Top

ಕೊಹ್ಲಿ-ಅನುಷ್ಕಾಗೆ ನೋಟಿಸ್: ಅಪಮಾನ ಮಾಡಿದ್ದಕ್ಕೆ ತಿರುಗೇಟು

ಕೊಹ್ಲಿ-ಅನುಷ್ಕಾಗೆ ನೋಟಿಸ್:  ಅಪಮಾನ ಮಾಡಿದ್ದಕ್ಕೆ ತಿರುಗೇಟು
X

ಬಾಲಿವುಡ್ ನಟಿ ಅನುಷ್ಕಾ ಶರ್ಮ ಮತ್ತು ಪತಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋ ಹಾಕಿ ಅಪಮಾನಕ್ಕೆ ಒಳಗಾದ ವ್ಯಕ್ತಿ ನೋಟೀಸ್ ನೀಡಿದ್ದಾನೆ.

ಸ್ಟಾರ್ ದಂಪತಿಗಳಿಗೆ ನೋಟೀಸ್ ನೀಡಿದ ವ್ಯಕ್ತಿ ಮತ್ತಾರೂ ಅಲ್ಲ. ಇತ್ತೀಚೆಗೆ ಮುಂಬೈನ ರಸ್ತೆಯಲ್ಲಿ ಕಾರಿನಿಂದ ಹೊರಗೆ ಪ್ಲಾಸ್ಟಿಕ್ ಕವರ್ ಎಸೆದಿದ್ದಕ್ಕೆ ಅನುಷ್ಕಾ ಶರ್ಮ ಅವರಿಂದ ನಿಂದನಗೊಳಗಾದ ವ್ಯಕ್ತಿ. ಈತನ ಹೆಸರು ಅರನ್ ಸಿಂಗ್​.

ರಸ್ತೆಯಲ್ಲಿ ಪ್ಲಾಸ್ಟಿಕ್ ಕವರ್ ಬಿಸಾಡಿದ್ದನ್ನು ಅನುಷ್ಕಾ ಶರ್ಮ ಪ್ರಶ್ನಿಸಿದ್ದೂ ಅಲ್ಲದೇ ಅವಾಚ್ಯವಾಗಿ ನಿಂದಿಸಿದ್ದರು. ಇದನ್ನು ರೆಕಾರ್ಡ್ ಮಾಡಿದ್ದ ವಿರಾಟ್ ಕೊಹ್ಲಿ ಫೇಸ್​ಬುಕ್ ಮತ್ತು ಟ್ವೀಟರ್​ನಲ್ಲಿ ಹಾಕಿ ಪತ್ನಿಯನ್ನು ಕೊಂಡಾಡಿದ್ದರು. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು.

ಸದ್ಯಕ್ಕೆ ನಮ್ಮ ವಕೀಲರು ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾಗೆ ನೋಟೀಸ್ ಜಾರಿ ಮಾಡಿದ್ದಾರೆ. ಅವರ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದೇವೆ. ಆದ್ದರಿಂದ ನಾನು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಆರನ್ ಸಿಂಗ್ ಹೇಳಿದ್ದಾರೆ.

Next Story

RELATED STORIES