ್ದ 1 ಲಕ್ಷ 30 ಸಾವಿರ ರುಪಾಯಿ ಹಣವನ್ನು ಕೊಡಸಿದ್ರು. ಆದ್ರೆ ಇವತ್ತು ಚಿಕಿತ್ಸೆ ಫಲಿಸದ ಕಾರಣ ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಶಂಕರ ಮಾಟ್ಟೊಳಿ ಸಾವನ್ನಪ್ಪಿದ್ದಾನೆ..

ಇತ್ತ ರೈತ ಶಂಕರ ಸಾವನ್ನಪ್ಪುತ್ತಿದ್ದಂತೆ ಆತನ ಕುಟುಂಬಸ್ಥರ ಕಣ್ಣೀರು ಮುಗಿಲು ಮುಟ್ಟಿತ್ತು.. ಸಕ್ಕರೆ ಕಾರ್ಖಾನೆಗಳ ವಿಳಂಬ ನೀತಿಯಿಂದ ಇವತ್ತ ನಮ್ಮ ತಂದೆಯನ್ನ ಕಳೆದುಕೊಂಡಿದ್ದೇವೆ.. ಸಕಾಲದಲ್ಲಿ ಕಬ್ಬಿನ ಬಿಲ್ ಪಾವತಿಸಿದ್ದರೆ ನಮ್ಮ ತಂದೆ ಉತ್ತಮ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಕೈ ಬಾಕಿ ಹಣ ಬಂತೂ ಆದ್ರೆ ಜೀವವೇ ಹೋಯ್ತು ಅಂತಾ ಕಣ್ಣೀರು ಹಾಕಿದ್ರು.. ಅಲ್ಲದೇ, ಮೃತ ರೈತನ ಮರಣೋತ್ತರ ಪರೀಕ್ಷೆಗೆ ಆಸ್ಪ್ತತ್ರೆ ಸಿಬ್ಬಂದಿ ಮುಂದಾದಾಗ, ಹೈಡ್ರಾಮಾವೇ ನಡೆದು ಹೋಯ್ತು. ನಮ್ಮ ತಂದೆ ಆತ್ಮಹತ್ಯೆ ಯತ್ನಿಸಿಲ್ಲ.. ಅವರು ಅನಾರೋಗ್ಯದಿಂದ ಸತ್ತಿದ್ದಾರೆ.. ಹೀಗಾಗಿ ಮರಣೋತ್ತರ ಪರೀಕ್ಷೆಗೆ ಅವಕಾಶ ನೀಡುವುದಿಲ್ಲವೆಂದು ಆಕ್ರೋಶ ಹೊರಹಾಕಿದ್ರು. ಇನ್ನು ರೈತರ ಸಾವಿಗೆ ಸಕ್ಕರೆ ಕಾರ್ಖಾನೆಗಳೇ ಕಾರಣವೆಂದು ರೈತ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

ಒಟ್ಟ್ನಲ್ಲಿ ಆಸ್ಪತ್ರೆ ಸಿಬ್ಬಂದಿಗಳು ಪ್ರತಿಭಟನೆಗೆ ಮಣಿದು ಮರಣೋತ್ತರ ಪರೀಕ್ಷೆಯನ್ನ ಕೈಬಿಟ್ಟು ಮೃತದೇಹವನ್ನ ಕುಟುಂಬಸ್ಥರ ಕೈ ಒಪ್ಪಿಸಿದ್ದಾರೆ... ಸಕ್ಕರೆ ಕಾರ್ಖಾನೆಗಳು ರೈತಗೆ ಬಾಕಿ ಬಿಲ್ ಪಾವತಿಸದೇ ಚಲ್ಲಾಟವಾಡುತ್ತಿರುವುದರಿಂದ ಶಂಕನಂತಹ ಅದೇಷ್ಟೋ ರೈತ ಕುಟುಂಬಗಳ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಇನ್ನಾದ್ರು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಅನ್ನದಾರರಿಗೆ ಸಕ್ಕರೆ ಕಾರ್ಖಾನೆಗಳು ಮೋಸ ಮಾಡದಂತೆ ಎಚ್ಚರ ವಹಿಸಬೇಕಿದೆ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ

Next Story

RELATED STORIES