Top

ವೈಯಕ್ತಿಕ ದ್ವೇಷಕ್ಕೆ ಕೋಳಿಗಳು ಬಲಿ.!

ವೈಯಕ್ತಿಕ ದ್ವೇಷಕ್ಕೆ ಕೋಳಿಗಳು ಬಲಿ.!
X

ಬೆಳಗಾವಿ : ವಯಕ್ತಿಕ ದ್ವೇಷಕ್ಕೆ ಕೋಳಿಗಳಿಗೆ ವಿಷವಿಕ್ಕಿ ಕೊಂದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಗುಂಡೊಳ್ಳಿ ಗ್ರಾಮದಲ್ಲಿ ನಡೆದಿದೆ.

ವಿಷಪ್ರಾಷಣದಿಂದ 20ಕ್ಕೂ ಹೆಚ್ವು ಕೋಳಿಗಳ ಸಾವನ್ನಪ್ಪಿವೆ. ಪಾವಲು ಫರ್ನಾಂಡೀಸ್ ಎಂಬ ವ್ಯಕ್ತಿಯಿಂದ ಕೃತ್ಯ ನಡೆದಿದೆ. ಸುಭಾಶ ಹರಿಜನ ಎಂಬ ದಲಿತ ಮುಖಂಡನಿಗೆ ಈ ಕೋಳಿಗಳು ಸೇರಿದ್ದು, ಗ್ರಾಮದ ದಲಿತರು ದುರ್ಗಾದೇವಿ ದೇವಸ್ಥಾನ ಕಟ್ಟುತ್ತಿರುವ ಜಾಗ ತನ್ನದೆಂದು ತಕರಾರು ತೆಗೆದಿರುವ ಫರ್ನಾಂಡೀಸ್.

ಆದ್ರೆ ದಲಿತರು ತಮ್ಮದೇ ಜಾಗವೆಂದು ದೇವಸ್ಥಾನ ಕಟ್ಟಡ ಮುಂದುವರೆಸಿರುವುದರಿಂದ ಕೋಪದಿಂದ ಕೃತ್ಯವೆಸಗಿದ್ದಾನೆ ಎಂದು ಸುಭಾಷ್ ಆರೋಪಿಸಿದ್ದಾನೆ. ಈ ಕುರಿತು ಖಾನಾಪುರ ಪೋಲಿಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Next Story

RELATED STORIES