Top

ಪತ್ನಿಯ ಅದೃಷ್ಟ ಚೆನ್ನಾಗಿತ್ತು, ಪತಿಯ ನಸೀಬು ಕೆಟ್ಟಿತ್ತು, ಅದ್ಕೆ ಹೀಗಾಯ್ತು

ಪತ್ನಿಯ ಅದೃಷ್ಟ ಚೆನ್ನಾಗಿತ್ತು, ಪತಿಯ ನಸೀಬು ಕೆಟ್ಟಿತ್ತು, ಅದ್ಕೆ ಹೀಗಾಯ್ತು
X

ಹಾವೇರಿ: ಪತಿ ತನ್ನ ಪತ್ನಿಯನ್ನ ನದಿಗೆ ದಬ್ಬಿ ಕೊಲೆಗೆ ಯತ್ನಿಸಿದ್ದು, ಯತ್ನ ವಿಫಲವಾಗಿ ಅದೃಷ್ಟವಶಾತ್ ಪತ್ನಿ ಬದುಕಿ ಬಂದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಮೂಲತಃ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದ ರೂಪೇಶ್‌ಗೌಡ ಈ ಕೃತ್ಯ ಎಸಗಿದ್ದು, ತನ್ನ ಪತ್ನಿ ಅರುಣಕುಮಾರಿಯನ್ನು ಈ ಭೂಪ ನದಿಗೆ ದಬ್ಬಿದ್ದಾನೆ. ಆದ್ರೆ ರೂಪೇಶ್ ನಸೀಬು ಹಾಳಾಗಿತ್ತೋ, ಅರುಣಕುಮಾರಿ ಅದೃಷ್ಟ ಚನ್ನಾಗಿತ್ತೋ ಗೊತ್ತಿಲ್ಲ. ನದಿಗೆ ಬಿದ್ದರೂ ಸಹ, ಆಕೆ ಬದುಕಿ ಬಂದಿದ್ದಾಳೆ.

ಪತ್ನಿಗೆ ಉಕ್ಕಡಗಾತ್ರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿದ ರೂಪೇಶ್, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿ ಸೇತುವೆಗೆ ಕರೆದುಕೊಂಡು ಹೋಗಿ, ನದಿಗೆ ದಬ್ಬಿದ್ದಾನೆ. ನದಿಯಿಂದ ಹೇಗೋ ದಡ ಸೇರಿದ ಅರುಣಕುಮಾರಿ ರಾತ್ರಿಯೆಲ್ಲಾ ನದಿಯ ಬಂಡೆ ಹಿಡಿದುಕೊಂಡೇ ಕಾಲ ಕಳೆದಿದ್ದಾಳೆ. ಮುಂಜಾನೆ ರಾಣೆಬೆನ್ನೂರು ತಾಲೂಕಿನ ಪತ್ತೆಪುರ ಗ್ರಾಮಸ್ಥರು ಆಕೆಯ ರಕ್ಷಣೆ ಮಾಡಿದ್ದಾರೆ. ಅಸ್ವಸ್ಥಳಾಗಿದ್ದ ಅರುಣಕುಮಾರಿಗೆ ರಟ್ಟಿಹಳ್ಳಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇನ್ನು ಈ ಬಗ್ಗೆ ರಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಅರುಣಾಕುಮಾರಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿ ರೂಪೇಶ್ ಕುಮಾರ್‌ನನ್ನು ಬಂಧಿಸಿದ್ದಾರೆ.

Next Story

RELATED STORIES