Top

#ViralVideo : ಅನ್ನದ ತಟ್ಟೆಯಲ್ಲಿ ನೊಣಗಳ ಸಾಮ್ರಾಜ್ಯ

#ViralVideo : ಅನ್ನದ ತಟ್ಟೆಯಲ್ಲಿ ನೊಣಗಳ ಸಾಮ್ರಾಜ್ಯ
X

ಕೊಪ್ಪಳ: ಊಟ ಮಾಡುವಾಗ ನಮ್ಮ ತಟ್ಟೆಯ ಅಕ್ಕಪಕ್ಕ ಒಂದು ನೋಣ ಬಂತಂದ್ರೆ ಸಾಕು, ಊಟ ಮಾಡುವುದನ್ನು ಬಿಟ್ಟು ತಟ್ಟೆ ಸುತ್ತ ಸುತ್ತೋ ನೋಣವನ್ನು ಓಡ್ಸೋಕ್ಕೆ ಶುರು ಮಾಡ್ತೀವಿ ನಾವು. ಆದ್ರೆ ಇಲ್ಲೊಂದು ಕಡೆ ಊಟ ಮಾಡಬೇಕಾದ್ರೆ, ನೋಣ ಕಾಟವಿಲ್ಲದೇ ಊಟ ಮಾಡೋಕ್ಕೆ ಆಗೋದೆ ಇಲ್ಲ. ಈ ಕಾಟದಿಂದ ಹೇಗಾದ್ರೂ ಮುಕ್ತಿ ಕೊಡಿ ಅಂತಾ ಇಲ್ಲಿನ ಜನ ಸಿಎಂ ಕುಮಾರಸ್ವಾಮಿಯವರಿಗೆ ಮನವಿ ಮಾಡಿದ್ದಾರೆ.

[embedyt] https://www.youtube.com/watch?v=DzNO-Dt1-Sg[/embedyt]

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮಸ್ಥರಿಗೆ ಊಟ ಮಾಡುವಾಗ ನೋಣಗಳ ಕಾಟ ಜಾಸ್ತಿಯಾಗಿದೆ. ಕೋಳಿ ಫಾರಂ ಇರುವುದರಿಂದ ಅಲ್ಲಿನ ನೋಣಗಳು ಗ್ರಾಮಸ್ಥರು ಊಟ ಮಾಡುವ ತಟ್ಟೆಗಳ ಬಳಿ ಬಂದು ಮುತ್ತಿಕೊಳ್ಳುತ್ತಿದೆ. ಇದರಿಂದ ಸರಿಯಾಗಿ ಊಟ ಮಾಡಲಾಗದೇ ಗ್ರಾಮಸ್ಥರು ಪರದಾಡುವಂತಾಗಿದ್ದು, ಫೇಸ್‌ಬುಕ್‌ನಲ್ಲಿ ಈ ವಿಡಿಯೋವನ್ನ ಹಾಕಿ, ತಮ್ಮ ಕಷ್ಟವನ್ನ ತೋಡಿಕೊಂಡಿರುವ ಕಡೆಕೊಪ್ಪ ಗ್ರಾಮಸ್ಥ ವಿರೇಶ್, ವಿಡಿಯೋವನ್ನ ಸಿಎಂಗೆ ಟ್ಯಾಗ್ ಮಾಡಿದ್ದಾರೆ. ಈ ನೋಣಗಳ ಸಮಸ್ಯೆಯನ್ನ ಬಗೆಹರಿಸುವಂತೆ ಕೋರಿದ್ದಾರೆ.

Next Story

RELATED STORIES