Top

ವಕ್ಫ್ ಇಲಾಖೆ ಜಾಗ ಒತ್ತುವರಿ : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

ವಕ್ಫ್ ಇಲಾಖೆ ಜಾಗ ಒತ್ತುವರಿ : ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ
X

ಚಿತ್ರದುರ್ಗ : ವಕ್ಫ್ ಇಲಾಖೆಗೆ ಸೇರಿದ ಆಸ್ತಿಯನ್ನ ಮುಸ್ಲೀಂ ಸಮುದಾಯದ ಸಾರ್ವಜನಿಕ ಕೆಲಸಗಳಿಗೆ ಮಾತ್ರ ಬಳಕೆ ಆಗಬೇಕು, ಯಾವುದೇ ಕಾರಣಕ್ಕೂ ಅದನ್ನ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡುವಂತಿಲ್ಲ ಎಂಬ ಸುಪ್ರೀಂ ಕೋರ್ಟ್ ಆದೇಶವೇ ಇದೆ, ಆದ್ರೆ ವಕ್ಫ್ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಜಾಗ ಒತ್ತೂವರಿ ಆಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆದರೂ ಇಲಾಖೆ ಅಧಿಕಾರಿಗಳು ಮಾತ್ರ ಜಾಣ ಕುರುಡು ಪ್ರದರ್ಶಿಸುತ್ತಿರುವುದಕ್ಕೆ ಸಮುದಾಯದವರಿಂದಲೇ ಆಕ್ರೋಶ ವ್ಯಕ್ತವಾಗಿದೆ.

ಕೋಟೆನಾಡು ಚಿತ್ರದುರ್ಗದ ಎಲ್ಐಸಸಿ ಆಫೀಸ್ ಹಿಂಬಾಗದಲ್ಲಿ ಹಲವು ದಶಕಗಳ ಹಿಂದೆಯೇ ವಕ್ಫ್ ಇಲಾಖೆಗೆ ಸೇರಿದ ಸುಮಾರು 8ಎಕರೆ ಅತಿ ಹೆಚ್ಚು ಬೆಲೆಬಾಳುವ ಜಮೀನಿದೆ. ಆದ್ರೆ ಈ ಜಾಗದಲ್ಲಿ 50 ವರ್ಷಗಳ ಹಿಂದೆ 1.7 ಎಕರೆಯಷ್ಟು ಜಾಗವನ್ನ ನಗರಸಭೆ ಅನಧಿಕೃತವಾಗಿ ಒತ್ತೂವಿ ಮಾಡಿಕೊಂಡಿದ್ದು, ಸರ್ಕಾರದಿಂದ ದಶಕಗಳ ಹಿಂದೆಯೇ ಪರಿಹಾರ ಹಣವನ್ನು ಮಂಜೂರು ಮಾಡಿದೆ. ಆದ್ರೆ ಇಲ್ಲಿನ ಅಧಿಕಾರಿಗಳು ಮಾತ್ರ ಮಂಜೂರಾಗಿರೋ ಪರಿಹಾರವನ್ನ ವಕ್ಫ್ ಮಂಡಳಿಗೆ ತೆಗೆದುಕೊಳ್ಳಲು ಯಾವುದೇ ಕ್ರಮ ಕೈಗೊಂಡಿಲ್ಲ. ಅಷ್ಟೇ ಅಲ್ಲದೆ ಇಲಾಖೆಗೆ ಸೇರಿದ ಆ ಜಾಗಕ್ಕೆ ಚಿನ್ನಕ್ಕಿಂತ ಹೆಚ್ಚಿನ ಬೆಲೆ ಸಿಗ್ತಿರೋದ್ರಿಂದ ಖಾಸಗಿ ವ್ಯಕ್ತಿಯೊಬ್ಬರು ನಕಲಿ ದಾಖಲೆ ಸೃಷ್ಟಿಸಿ ಸುಮಾರು 50*70ಅಡಿಯಷ್ಟು ನಿವೇಶನವನ್ನ ನಗರಸಭೆಯಲ್ಲಿ ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿರೋ ಆರೋಪ ಕೇಳಿ ಬಂದಿದೆ.

ವಾಸ್ತವ ಅಂದ್ರೆ ಒತ್ತೂವರಿಯಾಗಿರುವ ವಕ್ಫ್ ಆಸ್ತಿ ಇಲಾಖೆ ಹೆಸರಿನಲ್ಲಿಯೇ ಇದ್ದು, ಒತ್ತುವರಿ ಮಾಡಿಕೊಂಡವರಿಗೆ ಉಪ ನೊಂದಣಾಧಿಕಾರಿ ಕಚೇರಿಯಲ್ಲಿ ನೊಂದಣಿ ಆಗಿಲ್ಲ. ಈ ಕುರಿತು ನಗರಸಭೆ ಅಧಿಕಾರಿಗಳು ನಿವೇಶನ ಒತ್ತೂವರಿ ಮಾಡಿಕೊಂಡಿರುವ ಖಾಸಗಿ ವ್ಯಕ್ತಿಗೆ, ಮೂಲ ದಾಖಲೆ ಹಾಜರು ಪಡಿಸುವಂತೆ ನೋಟಿಸ್ ಜಾರಿ ಮಾಡಿದೆ. ಆದರೆ ವಕ್ಫ್ ಅಧಿಕಾರಿಗಳು ಅಕ್ರಮ ಒತ್ತುವರಿದಾರರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲಿಸದೆ. ಕೇವಲ ಒತ್ತುವರಿ ತೆರವು ಸೆಕ್ಷನ್ ಅಡಿಯಲ್ಲಿ ನ್ಯಾಯಾಲಯದಲ್ಲಿ ದಾವೆ ಹಾಕಿ ಕೈತೊಳೆದುಕೊಳ್ಳುವ ಮೂಲಕ ಒತ್ತೂವರಿ ಮಾಡಿಕೊಂಡಿರುವವರ ಜೊತೆ ಷಾಮೀಲಾಗಿದ್ದಾರೆ ಎಂದು ಸಮುದಾಯದ ಮುಖಂಡು ಆರೋಪಿಸಿದ್ದು, ಹಿರಿಯ ವಕೀಲರು ವಕ್ಫ್ ಅಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ.

ಇನ್ನೂ ವಕ್ಫ್ ಆಸ್ತಿ ಒತ್ತೂವರಿ ಆಗಿರೋದ್ರಿಂದ ಇಲಾಖೆಗೆ ಕೋಟ್ಯಾಂತರ ರೂಪಾಯಿ ನಷ್ಟ ಆಗಿದೆ ಅನ್ನೋ ಆರೋಪಗಳ ಬಗ್ಗೆ ಹಿರಿಯ ಅಧಿಕಾರಿಗಳ ಬಗ್ಗೆ ವಿವರಣೆ ಕೇಳಿದ್ರೆ, ನಗರಸಭೆ ಒತ್ತೂವರಿ ಮಾಡ್ಕೊಂಡಿರೋ 1.7ಎಕರೆ ಜಾಗದ ಬಗ್ಗೆ ನಮ್ಮಲ್ಲಿ ದಾಖಲೆಗಳೇ ಇಲ್ಲ. ಹೀಗಾಗಿ ನ್ಯಾಯಾಲಯಕ್ಕೆ ಹೋಗುವುದಕ್ಕಾಗಲೀ, ಅಥವಾ ಪರಿಹಾರ ಪಡೆದುಕೊಳ್ಳುವುದಕ್ಕಾಗಲೀ ನಮ್ಮ ಬಳಿ ದಾಖಲೆಗಳೇ ಇಲ್ಲ. ಇನ್ನೂ ಖಾಸಗಿ ವ್ಯಕ್ತಿ ಒತ್ತುವರಿ ಮಾಡಿಕೊಂಡಿರೋ ನಿವೇಶನವನ್ನ ತೆರವು ಮಾಡಿಕೊಡುವಂತೆ ಸೆಕ್ಷನ್54ರ ಅಡಿ ನ್ಯಾಯಾಲಯಕ್ಕೆ ಹೋಗಿದ್ದೇವೆ ಎಂದು ಸಮಜಾಯಿಷಿ ನೀಡಿದ್ದು, ರಾಜ್ಯ ವಕ್ಫ್ ಮಂಡಳಿ ಒತ್ತುವರಿ ಮಾಡಿಕೊಂಡವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಸೂಚನೆ ನೀಡಿದ್ರು, ನೀವು ಯಾಕೆ ಅಂತವರ ವಿರುದ್ದ ಕ್ರಿಮಿನಲ್ ಕೇಸ್ ಹಾಕಿಲ್ಲ ಅಂತ ಕೇಳಿದ್ರೆ ಉತ್ತರವಿಲ್ಲದೆ ತಡಬಡಾಯಿಸಿದ್ದಾರೆ.

ಒಟ್ಟಾರೆ ಇಲಾಖೆಗೆ ಸೇರಿದ ಆಸ್ತಿಪಾಸ್ತಿ ಮತ್ತು ದಾಖಲೆಗಳನ್ನು ರಕ್ಷಣೆ ಮಾಡಿ ಕಾಯ್ದಿಟ್ಟುಕೊಳ್ಳಬೇಕಾದ ಅಧಿಕಾರಿಗಳ ಬೇಜವಬ್ದಾರಿ ತನದಿಂದ, ಮಂಡಳಿಗೆ ಸೇರಿದ ಚಿನ್ನಕ್ಕಿಂತ ಬೆಲೆಬಾಳುವ ಆಸ್ತಿ ಪರರ ಪಾಲಾಗುತ್ತಿದೆ, ವಕ್ಫ್ ಆಸ್ತಿಯನ್ನ ಯಾರೂ ಕಬಳಿಸುವಂತಿಲ್ಲ ಎಂಬ ಸುಪ್ರೀ ಕೋರ್ಟ್‌ ನಿಯಮ ಇದ್ದರೂ, ಚಿತ್ರದುರ್ಗದಲ್ಲಿ ಮಾತ್ರ ಯಾರ ಭಯವೂ ಇಲ್ಲದೆ ವಕ್ಫ್ ಆಸ್ತಿ ಒತ್ತುವರಿ ಆಗ್ತಿದ್ರು, ಸಂಬಂಧಪಟ್ಟವರು ಮಾತ್ರ ಇತ್ತ ಗಮನಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದು, ಇದೀಗ ಹಿರಿಯ ವಕೀಲರ ನೇತೃತ್ವದ ತಂಡವೊಂದು ವಕ್ಫ್ ಆಸ್ತಿ ರಕ್ಷಣೆಗೆ ಮುಂದಾಗಿರೋದು ಸಮಾಧಾನದ ಸಂಗತಿ.

ವರದಿ : ವೀರೇಶ್ ವಿ ಚಳ್ಳಕೆರೆ, ಟಿವಿ5 ಚಿತ್ರದುರ್ಗ

Next Story

RELATED STORIES