Top

ಗಂಗಾಧರ ನಿಗೂಢ ಹತ್ಯೆ ಪ್ರಕರಣ : ದಿನಕ್ಕೊಂದು ತಿರುವು

ಗಂಗಾಧರ ನಿಗೂಢ ಹತ್ಯೆ ಪ್ರಕರಣ : ದಿನಕ್ಕೊಂದು ತಿರುವು
X

ವಿಜಯಪುರ : ಭೀಮಾತೀರದ ಹಂತಕ ಗಂಗಾಧರ ನಿಗೂಢ ಹತ್ಯೆ ಪ್ರಕರಣ ಈಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಲಿದೆ. ಈಗ ನಾಗಠಾಣ ಶಾಸಕ ದೇವಾನಂದ ಚವ್ಹಾಣ ಮತ್ತೊಂದು ಸ್ಟೋಟಕ ಮಾಹಿತಿಯನ್ನ ಬಹಿರಂಗಗೊಳಿಸಿದ್ದಾರೆ. ಗಂಗಾಧರ ನಿಗೂಢ ಹತ್ಯೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಮಹಾದೇವ್ ಬೈರಗೊಂಡ ತಮಗೆ ಜೀವ ಬೆದರಿಕೆ ನೀಡಿದ್ದ ಎನ್ನುವ ಮೂಲಕ ಮತ್ತೊಮ್ಮೆ ರಾಜ್ಯದ ಜನತೆ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ತಲೆ ಹಾಕಿದ್ದ ನನಗೆ ಹಲವು ಬಾರಿ ಬೆದರಿಕೆ ಕರೆಗಳು ಬಂದಿವೆ ಎಂದಿದ್ದಾರೆ. ಈ ಮೂಲಕ ಭೀಮಾತೀರದ ರಕ್ತಚರಿತ್ರೆ ಮತ್ತೊಂದು ತಿರುವು ಪಡೆದುಕೊಂಡಿದೆ.

ಭೀಮಾತೀರದ ಹಂತಕ ಗಂಗಾಧರ ನಿಗೂಢ ಹತ್ಯೆ ಸಂಬಂಧ ಸಿಐಡಿ ತನಿಖೆ ಚುರುಕಿನಿಂದ ಸಾಗಿದೆ. ಆದ್ರೆ ಈ ಮಧ್ಯೆ ಭೀಮಾತೀರದ ಕುರಿತು ದಿನಕ್ಕೊಂದು ಸ್ಪೋಟ ಸುದ್ದಿಗಳು ಹೊರಬೀಳ್ತಿವೆ. ಅದ್ರಲ್ಲು ಭೀಮಾತೀರದ ನಾಗಠಾಣ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಭಯಾನಕ ಸಂಗತಿಯನ್ನ ಬಹಿರಂಗಗೊಳಿಸಿದ್ದಾರೆ. ಗಂಗಾಧರ ಹತ್ಯೆಯಲ್ಲಿ ಸಧ್ಯ ಎ1ಆರೋಪಿಯಾಗಿ ತಲೆ ಮರೆಸಿಕೊಂಡಿರುವ ಮಹಾದೇವ ಸಾಹುಕಾರ್ ಬೈರಗೊಂಡರಿಂದ ತಮಗೂ ಪ್ರಾಣ ಬೆದರಿಕೆ ಇತ್ತು ಎನ್ನುವ ಮೂಲಕ ರಾಜ್ಯದ ಜನತೆ ಮತ್ತೊಮ್ಮೆ ಬೆಚ್ಚಿ ಬೀಳುವಂತೆ ಮಾಡಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ದೇವಾನಂದ ಭೀಮಾತೀರದ ಅಕ್ರಮ ಮರಳು ದಂಧೆ ವಿಚಾರದಲ್ಲಿ ತಲೆ ಹಾಕದಂತೆ ಮಹಾದೇವ ಬೈರಗೊಂಡ ಬೆದರಿಕೆ ನೀಡಿದ್ದ.ಇದು ಶಾಸಕನಾಗಿ ಆಯ್ಕೆಯಾದ ಮೇಲು ಮುಂದುವರೆದಿತ್ತು.ಭೀಮಾತೀರದ ಮರಳು ದಂಧೆಗೆ ಕಡಿವಾನ ಹಾಕುವುದಾಗಿ ಹೇಳಿಕೆ ನೀಡಿದಾಗ ಮತ್ತಷ್ಟು ಬೆದರಿಕೆ ಕರೆಗಳು ಬಂದಿದ್ವು. ಲಾರಿ ಹರಿಸಿ ಸಾಯಿಸೋದಾಗಿ ಬೆದರಿಕೆ ಹಾಕಿದ್ದರು ಎಂದಿದ್ದಾರೆ.

ಇನ್ನು ತಮಗೆ ಪ್ರಾಣಕ್ಕೆ ಬೆದರಿಕೆ ಬಂದ ಮೇಲೆ ಈ ವಿಚಾರವನ್ನ ಆಗಿನ ಎಸ್ಪಿಯಾಗಿದ್ದ ಕುಲದೀಪ್ ಜೈನರ ಗಮನಕ್ಕು ತಂದಿದ್ದಾಗಿ ದೇವಾನಂದ ಹೇಳಿಕೊಂಡಿದ್ದಾರೆ. ಅಲ್ಲದೆ ಭೀಮಾತೀರದಲ್ಲಿ ಮರಳು ದಂಧೆಗೆ ತಲೆ ಹಾಕಿದವರ ಹತ್ಯೆಗಳು ನಡೆದು ಹೋಗಿವೆ. ಎಷ್ಟೋ ಜನರನ್ನ ಎಕ್ಸಿಡೆಂಟ್ ರೂಪದಲ್ಲಿ ಹತ್ಯೆಗಯ್ಯಲಾಗಿದೆ. ಇದೆಲ್ಲ ಪ್ರಕರಣ ಕುರಿತಾಗ್ಯೂ ಪೊಲೀಸ್ ಇಲಾಖೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಈಗಲೂ ತಮಗೆ ಭೀಮಾತೀರದ ಭಾಗದಿಂದ ಜೀವ ಬೆದರಿಕೆ ಇದೆ. ಸರ್ಕಾರ ನನಗೆ ಸೂಕ್ತ ಭದ್ರತೆ, ಗನ್ ಮೇನ್ ಗಳನ್ನ ನೀಡಬೇಕು ಅಂತ ಸಿಎಂ ಕುಮಾರಸ್ವಾಮಿ ಹಾಗೂ ಗೃಹ ಸಚಿವರಲ್ಲು ಮನವಿ ಮಾಡಿರೋದಾಗಿ ದೇವಾನಂದ ಹೇಳಿದ್ದಾರೆ. ಅಲ್ಲದೆ ಗಂಗಾಧರ ಹತ್ಯೆ ಪ್ರಕರಣದ ಜೊತೆ-ಜೊತೆಗೆ ಧರ್ಮರಾಜ್ ನ ಏನ್ ಕೌಂಟರ್ ಬಗ್ಗೆಯೂ ತನಿಖೆ ನಡೆಸಬೇಕಿದೆ ಎನ್ನುವ ಮೂಲಕ ಧರ್ಮನದ್ದು ನಕಲಿ ಎನ್ ಕೌಂಟರ್ ಅಂತ ಶಾಸಕ ದೇವಾನಂದ ನೇರ ಆರೋಪ ಮಾಡಿದ್ದಾರೆ.

ಮೊದಲೆ ಭೀಮಾತೀರದ ರಕ್ತಚರಿತ್ರೆಯಿಂದಾಗ ರಾಜ್ಯದ ಮಟ್ಟದಲ್ಲಿ ವಿಜಯಪುರ ಜಿಲ್ಲೆ ಹೆಸ್ರು ಕುಖ್ಯಾತಿಗೊಳಗಾಗಿತ್ತು. ಸಧ್ಯ ಗಂಗಾಧರ ನಿಗೂಢ ಹತ್ಯೆ ಪ್ರಕರಣವನ್ನ ಸಿಐಡಿ ಅಧಿಕಾರಿಗಳು ವಹಿಸಿಕೊಂಡ ಮೇಲೆ ಖಾಕಿಗಳ ಬಣ್ಣವು ಬೆಳಕಿಗೆ ಬಂದಿತ್ತು. ಒಟ್ಟಿನಲ್ಲಿ ದಿನದಿಂದ ದಿನಕ್ಕೆ ಭಯಾನಕ ಸಂಗತಿಗಳು ಹೊರಬೀಳ್ತಿದ್ದು, ಮುಂದೆ ಇದ್ಯಾವ ಹಂತವನ್ನ ತಲುಪುತ್ತೋ ಕಾದುನೋಡಬೇಕಿದೆ.

ವರದಿ : ಶರಣು ಮಸಳಿ, ಟಿವಿ5 ವಿಜಯಪುರ

Next Story

RELATED STORIES