Top

ಪೊಲೀಸರಿಗೆ ಮಳೆಯ ಭಯ : ಆಶ್ಚರ್ಯನಾ.? ಈ ಸುದ್ದಿ ಓದಿ

ಪೊಲೀಸರಿಗೆ ಮಳೆಯ ಭಯ : ಆಶ್ಚರ್ಯನಾ.? ಈ ಸುದ್ದಿ ಓದಿ
X

ಬೆಳಗಾವಿ : ಜನ ಸಾಮಾನ್ಯರಿಗೆ ರಕ್ಷಣೆ ನೀಡುವ ಪೊಲೀಸರಿಗೆ, ಈಗ ರಕ್ಷಣೆ ಇಲ್ಲದಂತಾಗಿದೆ. ಮಳೆ ಬಂದ್ರೆ ಸಾಕು ದಿನಾಲು ಆತಂಕ ಶುವಾಗತ್ತದೆ. ಆದ್ರೇ, ತಮ್ಮ ಪರಿಸ್ಥಿತಿ ಜನ ಸಾಮಾನ್ಯರಂತೆ ಮೇಲಾಧಿಕಾರಿಗಳ ಗಮನಕ್ಕೆ ತರುವದಕ್ಕೆ ಒದ್ದಾಡುತ್ತಿದ್ದಾರೆ. ಇವರ ಪರಿಸ್ಥಿತಿಯನ್ನು ಕಂಡ ಜನರು, ರಕ್ಷಣೆ ನೀಡುವ ಪೊಲೀಸರಿಗೆ ಹೀಗೆ ಆದ್ರೆ ಹೇಗೆ ನಮ್ಮಂತ ಗತಿ ಹೇಗೆ ಅಂತ ಜನರು ಮಾತನಾಡುತ್ತಿದ್ದಾರೆ. ಏನ್ ಅಂತೀರಾ..? ಮುಂದಿ ಓದಿ..

ಕಚೇರಿ ಮೇಲೆ ಹೊದಿಕೆ ಹೊರಿಸುತ್ತಿರುವ ಕಾರ್ಮಿಕರು. ಕೆಳಗೆ ನಿಂತು ಸರಿಯಾಗೆ ಹೊದಿಸರಪ್ಪಾ ಅಂತೆ ಹೇಳುತ್ತಿರುವ ಪೊಲೀಸ್ ಅಧಿಕಾರಿ. ಇದು ಯಾವುದೋ ಮನೆ ಅಲ್ಲ ಬದಲಾಗಿ ಸರ್ಕಾರಿ ಕಚೇರಿ. ಹೌದು ಇದು ಬೆಳಗಾವಿ ಪೊಲೀಸ್ ಆಯಕ್ತರ ಕಚೇರಿ. ಇಲ್ಲಿ ಮಳೆ ಬಂದ್ರೆ ಸಾಕು ಪೊಲೀಸ್ ಆಧಿಕಾರಿಗಳಿಗೆ ಹಾಗೂ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ಮಳೆ ನೀರಿನಿಂದ ತಪ್ಪಿಸಿಕೊಳ್ಳೆದೆ ಡೊಡ್ಡ ಕೆಲಸ್. ಮಳೆಯಲ್ಲಿ ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿಗಳ ಗೊಳು ಹೇಳ ತೀರದು.

ಮಳೆಯಲ್ಲಿ ಕಚೇರಿಯು ಸೋರುತ್ತಿದೆ. ಹಲವು ವರ್ಷಗಳಿಂದ ಮಳೆ ನೀರಿನಿಂದ ಆಯುಕ್ತರ ಕಚೇರಿ ಸೋರುತ್ತಿದೆ. ಹೀಗಾಗಿ ಮಳೆಯಿಂತ ತಪ್ಪಿಸಿಕೊಳ್ಳಲು ಕಚೇರಿ ಮೇಲೆ ಪ್ಲಾಸ್ಟಿಕ್ ಹೊದಿಕೆ ಹೊದಿಸಲಾಗಿದೆ. 120 ಅಡಿ ಅಗಲು ಹೊಂದಿದ ಮೂರು ಬೃಹತ್ ಪ್ಲಾಸ್ಟಿಕ್ ಹೊದಿಕೆ ಹೊದಿಸಲಾಗಿದೆ. ಹೀಗೆ ಬೆಳಗಾವಿ ಆಯುಕ್ತರ ಕಚೇರಿ, ಪೊಲೀಸ್ ಕಂಟ್ರೋಲ್ ರೂಮ್, ಸೇರಿಂದತೆ ಒಟ್ಟು ಮೂರು ಕಚೇರಿಗಳು ಮಳೆಯಲ್ಲಿ ಸೊರುತ್ತಿದೆ.

ಈಗಾಲೆ ಕಚೇರಿಗೆ ಹೊದಿಕೆ ಕಾರ್ಯವನ್ನು ಖಾಸಗಿ ಅವರಿಗೆ ಡೆಂಡರ್ ನೀಡಲಾಗಿದೆ. ಮೂರು ಕಚೇರಿಗೆ ಹೊದಿಕೆ ಮಾಡುತ್ತಿದ್ದಾರೆ.. ಇನ್ನು ಯಾಕ್ರಪ್ಪ ಆಯುಕ್ತರ ಕಚೇರಿಗೆ ಏನಾಗಿದೆ ಕೇಳಿದ್ರೆ ಮಳೆಗೆ ಸೋರುತ್ತಿದೆ ಹೀಗಾಗಿ ಪ್ಲಾಸ್ಟಿಕ್ ಹೊದೊಕೆ ಹೊದಿಸಲಾಗುತ್ತಿದೆ ಅಂತಾರೆ ಗುತ್ತಿಗೆದಾರರು.

ಇನ್ನು ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿ ಸ್ಥಾಪನೆಯಾಗಿ ಈಗಾ ಕೇವಲ ಮೂರು ವರ್ಷಗಳಾಯಿತು. ಈಗಾಗಲೆ ಈ ಕಟ್ಟದಲ್ಲಿಯೇ ಆಯುಕ್ತರ ಕಚೇರಿ ನಡೆಸುತ್ತಿರುವ ಇವರಿಗೆ ಸ್ವಂತ ಆಯುಕ್ತ ಕಚೇರಿ ಇಲ್ಲಾ. ಈ ಹಳೆಯ ಕಟ್ಟದಲ್ಲೇ ನಡೆಸುತ್ತಿದ್ದಾರೆ. ಸದ್ಯ ಈಗಿರುವ ಕಚೇರಿಯ ತುಂಬಾ ಹಳೆಯ ಕಟ್ಟಡವಾಗಿ ಸ್ವತಂತ್ರಕ್ಕೂ ಪೂರ್ವದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ.

ಬ್ರಿಟಿಷ ಸರ್ಕಾರದ ಆಡಳಿತದಲ್ಲಿದ್ದಾಗ ಇಲ್ಲಿ ಕುದುರೆಗಳನ್ನು ಕಟ್ಟಲಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ನಂತರದಲ್ಲಿ ಇಲ್ಲಿ ಮಹಾರಾಷ್ಟ್ರ ಪ್ರಾಂತ್ಯದದಲ್ಲಿ ಮುಂಬೈ ಕರ್ನಾಟದ ಭಾಗದ ಎಸ್ ಪಿ ಕಚೇರಿ ಇಲ್ಲಿ ನಡೆಸಲಾಗುತ್ತು ಎಂದು ಹೇಳಲಾಗುತ್ತಿದೆ.. ನಂತರದಿನ್ಲಲಿ ಈ ಕಳೇದ ಮೂರು ವರ್ಷಗಳಿಂದ ಬೆಳಗಾವಿ ಆಯುಕ್ತರ ಕಚೇರಿಯಾಗಿ ನಿರ್ಮಾಣವಾಯಿತು. ಇದಕ್ಕೆ ಸ್ವಂತ ಕಟ್ಟಡ ಇಲ್ಲದೇ ಆಯುಕ್ಷರು ಪರದಾಡುತ್ತಿದ್ದಾರೆ. ಮಳೆ ಬಂದ್ರೆ ಸಾಕು ಆತಂಕದಲ್ಲಿ ಪೊಲಿಸರು ಇದ್ದಾರೆ. ಹೀಗಾಗಿ ಪೊಲೀಸರಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿ ಕಚೇರಿ ಮತ್ತು ನಿವಾಸಗಳ ಅಭಿವೃದ್ದಿ ಮಾಡಬೇಕು ಎಂದು ಸ್ಥಳಿಯರು ಒತ್ತಾಯಿಸಿದ್ದಾರೆ.

ಒಟ್ಟಿನಲ್ಲಿ ಕಟ್ಟಡ ಇಲ್ಲದೇ ಹಳೆ ಕಟ್ಟಡದಲ್ಲಿ ಕಚೇರಿ ನಡೆಸುವುದು ಒಂದು ಸಮಸ್ಯೆ ಯಾದ್ರೆ, ಮಳೆ ಬಂದಾಗ ಸೊರುತ್ತದೆ ಅನ್ನೊ ಚಿಂತೆ ಇನ್ನೊಂದು ಕಡೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಸರಕಾರ ಇವರಿಗೆ ಕಚೇರಿಗೆ ಭದ್ರೆ ನೀಡಬೇಕಾಗಿದೆ.

ವರದಿ : ಶ್ರೀಧರ ಕೋಟಾರಗಸ್ತಿ, ಟಿವಿ5 ಬೆಳಗಾವಿ

Next Story

RELATED STORIES