Top

ಬಜೆಟ್‌ ಕುರಿತು ಸಚಿವ ಬಂಡೆಪ್ಪ ಕಾಶಂಪೂರ್ ಮಠಾಧೀಶರೊಂದಿಗೆ ಚರ್ಚೆ

ಬಜೆಟ್‌ ಕುರಿತು ಸಚಿವ ಬಂಡೆಪ್ಪ ಕಾಶಂಪೂರ್ ಮಠಾಧೀಶರೊಂದಿಗೆ ಚರ್ಚೆ
X

ಬೀದರ್ : ಮೈತ್ರಿ ಸರ್ಕಾರದ ಮೊದಲ ಬಜೆಟ್ ಕುರಿತಾಗಿ ಇಂದು ಬೀದರ್ ನಲ್ಲಿಂದು ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಮಠಾಧೀಶರೊಂದಿಗೆ ಚರ್ಚೆ ನಡೆಸಿದ್ರು.

ನಗರದ ಓಲ್ಡ್ ಸಿಟಿಯಲ್ಲಿರುವ ಸಚಿವ ಬಂಡೆಪ್ಪ ಕಾಶಂಪೂರ್ ನಿವಾಸದಲ್ಲಿ ಸುಮಾರು 10ಕ್ಕೂ ಹೆಚ್ಚು ಮಠಾಧಿಶರು ಚರ್ಚೆಯಲ್ಲಿ ಭಾಗಿಯಾಗಿದ್ರು. ರಾಜ್ಯದ ರೈತರ ಹಿತ ದೃಷ್ಟೀಯಿಂದ ರಾಜ್ಯ ಬಜೆಟ್ ಮಂಡನೆ ಮಾಡುವಂತೆ ಮಠಾಧೀಶರು ಸಹಕಾರಿ ಸಚಿವ ಬಂಡೆಪ್ಪ ಕಾಶಂಪೂರ್ ಗೆ ಸಲಹೆ ನೀಡಿದ್ರು. ಇನ್ನು ಬಜೆಟ್ ನಲ್ಲಿ ರೈತರ ಸಂಪೂರ್ಣ ಸಾಲ ಮನ್ನ ಮಾಢುವಂತೆ ಸಲಹೆ ನೀಡಿದ್ರು.

ಸಭೆಯ ಬಳಿಕ ಟಿವಿ5ನೊಂದಿಗೆ ಮಾತನಾಡಿದ ಸಚಿವ ರೈತರ ಸಂಪೂರ್ಣ ಸಾಲ ಮನ್ನವನ್ನ ಏಕಕ ಕಾಲದಲ್ಲೇ ಮಡಲಾಗುವುದು ಎಂದು ತಿಳಿಸಿದ್ರು. ರೈತರಿಗೆ ಋಣಮುಕ್ತ ಪತ್ರ ನೀಡುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ ಹೀಗಾಗಿ ಏಕಕಲಾದಲ್ಲೇ ರೈತರ ಸಾಲಮನ್ನ ಮಾಡುತ್ತಾರೆ ಎಂದು ಹೇಳೀದ್ರು.

ಎರಡು ಹಂತದಲ್ಲಿ ಸಾಲಮನ್ನಾ ಮಾಡುತ್ತೇವೆ ಎಂದು ನೀಮಗೆ ಮುಖ್ಯಮಂತ್ರಿಗಳು ಹೆಳಿದ್ರಾ ಎಂದು ಟಿವಿ5 ಗೆ ಸಹಕಾರಿ ಸಚಿವ ಬಂಡೆಪ್ಪಾ ಕಾಶಂಪೂರ್ ಪ್ರಶ್ನೆ ಮಾಡಿದ್ರು. ಕಾಂಗ್ರೇಸ್ ಸರ್ಕಾರ ಈಗಾಗಲೇ ಬಜೆಟ್ ಮಂಡನೆ‌ಮಾಡಿದ್ದವರಾಗಿದ್ದಾರೆ ಅವ್ರ ಎಲ್ಲಾ ಸ್ಕಿಂ‌ಗಳನ್ನು ಉಳಿಸಿಕೊಂಡು ಹೋಗುವ ಚಿಂತನೆ ನಡೆದಿದೆ. ನಮ್ಮ ಪಕ್ಷದ ಗುರಿ‌ರೈತರ ಸಾಲ‌ಮನ್ನ ವಿಚಾರ ಹಾಗೂ ಗರ್ಬಿಣಿಯರಿಗೆ ತಿಂಗಳಿಗೆ ಆರು ಸಾವಿರಕೊಡುವ ಯೋಜನೆ ಇದೆ ಎಂದು ಪ್ರತಿಕ್ರಿಯೇ ನೀಡಿದ್ರು.

Next Story

RELATED STORIES